Viral News: ನೀಲಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಅನೇಕ ಜನರನ್ನು ನೀವು ನೋಡಿರಬಹುದು. ಕೆಲವು ಸೆಲೆಬ್ರೆಟಿಗಳು ಹಾಗೂ ಅವರ ಮಕ್ಕಳ ಕಣ್ಣುಗಳು ಸಹ ನೀಲಿ ಬಣ್ಣದಾಗಿರುತ್ತವೆ. ಆದರೆ ಒಂದು ಊರಿನಲ್ಲಿರುವ ಎಲ್ಲಾ ಜನರ ಕಣ್ಣುಗಳು ಸಂಪೂರ್ಣ ನೀಲಿಮಯವಾಗಿವೆ ಅಂದರೆ ನೀವು ನಂಬುತ್ತೀರಾ..? ಹೌದು, ನೀವು ಇದನ್ನು ನಂಬಲೇಬೇಕು.
ನೀಲಿ ಬಣ್ಣದ ಕಣ್ಣುಗಳನ್ನ ಹೊಂದಿರುವ ಜನರನ್ನು ನೀವು ಅಪರೂಪವಾಗಿ ನೋಡಿಯೇ ಇರ್ತೀರಿ. ಆದ್ರೆ ಈ ಹಳ್ಳಿಯೊಂದರಲ್ಲಿ ವಾಸಿಸುವ ಎಲ್ಲರ ಕಣ್ಣುಗಳು ನೀಲಿಯಾಗಿವೆ. ಇದನ್ನ ಬ್ಲೂ ಐಡ್ ಬುಡಕಟ್ಟು (Blue-eyed community) ಎಂತಲೂ ಕರೆಯಲಾಗುತ್ತದೆ. ಯಾರಾದರೂ ಇಲ್ಲಿನ ಜನರ ಕಣ್ಣುಗಳನ್ನು ನೋಡಿದ್ರೆ ತುಂಬಾ ಭಯ ಪಡುತ್ತಾರಂತೆ. ಹಾಗಾದ್ರೆ ಈಗ ನಮ್ಮ ಮುಂದೆ ಪ್ರಶ್ನೆಯೊಂದು ಉದ್ಭವಿಸುತ್ತದೆ. ಈ ನೀಲಿ ಕಣ್ಣುಗಳನ್ನು ಹೊಂದಿರುವ ಊರು ಯಾವುದು? ಹಾಗೂ ಅದರ ಹಿಂದಿನ ಕಾರಣವೇನು? ಅನ್ನೋದು. ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ...
ಇದನ್ನೂ ಓದಿ: ಈ ದೇಶಗಳಲ್ಲಿದೆ ಭಾರತೀಯರಿಗೆ ವೀಸಾ ರಹಿತ ಪ್ರವೇಶ!
@jackofftoart ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀಲಿ ಕಣ್ಣುಗಳನ್ನು ಹೊಂದಿರುವ ಅನೇಕ ಜನರು ಕಾಣಿಸಿಕೊಂಡಿದ್ದಾರೆ. ಈ ಜನರು ವಾಸ್ತವವಾಗಿ ಇಂಡೋನೇಷ್ಯಾದ ಸುಲವೆಸಿ ಪ್ರಾಂತ್ಯದ ಬೂಟನ್ ದ್ವೀಪದಲ್ಲಿ ವಾಸಿಸುವ ಬೂಟನ್ ಬುಡಕಟ್ಟಿನ (Buton tribe indonesia) ಜನರಾಗಿದ್ದಾರೆ.
ವರದಿಯ ಪ್ರಕಾರ, ಅಪರೂಪದ ಆನುವಂಶಿಕ ಸ್ಥಿತಿಯಿಂದ ಇಲ್ಲಿನ ಜನರ ಕಣ್ಣಿನ ಬಣ್ಣವು ನೀಲಿ ಬಣ್ಣವಾಗಿದೆ. ಆದರೆ ಜಗತ್ತಿನಲ್ಲಿ 42 ಸಾವಿರ ಜನರಲ್ಲಿ ಒಬ್ಬರು ಮಾತ್ರ ಜನರು ನೀಲಿ ಕಣ್ಣು ಹೊಂದಿರುತ್ತಾರೆ. ಇನ್ನು ಛಾಯಾಗ್ರಾಹಕ ಕೊರ್ಚ್ನೊಯಿ ಪಸರಿಬು ಅವರು ಈ ಜನರ ಚಿತ್ರಗಳನ್ನು ತೆಗೆದಿದ್ದಾರೆ.
ಇದನ್ನೂ ಓದಿ: ಸುಡಾನ್ ನಲ್ಲಿ ಅರೆ ಸೈನಿಕ ಪಡೆಯಿಂದ ಫಿರಂಗಿ ದಾಳಿ: 8 ಸಾವು, 53 ಮಂದಿಗೆ ಗಾಯ
ಕಣ್ಣುಗಳು ನೀಲಿಯಾಗಿರುವುಕ್ಕೆ ಕಾರಣವೇನು?
ಈ ಅಪರೂಪದ ಆನುವಂಶಿಕ ಅಸ್ವಸ್ಥತೆಯ ಹೆಸರು ವಾರ್ಡನ್ಬರ್ಗ್ ಸಿಂಡ್ರೋಮ್(Waardenburg syndrome). ಈ ರೋಗಲಕ್ಷಣವು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದಂತೆ. ಉದಾಹರಣೆಗೆ ಶ್ರವಣ ಸಮಸ್ಯೆ, ಪಿಗ್ಮೆಂಟೇಶನ್ ನಷ್ಟದ ಕಾರಣ ಕಣ್ಣುಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ ಅಥವಾ ಒಂದು ಕಣ್ಣಾದರೂ ಸಹ ನೀಲಿ ಬಣ್ಣಕ್ಕೆ ತಿರುಗುತ್ತದಂತೆ. ಇದಲ್ಲದೇ ಕಂದು ಮತ್ತು ಬಿಳಿ ಚುಕ್ಕೆಗಳು ದೇಹದ ಮೇಲೆ ಕಾಣಿಸಿಕೊಳ್ಳುತ್ತವೆ. ಈ ರೋಗಲಕ್ಷಣ ರೂಪಾಂತರಗಳಿಂದ ಉಂಟಾಗುತ್ತದೆ. ಇದು ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗೆ ಈ ಬುಡಕಟ್ಟಿನ ಜನರ ಬಗ್ಗೆ ನೀವು ಸಹ ಗೂಗಲ್ ಮಾಡಿ ನೋಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.