BSNL 4G Services: ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿಎಸ್‌ಎನ್‌ಎಲ್ (Bharat Sanchar Nigam Limited- BSNL) ಈ ವರ್ಷ ಆಗಸ್ಟ್‌ನಿಂದ ದೇಶಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲಿದೆ. ವಿಶೇಷವೆಂದರೆ, ಬಿಎಸ್‌ಎನ್‌ಎಲ್ ನ ಈ 4ಜಿ ಸೇವೆಗಳು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನವನ್ನು ಆಧರಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ (ಮೇ 06) ಮಾಹಿತಿ ಹಂಚಿಕೊಂಡಿವೆ.
ಸೆಕೆಂಡಿಗೆ 40-45 ಮೆಗಾಬಿಟ್‌ಗಳ ಗರಿಷ್ಠ ವೇಗ:
ಬಿಎಸ್‌ಎನ್‌ಎಲ್ (BSNL) ಮೂಲಗಳಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ 4G ನೆಟ್‌ವರ್ಕ್‌ನಲ್ಲಿ ಸೆಕೆಂಡಿಗೆ 40-45 ಮೆಗಾಬಿಟ್‌ಗಳ ಗರಿಷ್ಠ ವೇಗವನ್ನು (Mbps) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಪೈಲಟ್ ಅಥವಾ ಪ್ರಾಯೋಗಿಕ ಹಂತದಲ್ಲಿ 700 MHz ನ ಪ್ರೀಮಿಯಂ ಸ್ಪೆಕ್ಟ್ರಮ್ ಬ್ಯಾಂಡ್ ಜೊತೆಗೆ 2,100 MHz ಬ್ಯಾಂಡ್‌ನಲ್ಲಿ ಇದನ್ನು ಪರಿಚಯಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತು ಟೆಲಿಕಾಂ ಸಂಶೋಧನಾ ಸಂಸ್ಥೆ C-DOT ನೇತೃತ್ವದ ಒಕ್ಕೂಟದ ಮೂಲಕ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಕಂಪನಿಯು ಪಂಜಾಬ್‌ನಲ್ಲಿ 4G ಸೇವೆಗಳನ್ನು ಪ್ರಾರಂಭಿಸಿದೆ ಮತ್ತು ಈಗಾಗಲೇ ಸುಮಾರು ಎಂಟು ಲಕ್ಷ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ- ನೀವು ಮನೆಯ ಈ ಜಾಗದಲ್ಲಿ ವೈಫೈ ರೂಟರ್ ಅಳವಡಿಸಿದ್ದೀರಾ? ಸರಿಯಾದ ಜಾಗ ತಿಳಿದುಕೊಳ್ಳಿ!
"ಕಳೆದ ವರ್ಷ ಜುಲೈನಲ್ಲಿ C-DOT ನಿರ್ಮಿಸಿದ 4G ಕೋರ್ ಪಂಜಾಬ್‌ನ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನಲ್ಲಿ (BSNL Network) ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾನ್ಯವಾಗಿ ಅದರ ಸಂಕೀರ್ಣ ತಂತ್ರಜ್ಞಾನದ ಯಶಸ್ಸನ್ನು ಸಾಬೀತುಪಡಿಸಲು 12 ತಿಂಗಳುಗಳು ಬೇಕಾಗುತ್ತದೆ. ಆದರೆ, C-DOT ಕೋರ್ ಇದನ್ನು ಕೇವಲ ಹತ್ತೇ ತಿಂಗಳಲ್ಲಿ ಸ್ಥಿರಗೊಳಿಸುವಲ್ಲಿ ಯಶಸ್ವಿಯಾಗಿದೆ.
"ಬಿಎಸ್ಎನ್ಎಲ್ ಕೋರ್ ನೆಟ್‌ವರ್ಕ್ ನೆಟ್‌ವರ್ಕ್ ಹಾರ್ಡ್‌ವೇರ್, ಟೆಲಿಕಾಂ ಸೇವೆಗೆ ಸಂಬಂಧಿಸಿದ ಸಾಫ್ಟ್‌ವೇರ್ ಅನ್ನು ಒಳಗೊಂಡಿರುತ್ತದೆ. TCS, Tejas Networks ಮತ್ತು ಸರ್ಕಾರಿ ಸ್ವಾಮ್ಯದ ITI ಗಳು 4G ನೆಟ್‌ವರ್ಕ್‌ಗಳನ್ನು ನಿಯೋಜಿಸಲು ಬಿಎಸ್‌ಎನ್‌ಎಲ್ ನಿಂದ ಸುಮಾರು 19,000 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಲಾಗಿದೆ. ಈ ನೆಟ್‌ವರ್ಕ್ (Network) ಅನ್ನು ಭವಿಷ್ಯದಲ್ಲಿ 5ಜಿ ನೆಟ್‌ವರ್ಕ್‌ಗೆ ಅಪ್‌ಡೇಟ್ ಮಾಡಬಹುದು ಎಂದು ಹೇಳಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ತೇಜಸ್ ನೆಟ್‌ವರ್ಕ್ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ನಾಬ್ ರಾಯ್, ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಅನ್ನು ವಿವಿಧ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ. ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನಲ್ಲಿ ಸಿ-ಡಾಟ್ ಕೋರ್ ಲಭ್ಯವಿಲ್ಲದಿದ್ದರೆ, ಸಾಧನಗಳನ್ನು ಈಗಿರುವ ಕೋರ್‌ಗೆ ಸಂಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- ಆನ್‌ಲೈನ್ ಹಗರಣದ ವಿರುದ್ಧ ಕ್ರಮ ಕೈಗೊಂಡ ವಾಟ್ಸಾಪ್: 2 ಕೋಟಿ ಭಾರತೀಯ ಖಾತೆಗಳು ಬ್ಯಾನ್
ದೇಶಾದ್ಯಂತ 1.12 ಲಕ್ಷ ಟವರ್‌ಗಳ ಸ್ಥಾಪನೆ:
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 4ಜಿ ಮತ್ತು 5ಜಿ ಸೇವೆಗಳನ್ನು ಒದಗಿಸ್ಲೌ ದೇಶಾದ್ಯಂತ ಸುಮಾರು 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಕಂಪನಿಯು ದೇಶಾದ್ಯಂತ 4G ಸೇವೆಗಾಗಿ ಈಗಾಗಲೇ 9,000 ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ ಪಂಜಾಬ್, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ ಮತ್ತು ಹರಿಯಾಣ ವೃತ್ತಗಳಲ್ಲಿ 6,000 ಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.