OnePlus9ನಲ್ಲಿ ಸಿಗುತ್ತಿದೆ ಭಾರೀ Discount, 21 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಸ್ಮಾರ್ಟ್ ಫೋನ್

OnePlus 9 ರ 8GB RAM ಮತ್ತು 128GB ಸ್ಟೋರೇಜ್ ವೆರಿಯೇಂಟ್ ಬೆಲೆ 49,999 ರೂ. ಈ ಫೋನ್ ಮೇಲೆ ಅಮೆಜಾನ್‌ನಲ್ಲಿ  ಆಫರ್ ನೀಡಲಾಗುತ್ತಿದೆ. ಅಂದರೆ, ಅಮೆಜಾನ್ ನಲ್ಲಿ ಈ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು.

Written by - Ranjitha R K | Last Updated : Aug 24, 2021, 07:06 PM IST
  • OnePlus 9 ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು
  • ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಸಿಲಿದೆ OnePlus 9
  • 21 ಸಾವಿರ ರೂಪಾಯಿಯಷ್ಟು ಕಡಿಮೆ ಬೆಲೆಗೆ ಸಿಗಲಿದೆ ಈ ಫೋನ್
OnePlus9ನಲ್ಲಿ ಸಿಗುತ್ತಿದೆ ಭಾರೀ  Discount, 21 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ಬೆಲೆಯಲ್ಲಿ ಸಿಗಲಿದೆ ಸ್ಮಾರ್ಟ್ ಫೋನ್   title=
OnePlus 9 ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು (photo zee news)

ನವದೆಹಲಿ : ಐಫೋನ್ (iphone) ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳ ಫೋನ್‌ಗಳನ್ನು ಇಷ್ಟಪಡುವವರ ಸಂಖ್ಯೆ ಬಹಳಷ್ಟಿದೆ.  ಇದರ ಮಧ್ಯೆಯೇ  ಒನ್‌ಪ್ಲಸ್ ಫೋನ್‌ (One plus) ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒನ್‌ಪ್ಲಸ್ ಕಾಲಕಾಲಕ್ಕೆ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಒನ್‌ಪ್ಲಸ್ ಈ ವರ್ಷ ಏಪ್ರಿಲ್‌ನಲ್ಲಿ ಒನ್‌ಪ್ಲಸ್ 9 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಉತ್ತಮ ಕ್ಯಾಮೆರಾ, ಬ್ಯಾಟರಿ ಮತ್ತು ಉತ್ತಮ ಪ್ರೊಸೆಸರ್ ಹೊಂದಿದೆ. ಇನ್ನು ಅನ್ನು ಅತ್ಯಂತ ಅಗ್ಗದ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು.  

OnePlus 9 ನಲ್ಲಿ ಆಫರ್  ಮತ್ತು ರಿಯಾಯಿತಿಗಳು :
OnePlus 9 ರ 8GB RAM ಮತ್ತು 128GB ಸ್ಟೋರೇಜ್ ವೆರಿಯೇಂಟ್ ಬೆಲೆ 49,999 ರೂ. ಈ ಫೋನ್ ಮೇಲೆ ಅಮೆಜಾನ್‌ನಲ್ಲಿ  ಆಫರ್ ನೀಡಲಾಗುತ್ತಿದೆ. ಅಂದರೆ, ಅಮೆಜಾನ್ ನಲ್ಲಿ ಈ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸಬಹುದು. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ (HDFC Credit card) ಮೂಲಕ ಪೇಮೆಂಟ್ ಮಾಡಿದರೆ, 3,000 ರೂ.ಗಳ ರಿಯಾಯಿತಿ ಸಿಗಲಿದೆ. ಅಂದರೆ, 49,999 ರೂಗಳ ಫೋನ್ 46,999 ರೂ.ಗೆ ಸಿಗಲಿದೆ. 

ಇದನ್ನೂ ಓದಿ : Jio Recharge plan : ಇಷ್ಟು ಕಡಿಮೆ ದರದಲ್ಲಿ ಸಿಗುತ್ತಿದೆ ನಿತ್ಯ 2GB ಇಂಟರ್ನೆಟ್ , ಅನ್ ಲಿಮಿಟೆಡ್ ಕಾಲಿಂಗ್

ಇದರ ಹೊರತಾಗಿ, ಎಕ್ಸ್ಚೇಂಜ್ ಆಫರ್ (Exchange offer) ಕೂಡ ಇರಲಿದೆ. ಹಳೆಯ ಫೋನ್ ಎಕ್ಸ್ಚೇಂಜ್ ಮಾಡುವುದಾದರೆ, 18,150 ರೂ. ರಿಯಾಯಿತಿ ಪಡೆಯಬಹುದು. ನಿಮ್ಮ ಹಳೆಯ ಫೋನಿನ ಸ್ಥಿತಿ ಉತ್ತಮವಾಗಿದ್ದರೆ, ಎಕ್ಸ್ಚೇಂಜ್ ಮೇಲೆ ಕೂಡಾ ಒಳ್ಳೆಯ ಆಫರ್ ಪಡೆಯಬಹುದು. ಈ ರೀತಿಯಾಗಿ, ಒನ್‌ಪ್ಲಸ್ 9  (Oneplus 9) ಮೇಲೆ 21 ಸಾವಿರ ರೂಪಾಯಿಗಳಷ್ಟು ರಿಯಾಯಿತಿ ಸಿಗಲಿದೆ. 

ಒನ್‌ಪ್ಲಸ್ 9ರ ವಿಶೇಷತೆಗಳು :
ಒನ್‌ಪ್ಲಸ್ 9, 6.55-ಇಂಚಿನ HD + AMOLED ಡಿಸ್‌ಪ್ಲೇ ಹೊಂದಿದೆ. 120Hzನ ರಿಫ್ರೆಶ್ ರೇಟ್ ಫೋನ್ ಗಳಲ್ಲಿ ಲಭ್ಯವಿದೆ. ಡಿಸ್ಪ್ಲೇ  ಪ್ರೊಟೆಕ್ಟ್ ಮಾಡಲು, ಗೊರಿಲ್ಲಾ ಗ್ಲಾಸ್ ಅನ್ನು ನೀಡಲಾಗುತ್ತಿದೆ. ಒನ್‌ಪ್ಲಸ್ 9 ರಲ್ಲಿ, ನಿಮಗೆ ವಿಶೇಷವಾದ Snapdragon 888 chipset ನೀಡಲಾಗಿದೆ. OnePlus 9 ರಲ್ಲಿ 12 ಮತ್ತು 256 ಜಿಬಿಯ ಗರಿಷ್ಠ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ.

ಇದನ್ನೂ ಓದಿ : Samsung Galaxy Z Fold3 5G ಸ್ಮಾರ್ಟ್‌ಫೋನ್ ಮೇಲೆ 7000 ರೂ.ವರೆಗೆ ಡಿಸ್ಕೌಂಟ್

ಒನ್‌ಪ್ಲಸ್ 9 ಕ್ಯಾಮೆರಾ :
ಒನ್‌ಪ್ಲಸ್ 9ರಲ್ಲಿ 48 ಎಂಪಿಯ ಪ್ರೈಮರಿ ಕ್ಯಾಮೆರಾ ಇರುತ್ತದೆ. ಇದು ಸೋನಿ IMX689 ನ ಸೆನ್ಸಾರ್ ಅನ್ನು ಹೊಂದಿದೆ. ಅಲ್ಲದೆ, ಕ್ಯಾಮೆರಾ 8K ಮತ್ತು 4K ವಿಡಿಯೋ ರೆಕಾರ್ಡಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಕ್ಯಾಮೆರಾದಲ್ಲಿ, ನಿಮಗೆ 50MP ಅಲ್ಟ್ರಾ-ವೈಡ್ ಆಂಗಲ್ ಸೆನ್ಸರ್ ನೀಡಲಾಗಿದೆ. ಅಲ್ಲದೆ, 16MP ಸೆಲ್ಫಿ ಕ್ಯಾಮೆರಾವನ್ನು ಕೂಡ ಫೋನಿನಲ್ಲಿ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News