ಈ 5G ಸ್ಮಾರ್ಟ್‌ಫೋನ್‌ ಮೇಲೆ ಹಿಂದೆದೂ ಕಾಣದ ರಿಯಾಯಿತಿ. !

POCO X4 Pro 5G discount Offer Details:   POCO X4 Pro 5G ಯ ​​ಜನಪ್ರಿಯ 5G ಸ್ಮಾರ್ಟ್‌ಫೋನ್‌ನಲ್ಲಿ  ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ.  ಫ್ಲಿಪ್‌ಕಾರ್ಟ್‌ನಿಂದ ಗ್ರಾಹಕರು ಈ ಫೋನ್ ಖರೀದಿಸುವ ಮೂಲಕ  ಉತ್ತಮ ಡೀಲ್‌ಗಳನ್ನು ಪಡೆದುಕೊಳ್ಳಬಹುದು. 

Written by - Ranjitha R K | Last Updated : Aug 5, 2022, 04:30 PM IST
  • POCO X4 Pro 5G ಫೋನ್ ಮೇಲೆ ಭಾರೀ ರಿಯಾಯಿತಿ
  • ಫ್ಲಿಪ್‌ಕಾರ್ಟ್‌ನಿಂದ ಖರೀದಿಸಿದರೆ ಸಿಗುವುದು ರಿಯಾಯಿತಿ
  • ಈ ಫೋನ್ ಮೇಲೆ ಉಳಿಸಬಹುದು ಸಾವಿರಾರು ರೂಪಾಯಿ
ಈ 5G ಸ್ಮಾರ್ಟ್‌ಫೋನ್‌ ಮೇಲೆ ಹಿಂದೆದೂ ಕಾಣದ ರಿಯಾಯಿತಿ. ! title=
POCO X4 Pro 5G discount Offer (file photo)

POCO X4 Pro 5G Discount Offer Details : POCO ಸ್ಮಾರ್ಟ್‌ಫೋನ್‌ಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದು ಮಾತ್ರವಲ್ಲ, ಅವುಗಳ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಕೂಡಾ ಬಳಕೆದಾರರೂ ಮೆಚ್ಚಿದ್ದಾರೆ. ಈ ಕಂಪನಿಯ X4 Pro 5G ಯ ​​ಜನಪ್ರಿಯ 5G ಸ್ಮಾರ್ಟ್‌ಫೋನ್‌ನಲ್ಲಿ  ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ.  ಫ್ಲಿಪ್‌ಕಾರ್ಟ್‌ನಿಂದ ಗ್ರಾಹಕರು ಈ ಫೋನ್ ಖರೀದಿಸುವ ಮೂಲಕ  ಉತ್ತಮ ಡೀಲ್‌ಗಳನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್‌ಫೋನ್‌ನಲ್ಲಿನ ರಿಯಾಯಿತಿ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. 

POCO X4 Pro 5G ನ ವೈಶಿಷ್ಟ್ಯಗಳು  : 
POCO X4 Pro 5G ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳ ಕುರಿತು  ಹೇಳುವುದಾದರೆ, ಗ್ರಾಹಕರು ಈ ಪ್ರಬಲ ಸ್ಮಾರ್ಟ್‌ಫೋನ್‌ನಲ್ಲಿ 6.67-ಇಂಚಿನ AMOLED ಡಿಸ್ಪ್ಲೇಯನ್ನು ಪಡೆಯುತ್ತಾರೆ. ಇದು 1080 x 2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಅದರ ರಿಫ್ರೆಶ್ ರೇಟ್  120Hz ಆಗಿದೆ. ಇನ್ನು ಪ್ರೊಸೆಸರ್ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ಆಕ್ಟಾ ಕೋರ್ ಕ್ವಾಲ್ಕಾಮ್ SM6375 ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಅನ್ನು ನೀಡಲಾಗಿದೆ, ಇದು ಹೆಚ್ಚಿನ ಕಾರ್ಯಕ್ಷಮತೆಯ ಪ್ರೊಸೆಸರ್ ಆಗಿದೆ. 

ಇದನ್ನೂ ಓದಿ : ಅಮೆಜಾನ್ ನಲ್ಲಿ Great Freedom Festival Sale ಆರಂಭ, ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ

ಈ ಫೋನ್ 6GB RAM ಮತ್ತು 64GB  ಸ್ಟೋರೇಜ್ ನೊಂದಿಗೆ ಬರುತ್ತದೆ. 108 ಮೆಗಾಪಿಕ್ಸೆಲ್‌ಗಳ ಹಪ್ರೈಮರಿ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತಾರೆ. ಸೆಲ್ಫಿಗಾಗಿ, ಈ ಸ್ಮಾರ್ಟ್‌ಫೋನ್‌ನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಸ್ಮಾರ್ಟ್‌ಫೋನ್ ನಲ್ಲಿ  5000mAh ಬ್ಯಾಟರಿಯನ್ನು  ನೀಡಲಾಗಿದ್ದು, ಅದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Poco X4 Pro 5G  ಫೋನ್ ಮೇಲಿನ ಆಫರ್ : 
ಈ ಫೋಜೆ ಮೇಲಿನ ಆಫರ್ ಬಗ್ಗೆ ಹೇಳುವುದಾದರೆ, ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 17,499 ರೂಗಳಿಗೆ Poco X4 Pro 5G ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಅದರ ಮೂಲ ಬೆಲೆ  23,999 ರೂ. ಈ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರಿಗೆ ಶೇಕಡಾ 27 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.  ಒಟ್ಟಿನಲ್ಲಿ ಈ ಫೋನ್ ಖರೀದಿಸುವ ಮೂಲಕ ಗ್ರಾಹಕರು ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. 

ಇದನ್ನೂ ಓದಿ : NASA Discovery: ಹೊಸ ಗ್ರಹವನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಟ್ವೀಟ್ ಮಾಡುವ ಮೂಲಕ 'ಸೂಪರ್ ಅರ್ಥ್' ಮಾಹಿತಿ ನೀಡಿದ ನಾಸಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News