ಜನವರಿ 1ರಿಂದ ಬದಲಾಗಲಿದೆ ಲ್ಯಾಂಡ್‌ಲೈನ್‌ನಿಂದ Mobile ಫೋನ್‌ಗೆ ಕರೆ ಮಾಡುವ ವಿಧಾನ

ಹೊಸ ನಿಯಮಗಳ ಪ್ರಕಾರ ಜನವರಿ 1, 2021 ರಿಂದ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡಲು ಶೂನ್ಯ (Zero) ಅನ್ವಯಿಸಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಟೆಲಿಕಾಂ ಇಲಾಖೆಯು ನವೆಂಬರ್ 20 ರಂದು ಸುತ್ತೋಲೆ ಹೊರಡಿಸಿದೆ.

Last Updated : Nov 25, 2020, 08:41 AM IST
  • ಟೆಲಿಕಾಂ ಇಲಾಖೆ ನವೆಂಬರ್ 20 ರಂದು ಸುತ್ತೋಲೆ ಹೊರಡಿಸಿದೆ
  • ಈ ಬದಲಾವಣೆಯೊಂದಿಗೆ ಟೆಲಿಕಾಂ ಕಂಪೆನಿಗಳು ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ರಚಿಸುವ ಸೌಲಭ್ಯ ಪಡೆಯಲಿವೆ.
  • ಕಂಪನಿಗಳು ಹೊಸ ಸಂಖ್ಯೆಗಳನ್ನು ಸಹ ನೀಡಬಹುದು
ಜನವರಿ 1ರಿಂದ ಬದಲಾಗಲಿದೆ ಲ್ಯಾಂಡ್‌ಲೈನ್‌ನಿಂದ Mobile ಫೋನ್‌ಗೆ ಕರೆ ಮಾಡುವ ವಿಧಾನ title=

ನವದೆಹಲಿ: ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ಪ್ರಸ್ತಾವನೆಯನ್ನು ದೂರಸಂಪರ್ಕ ಇಲಾಖೆ ಅನುಮೋದಿಸಿದ್ದು ಹೊಸ ವರ್ಷದಿಂದ ದೇಶದ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಸಂಖ್ಯೆಯನ್ನು ಡಯಲ್ ಮಾಡುವ ವಿಧಾನವು ಸಂಪೂರ್ಣವಾಗಿ ಬದಲಾಗುತ್ತದೆ. 

ಇದು ಹೊಸ ನಿಯಮ:-
ಹೊಸ ನಿಯಮಗಳ ಪ್ರಕಾರ  ಜನವರಿ 1, 2021 ರಿಂದ ಯಾವುದೇ ಲ್ಯಾಂಡ್‌ಲೈನ್ ಫೋನ್‌ನಿಂದ ಮೊಬೈಲ್ ಫೋನ್‌ಗೆ ಕರೆ ಮಾಡಿ ಮಾತನಾಡಲು ಶೂನ್ಯ (Zero) ಅನ್ವಯಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಟೆಲಿಕಾಂ ಇಲಾಖೆಯು ನವೆಂಬರ್ 20 ರಂದು ಸುತ್ತೋಲೆ ಹೊರಡಿಸಿದ್ದು ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ ಸಂಖ್ಯೆಗೆ ಕರೆ ಮಾಡುವಾಗ ಡಯಲ್ ವಿಧಾನವನ್ನು ಬದಲಾಯಿಸಲು TRAI ಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಈ ಸುತ್ತೋಲೆಯಲ್ಲಿ ಹೇಳಲಾಗಿದೆ. ಇದು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೆಚ್ಚಿನ ಸಂಖ್ಯೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಸೇವೆಗಳಿಗೆ ಸಾಕಷ್ಟು ಸಂಖ್ಯೆಗಳನ್ನು ರಚಿಸಲು ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Broadband ಹೆಸರಿನಲ್ಲಿ ಅರ್ಧಕ್ಕಿಂತ ಕಡಿಮೆ ಸ್ಪೀಡ್ ನೀಡಲಾಗುತ್ತಿದೆಯಂತೆ!

ಪ್ರಸ್ತುತ ಈ ಸೌಲಭ್ಯವು ನಿಮ್ಮ ಪ್ರದೇಶದ ಹೊರಗಿನ ಕರೆಗಳಿಗೆ ಲಭ್ಯವಿದೆ. ಈ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಕಂಪನಿಗಳಿಗೆ ಜನವರಿ 1 ರವರೆಗೆ ಕಾಲಾವಕಾಶ ನೀಡಿದೆ.

254.4 ಮಿಲಿಯನ್ ಸಂಖ್ಯೆಗಳನ್ನು ಶೂನ್ಯದಿಂದ ಉತ್ಪಾದಿಸಲಾಗುತ್ತದೆ:-
ಡಯಲಿಂಗ್ ವಿಧಾನದಲ್ಲಿ ಈ ಬದಲಾವಣೆಯೊಂದಿಗೆ ಟೆಲಿಕಾಂ (Telecom) ಕಂಪೆನಿಗಳು ಮೊಬೈಲ್ ಸೇವೆಗಳಿಗಾಗಿ 254.4 ಕೋಟಿ ಹೆಚ್ಚುವರಿ ಸಂಖ್ಯೆಗಳನ್ನು ರಚಿಸುವ ಸೌಲಭ್ಯವನ್ನು ಪಡೆಯಲಿವೆ. ಭವಿಷ್ಯದ ಅಗತ್ಯಗಳನ್ನು ಪೂರೈಸಲು ಇದು ಸಹಾಯ ಮಾಡುತ್ತದೆ. ಇದರ ನಂತರ ಕಂಪನಿಗಳು ಹೊಸ ಸಂಖ್ಯೆಗಳನ್ನು ನೀಡಲು ಸಹ ಸಾಧ್ಯವಾಗುತ್ತದೆ.

Pharma Secretary ಪಿ. ಡಿ ವಾಘೇಲಾ TRAI ನ ನೂತನ ಅಧ್ಯಕ್ಷರಾಗಿ ನೇಮಕ

ಮೊಬೈಲ್ ಸಂಖ್ಯೆ 11 ಅಂಕೆಗಳಾಗಿರಬಹುದು:-
ಭವಿಷ್ಯದಲ್ಲಿ ಟೆಲಿಕಾಂ ಕಂಪನಿಗಳು 11-ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಸಹ ನೀಡಬಹುದು. ಪ್ರಸ್ತುತ ದೇಶದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಶೂನ್ಯ ಬಳಕೆಯು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೆಚ್ಚಿನ ಸಂಖ್ಯೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

Trending News