ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ ಈ Google Service, ಇಂದೇ ನಿಮ್ಮ Data Backup ತೆಗೆದುಕೊಳ್ಳಿ

ಇತ್ತೀಚೆಗಷ್ಟೇ ಈ ಕುರಿತು ಮಾಹಿತಿ ನೀಡಿದ್ದ Google ಈ ಸೇವೆಯನ್ನು ಶೀಘ್ರದಲ್ಲಿಯೇ ಸರ್ವರ್ ನಿಂದ ಡಿಲೀಟ್ ಮಾಡಲಾಗುವುದು ಎಂದು ಹೇಳಿತ್ತು. ಹೀಗಾಗಿ ಇದೀಗ ಎಲ್ಲ ಬಳಕೆದಾರರಿಗೆ  ಈ ಕುರಿತು ಸೂಚನೆ ನೀಡಿರುವ ಗೂಗಲ್, ಫೆಬ್ರುವರಿ 24, 2021 ರ ಮೊದಲು Play Musicನಿಂದ ತಮ್ಮ ಡೇಟಾ ತೆಗೆಯಲು ಹೇಳಿದೆ. ಇದಾದ ಬಳಿಕ ಕಂಪನಿ ಕೂಡ ಈ ಸೇವೆಯನ್ನು ತನ್ನ ಸರ್ವರ್ ನಿಂದ ತೆಗೆದುಹಾಕಲಿದೆ. ಅಂದರೆ, ಭವಿಷ್ಯದಲ್ಲಿ ಬಳಕೆ ದಾರರು ಇಲ್ಲಿರುವ ಡೇಟಾ ಬಳಸಲು ಸಾಧ್ಯವಿಲ್ಲ.

Written by - Nitin Tabib | Last Updated : Feb 19, 2021, 04:14 PM IST
  • ಗೂಗಲ್ ತನ್ನ ಈ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ
  • ಹೀಗಾಗಿ ಫಟಾಫಟ್ ನಿಮ್ಮ ದತ್ತಾಂಶದ ಬ್ಯಾಕ್ ಅಪ್ ಪಡೆದುಕೊಳ್ಳಿ.
  • ಸರ್ವರ್ ನಿಂದ ಕೂಡ ನಿಮ್ಮ ಈ ಮಾಹಿತಿ ಡಿಲೀಟ್ ಮಾಡಲಾಗುವುದು.
ಶೀಘ್ರದಲ್ಲಿಯೇ ಸ್ಥಗಿತಗೊಳ್ಳಲಿದೆ  ಈ Google Service, ಇಂದೇ ನಿಮ್ಮ Data Backup ತೆಗೆದುಕೊಳ್ಳಿ title=
Last Chance To Take Data Backup

ನವದೆಹಲಿ: ಗೂಗಲ್ ಶೀಘ್ರದಲ್ಲಿಯೇ ತನ್ನ ಸೇವೆಯೊಂದನ್ನು ಸ್ಥಗಿತಗೊಳಿಸಲಿದೆ. ಹೀಗಾಗಿ ಬಳಕೆದಾರರ ಪಾಲಿಗೆ ಗಂಭೀರದ ವಿಷಯ ಏನೆಂದರೆ. ಗೂಗಲ್ ತನ್ನ ಈ ಸೇವೆಯಲ್ಲಿದ್ದ ಎಲ್ಲಾ ದತಾಂಶವನ್ನು ಅಳಿಸಿಹಾಕಲಿದೆ. ಅಂದರೆ ಈ ಸೇವೆಯಲ್ಲಿ ಶೇಖರಿಸಲಾಗಿರುವ ಯಾವುದೇ ಸೂಚನೆ ಪುನಃ ಆರಂಭಗೊಳ್ಳುವುದಿಲ್ಲ. ಹೀಗಾಗಿ ಈ ಸೇವೆಯಲ್ಲಿದ್ದ ನಿಮ್ಮ ದತ್ತಾಂಶ ಅಳಿಸಿಹೋಗುವ ಮುನ್ನ ಫಟಾಫಟ್ ಈ ಸುದ್ದಿ ಓದಿ.

ಗೂಗಲ್ ನ ಈ ಸೇವೆ ಬಂದ್ ಆಗಿದೆ
ನಮ್ಮ ಸಹಯೋಗಿ ವೆಬ್ ಸೈಟ್  zeenews.india.com ನಲ್ಲಿ ಪ್ರಕಟಗೊಂಡ ಮಾಹಿತಿಯ ಪ್ರಕಾರ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ Google ತನ್ನ Play Music ಸೇವೆ ಸ್ಥಗಿತಗೊಂಡಿದೆ ಎಂದು ಘೋಷಿಸಿದೆ. ಇನ್ಮುಂದೆ ಈ ಸೇವೆ ಚಾಲ್ತಿಯಲ್ಲಿರುವುದಿಲ್ಲ ಎಂದು ಕಂಪನಿ ಬಳಕೆದಾರರಿಗೂ ಕೂಡ ಮಾಹಿತಿ ನೀಡಿದೆ.

ಫೆ.24 ಬಳಿಕ ಡಿಲೀಟ್ ಆಗಲಿದೆ ದತಾಂಶ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಇತ್ತೀಚೆಗಷ್ಟೇ ಈ ಕುರಿತು ಮಾಹಿತಿ ನೀಡಿದ್ದ Google ಈ ಸೇವೆಯನ್ನು ಶೀಘ್ರದಲ್ಲಿಯೇ ಸರ್ವರ್ ನಿಂದ ಡಿಲೀಟ್ ಮಾಡಲಾಗುವುದು ಎಂದು ಹೇಳಿತ್ತು. ಹೀಗಾಗಿ ಇದೀಗ ಎಲ್ಲ ಬಳಕೆದಾರರಿಗೆ  ಈ ಕುರಿತು ಸೂಚನೆ ನೀಡಿರುವ ಗೂಗಲ್, ಫೆಬ್ರುವರಿ 24, 2021 ರ ಮೊದಲು Play Musicನಿಂದ ತಮ್ಮ ಡೇಟಾ ತೆಗೆಯಲು ಹೇಳಿದೆ. ಇದಾದ ಬಳಿಕ ಕಂಪನಿ ಕೂಡ ಈ ಸೇವೆಯನ್ನು ತನ್ನ ಸರ್ವರ್ ನಿಂದ ತೆಗೆದುಹಾಕಲಿದೆ. ಅಂದರೆ, ಭವಿಷ್ಯದಲ್ಲಿ ಬಳಕೆ ದಾರರು ಇಲ್ಲಿರುವ ಡೇಟಾ ಬಳಸಲು ಸಾಧ್ಯವಿಲ್ಲ.

ಇದನ್ನೂ ಓದಿ- 'KGF Chapter 2' ಟೀಸರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಹೊಸ ದಾಖಲೆ

ಯಾವ ದತ್ತಾಂಶಗಳು ಹಾನಿಗೊಳಗಾಗಲಿವೆ
ಹಲವು ಬಳಕೆದಾರರು ತಮ್ಮ ಮ್ಯೂಸಿಕ್ ಲೈಬ್ರರಿ, ವಹಿವಾಟಿನ ಹಾಗೂ ಮ್ಯೂಸಿಕ್ ಫೈಲ್ ಗಳನ್ನು Play Music ನಲ್ಲಿ ಅಪ್ಲೋಡ್ ಮಾಡಿದ್ದರು. ಫೆ.24ರ ಬಳಿಕ ನೀವು ಈ ಸೇವೆಯಲ್ಲಿರುವ ಯಾವುದೇ ಡೇಟಾ ವಾಪಸ್ ಪಡೆಯಲು ಸಾಧ್ಯವಿಲ್ಲ.

ಈ ಸೇವೆಯ ಜಾಗದಲ್ಲಿ YouTube Music ಪರಿಚಯಿಸಲಾಗುತ್ತಿದೆ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ Google, Play Music ಅನ್ನು YouTube Musicಗೆ ಬದಲಾಯಿಸಿದೆ ಎನ್ನಲಾಗಿದೆ. ಎಲ್ಲ Play Music ಬಳಕೆದಾರರ ಡೇಟಾವನ್ನು YouTube ಗೆ ವರ್ಗಾಯಿಸಲಾಗುತ್ತಿದೆ.

ಇದನ್ನೂ ಓದಿ- YouTube ನಲ್ಲಿ ಹೊಸ ದಾಖಲೆ ಸೃಷ್ಟಿಸಿದ KGF Chapter 2 Teaser

ನೀವು ಈ ರೀತಿ ನಿಮ್ಮ ದತ್ತಾಂಶದ ಬ್ಯಾಕ್ ಅಪ್ ಪಡೆಯಬಹುದು
Play Musicನಲ್ಲಿನ ಡೇಟಾ ಬ್ಯಾಕ್ ಅಪ್ ಪಡೆಯಲು ನೀವು YouTube Musicನ ಸಹಾಯ ಪಡೆಯಬಹುದು. ನೀವೂ ಕೂಡ ಪ್ಲೇ ಸ್ಟೋರ್ ನಿಂದ YouTube ಮ್ಯೂಸಿಕ್ ಡೌನ್ಲೋಡ್ ಮಾಡಿ ನಿಮ್ಮ ಮ್ಯೂಸಿಕ್ ಆಪ್ ನಿಂದ ನಿಮ್ಮ ಸಂಪೂರ್ಣ ಡೇಟಾವನ್ನು ಟ್ರಾನ್ಸ್ಫರ್ ಮಾಡಬಹುದು.

ಇದನ್ನೂ ಓದಿ- ತನ್ನ ಭಾರತೀಯ ಬಳಕೆದಾರರಿಗೆ UPI PAYMENT ವೈಶಿಷ್ಟ್ಯ ಒದಗಿಸಿದ YouTube

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News