ಈ ಫ್ಲೈಟ್ ನಲ್ಲಿ ಸಿಗಲಿದೆ Free WiFi! ಪ್ರಯಾಣದ ವೇಳೆ ಸಾಧ್ಯವಾಗುವುದು ಇಂಟರ್ ನೆಟ್ ಬಳಕೆ Video Call

Free WiFi : ಇನ್ನು ಮುಂದೆ ವಿಮಾನಯಾನ ಸಂದರ್ಭದಲ್ಲಿ ಕೂಡಾ ಇಂಟರ್ ನೆಟ್ ಬಳಕೆ ಸಾಧ್ಯವಾಗುತ್ತದೆ. ವಿಸ್ತಾರ ತನ್ನ ಪ್ರಯಾಣಿಕರಿಗೆ ಈ ಸೇವೆಯನ್ನು ಒದಗಿಸುತ್ತಿದೆ. ಅದು ಕೂಡಾ ಉಚಿತವಾಗಿ.  

Written by - Ranjitha R K | Last Updated : Jul 29, 2024, 01:12 PM IST
  • ಅಂತಾರಾಷ್ಟ್ರೀಯ ವಿಮಾನಗಳಲ್ಲಿ 20 ನಿಮಿಷಗಳ ಉಚಿತ ವೈ-ಫೈ
  • ಉಚಿತ ವೈ-ಫೈ ಒದಗಿಸುವುದಾಗಿ ಹೇಳಿದ ವಿಸ್ತಾರಾ
  • ಇಮೇಲ್ ಗೆ ಬರುವುದು ಪಾಸ್ವರ್ಡ್
ಈ ಫ್ಲೈಟ್ ನಲ್ಲಿ ಸಿಗಲಿದೆ Free WiFi! ಪ್ರಯಾಣದ ವೇಳೆ ಸಾಧ್ಯವಾಗುವುದು ಇಂಟರ್ ನೆಟ್ ಬಳಕೆ Video Call  title=

Free WiFi :ತನ್ನ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ 20 ನಿಮಿಷಗಳ ಉಚಿತ ವೈ-ಫೈ ಒದಗಿಸುವುದಾಗಿ ವಿಸ್ತಾರಾ ಹೇಳಿದೆ.ಪ್ರಯಾಣಿಕರಿಗೆ ಉಚಿತ ವೈ-ಫೈ ಸೇವೆ ಒದಗಿಸುವ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ವಿಸ್ತಾರಾ ಆಗಿದೆ.ಟಾಟಾ ಮತ್ತು ಸಿಂಗಾಪುರ್ ಏರ್‌ಲೈನ್ಸ್‌ನ  ಜಾಯಿಂಟ್ ವೆಂಚರ್ ವಿಮಾನಯಾನ ಸಂಸ್ಥೆ ವಿಸ್ತಾರಾ, ಪ್ರಯಾಣಿಕರು 20 ನಿಮಿಷಗಳ ಕಾಲ ಇಂಟರ್ನೆಟ್ ಅನ್ನು ಉಚಿತವಾಗಿ ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.ಇದರೊಂದಿಗೆ, ಪ್ರಯಾಣಿಕರು ಹಾರಾಟದ ಸಮಯದಲ್ಲಿಯೂ ತಮ್ಮವರೊಂದಿಗೆ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ.ಇದಕ್ಕಿಂತ ಹೆಚ್ಚು ಅವಧಿಗೆ ಇಂಟರ್ನೆಟ್ ಬಳಸಲು ಬಯಸುವವರು,ಭಾರತೀಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಮೂಲಕ ಪಾವತಿಸಿ  ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. 

ಇಮೇಲ್ ಗೆ ಬರುವುದು ಪಾಸ್ವರ್ಡ್ :
ಈ ಸೌಲಭ್ಯವು ಬೋಯಿಂಗ್ 787-9 ಡ್ರೀಮ್ಲೈನರ್ ಮತ್ತು ಏರ್ಬಸ್ A321neo ವಿಮಾನಗಳಲ್ಲಿ ಲಭ್ಯವಿದೆ.ಇದರ ಮೂಲಕ,ಫ್ಲೈಟ್ ಸಮಯದಲ್ಲಿ ಸಕ್ರಿಯ ಸೆಶನ್‌ನಲ್ಲಿ ಹೆಚ್ಚುವರಿ ವೈ-ಫೈ ಖರೀದಿಸಲು ಗ್ರಾಹಕರು ಇಮೇಲ್‌ನಲ್ಲಿ ಒನ್ ಟೈಮ್  ಪಾಸ್ವರ್ಡ್ ಅನ್ನು ಪಡೆಯುತ್ತಾರೆ. 

ಇದನ್ನೂ ಓದಿ : Car Tips: ಬಿಸಿಲಿನಲ್ಲಿ ಪಾರ್ಕ್ ಮಾಡಿದ್ದ ಕಾರಿನಲ್ಲಿ ಎಷ್ಟು ಸಮಯದ ಬಳಿಕ ಎಸಿ ಆನ್ ಮಾಡ್ಬೇಕು?

ಗ್ರಾಹಕರು ಈ ಸೌಲಭ್ಯವನ್ನು ಇಷ್ಟಪಡುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ವಿಸ್ತಾರಾ ಸಿಇಒ ದೀಪಕ್ ರಾಜವತ್ ತಿಳಿಸಿದ್ದಾರೆ.ಇದು ಪ್ರಯಾಣದ ಅನುಭವವನ್ನು ಅದ್ಭುತವಾಗಿಸುತ್ತದೆ ಎಂದಿದ್ದಾರೆ.ಇದನ್ನು ಹೊರತುಪಡಿಸಿ,ಬ್ಯುಸಿನೆಸ್ ಕ್ಲಾಸ್ ಮತ್ತು ಪ್ಲಾಟಿನಂ ಕ್ಲಬ್ ವಿಸ್ತಾರಾ ಸದಸ್ಯರು 50MB ಯ ಉಚಿತ ವೈಫೈ ಅನ್ನು ಪಡೆಯುತ್ತಾರೆ.  

Wi-Fi ಸೇವಾ ಶುಲ್ಕಗಳು :
ವಿಮಾನದಲ್ಲಿ ಇಂಟರ್ನೆಟ್ ಬಳಸಲು ಬಯಸುವ ಆದರೆ ವಿಸ್ತಾರಾ ಸದಸ್ಯರಲ್ಲದ ಪ್ರಯಾಣಿಕರು WhatsApp ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಅನಿಯಮಿತ ಡೇಟಾಕ್ಕಾಗಿ 372.74 ರೂ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ ಎಂದು ವಿಸ್ತಾರಾ ತಿಳಿಸಿದೆ. ಇಂಟರ್ನೆಟ್ ಸರ್ಫಿಂಗ್‌ಗಾಗಿ,ಸಾಮಾಜಿಕ ಮಾಧ್ಯಮ ಮತ್ತು ವೆಬ್‌ನಲ್ಲಿ ಆಡಿಯೋ ಮತ್ತು ವಿಡಿಯೋ ಸ್ಟ್ರೀಮಿಂಗ್ ಗಾಗಿ GST ಜೊತೆಗೆ 1,577.54 ರೂ. ಪಾವತಿಸಬೇಕು. ಎಲ್ಲಾ ಸ್ಟ್ರೀಮಿಂಗ್ ಪ್ರೋಟೋಕಾಲ್‌ಗಳನ್ನು ಅನುಮತಿಸುವ ಅನಿಯಮಿತ ಡೇಟಾಕ್ಕಾಗಿ, 2707.04 ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ ಎಂದು ವಿಸ್ತಾರಾ ಹೇಳಿದೆ.ತಮ್ಮ ಇನ್-ಫ್ಲೈಟ್ ಮನರಂಜನಾ ವ್ಯವಸ್ಥೆಯು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಆಡಿಯೊ ಶೀರ್ಷಿಕೆಗಳನ್ನು ಒಳಗೊಂಡಂತೆ ಸರಿಸುಮಾರು 700 ಗಂಟೆಗಳ  ಕಂಟೆಂಟ್ ಗಳನ್ನು ಹೊಂದಿದೆ ಎಂದು ಏರ್‌ಲೈನ್ ಬಹಿರಂಗಪಡಿಸಿದೆ.

ಇದನ್ನೂ ಓದಿ : ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ JiO !ಉಳಿದ ನೆಟ್ ವರ್ಕ್ ಗಳಿಗೆ ಭಾರೀ ಟಕ್ಕರ್

ಪ್ರಿಪೇಯ್ಡ್ ಡೇಟಾ ಯೋಜನೆಯನ್ನು ಬಳಸಿದರೆ,ನಿಮ್ಮ ಫೋನ್‌ನಲ್ಲಿ 'ಡೇಟಾ ಅಲರ್ಟ್, ಮತ್ತು 'ಡೇಟಾ ಮಿತಿ' ವೈಶಿಷ್ಟ್ಯವನ್ನು ಆನ್ ಮಾಡುವುದು ಒಳ್ಳೆಯದು.'ನಿಮ್ಮ ಡೇಟಾ ಬಳಕೆಯು ನಿಗದಿತ ಮಿತಿಯನ್ನು ಸಮೀಪಿಸಿದಾಗ ಡೇಟಾ ವಾರ್ನಿಂಗ್' ವೈಶಿಷ್ಟ್ಯವು  ನಿಮ್ಮನ್ನು ಅಲರ್ಟ್ ಮಾಡುತ್ತದೆ.ನಿಮ್ಮ ಡೇಟಾದ ಅನಗತ್ಯ ಬಳಕೆಯನ್ನು ತಡೆಯಲು ಈ ವೈಶಿಷ್ಟ್ಯಗಳು ಸಹಾಯ ಮಾಡುತ್ತವೆ. ಇವುಗಳೊಂದಿಗೆ ನೀವು ಎಷ್ಟು  ಡೇಟಾವನ್ನು ಬಳಸುತ್ತಿದ್ದೀರಿ ಎನ್ನುವುದನ್ನು ಕೂಡಾ ತಿಳಿದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News