Apple iPhone 14: ಕೇವಲ 3 ಸಾವಿರ ರೂ.ಗೆ iPhone 14 ಖರೀದಿಸಿ!

Apple iPhone 14: ಐಫೋನ್ 14ರ ಬೆಲೆ ಗಮನಾರ್ಹ ಕಡಿಮೆಯಾಗಿದೆ. ನಂಬಲೂ ಆಗದಷ್ಟು ಬೆಲೆಗೆ ಐಫೋನ್ ಸಿಗುತ್ತಿದೆ. ಐಫೋನ್ 14ನ್ನು ಕೇವಲ 3 ಸಾವಿರ ರೂ.ಗೆ ನೀವು ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಐಫೋನ್ ಎಲ್ಲಿ ಸಿಗುತ್ತಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.  

Written by - Puttaraj K Alur | Last Updated : Apr 25, 2023, 12:05 PM IST
  • ಐಫೋನ್ 15 ಬಿಡುಗಡೆಗೂ ಮುನ್ನವೇ ಐಫೋನ್ 14ನ ಬೆಲೆ ಗಮನಾರ್ಹ ಕುಸಿತ
  • Facebook Marketplaceನಲ್ಲಿ ಕೇವಲ 3 ಸಾವಿರಕ್ಕೆ ಐಫೋನ್ 14 ಲಭ್ಯ
  • ನಿಮಗೂ ಕಡಿಮೆ ಬೆಲೆಗೆ ಐಫೋನ್ 14 ಬೇಕಾದ್ರೆ ಇಂದೇ ಖರೀದಿಸಿರಿ
Apple iPhone 14: ಕೇವಲ 3 ಸಾವಿರ ರೂ.ಗೆ iPhone 14 ಖರೀದಿಸಿ!   title=
Apple iPhone 14

ನವದೆಹಲಿ: ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಆಪಲ್‌ನ ಐಫೋನ್ ಅಗ್ರಸ್ಥಾನದಲ್ಲಿದೆ. ಇದು ಅತ್ಯಂತ ಪ್ರೀಮಿಯಂ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಐಫೋನ್ ಬಂದ ತಕ್ಷಣ ಹಳೆಯ ಮಾದರಿಯ ಬೆಲೆ ಕುಸಿಯುತ್ತದೆ. ಐಫೋನ್ 15 ಮಾರುಕಟ್ಟೆ ಪ್ರವೇಶಕ್ಕೂ ಮುನ್ನವೇ  ಐಫೋನ್ 14ನ ಬೆಲೆ ಗಮನಾರ್ಹ ಕುಸಿತ ಕಂಡಿದೆ. ನಂಬಲೂ ಆಗದಷ್ಟು ಬೆಲೆ ಕಡಿಮೆಯಾಗಿದೆ. ಐಫೋನ್ 14ನ್ನು ನೀವು ಇದೀಗ ಕೇವಲ 3 ಸಾವಿರ ರೂ.ಗೆ ಖರೀದಿಸಬಹುದು. ಇಷ್ಟು ಕಡಿಮೆ ಬೆಲೆಗೆ ಫೋನ್ ಎಲ್ಲೆಲ್ಲಿ ಲಭ್ಯವಿದೆ ಎಂದು ತಿಳಿಯಿರಿ.   

ಇದನ್ನೂ ಓದಿ: ಆಗಸವನ್ನು ಗೆಲ್ಲಲು ಚೀನಾದ ಬಾಹ್ಯಾಕಾಶ ಯುದ್ಧತಂತ್ರ

ಐಫೋನ್ 14ರ ಮೇಲೆ ಭರ್ಜರಿ ಡಿಸ್ಕೌಂಟ್!

iPhone 14ಅನ್ನು Facebook Marketplaceನಲ್ಲಿ ಕೇವಲ 3 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದಾರೆ. ಪ್ರಶಾಂತ್ ಬದನಾ ಎಂಬುವರು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಫರಿದಾಬಾದ್‍ನಲ್ಲಿ ಐಫೋನ್ ಲಭ್ಯವಿದೆ ಎಂದು ನಮೂದಿಸಲಾಗಿದೆ.

ಇದನ್ನೂ ಓದಿ: ವಾಟ್ಸಾಪ್ ಮೂಲಕವೂ ಕರೆಂಟ್ ಬಿಲ್ ಪಾವತಿಸಬಹುದು!

ಪರಿಶೀಲಿಸಿ ಖರೀದಿಸಿ

Facebook Marketplace ಬಹಳ ಜನಪ್ರಿಯವಾಗಿದೆ. ಅನೇಕರು ಇಲ್ಲಿ ವಿವಿಧ ರೀತಿಯ ವಸ್ತುಗಳ ಖರೀದಿ ಮತ್ತು ಮಾರಾಟ ಮಾಡುತ್ತಾರೆ. ಇಲ್ಲಿ ಖರೀದಿಸಿದ ಮೇಲೆ ಸರಕುಗಳು ಸಹ ನಿಮಗೆ ತಲುಪುತ್ತವೆ. ಆದರೆ ಐಫೋನ್ 14 ಕೇವಲ 3 ಸಾವಿರ ರೂ.ಗೆ ನೀಡುತ್ತಿರುವುದು ಕೆಲವರಿಗೆ ಡೌಟ್ ಮೂಡಿಸಿದೆ. ನೀವು ಸಹ ಈ ಆಫರ್ ನೋಡಿದ್ರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ. ಅದು ಅಸಲಿ ಎನಿಸಿದರೆ ಮಾತ್ರ ಹಣ ನೀಡಿ ಖರೀದಿಸಿ. ಮುಂಗಡ ಹಣ ಪಾವತಿಯ ಬದಲಿಗೆ COD ಆಯ್ಕೆ ಆರಿಸಿ. ಈ ಆಯ್ಕೆ ನೀಡದಿದ್ದರೆ ಯಾವುದೇ ವಸ್ತುಗಳನ್ನು ಅಲ್ಲಿಂದ ಖರೀದಿಸಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News