Free WiFi: ಆಗಸ್ಟ್ 15 ರಿಂದ ಈ ರಾಜ್ಯದ ನಗರಗಳಲ್ಲಿನ ನಾಗರಿಕರಿಗೆ ಸಿಗಲಿದೆ ಉಚಿತ ವೈ-ಫೈ ಸೌಲಭ್ಯ

Free WiFi - ಉತ್ತರ ಪ್ರದೇಶದಲ್ಲಿ, ಆಗಸ್ಟ್ 15 ರಿಂದ, ಪ್ರತಿ ನಗರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸಮೀಪವಿರುವ ಸ್ಥಳಗಳು, ತಹಸಿಲ್ ಕಚೇರಿ , ನ್ಯಾಯಾಲಯ, ಬ್ಲಾಕ್ ಆಫೀಸ್, ರಿಜಿಸ್ಟ್ರಾರ್ ಕಚೇರಿ ಮತ್ತು ಮುಖ್ಯ ಮಾರುಕಟ್ಟೆಗಳಲ್ಲಿ ಉಚಿತ ವೈಫೈ (Free Wi-Fi Service) ಸೌಲಭ್ಯ ಲಭ್ಯವಿರಲಿದೆ.  

Written by - Nitin Tabib | Last Updated : Jul 24, 2021, 08:17 PM IST
  • ಆಗಸ್ಟ್ 15 ರಿಂದ ಉತ್ತರ ಪ್ರದೇಶದ ಜನರಿಗೆ ಸಿಗಲಿದೆ ಉಚಿತ ವೈ-ಫೈ ಸೇವೆ.
  • ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜನತೆಗೆ ಬಹುದೊಡ್ಡ ಉಡುಗೊರೆ ನೀಡಿದ ಯೋಗಿ ಸರ್ಕಾರ.
  • ಸಿಎಂ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಚಿತ ವೈಫೈ ಸೌಲಭ್ಯ ಒದಗಿಸುವ ಅಭಿಯಾನದಲ್ಲಿ ನಿರತರಾಗಿದ್ದಾರೆ.
Free WiFi: ಆಗಸ್ಟ್ 15 ರಿಂದ ಈ ರಾಜ್ಯದ ನಗರಗಳಲ್ಲಿನ ನಾಗರಿಕರಿಗೆ ಸಿಗಲಿದೆ ಉಚಿತ ವೈ-ಫೈ ಸೌಲಭ್ಯ title=
Free WiFi (File Photo)

Free WiFi - ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆ ಉತ್ತರ ಪ್ರದೇಶದ ಯುವಕರಿಗೆ ಪಾಲಿಗೆ ದೊಡ್ಡ ಉಡುಗೊರೆಯೊಂದನ್ನೇ ಹೊತ್ತು ತರಲಿದೆ. ಹೌದು, ಆಗಸ್ಟ್ 15 ರಿಂದ ಯುಪಿ (Uttar Pradesh) ನಾಗರಿಕರಿಗೆ ಉಚಿತ ವೈ-ಫೈ ಸೇವೆ ಸಿಗಲಿದೆ. ಇದರ ಅಡಿಯಲ್ಲಿ ಜನರು, ಅದರಲ್ಲೂ ವಿಶೇಷವಾಗಿ ಯುವಕರು ಎಲ್ಲಾ 75 ಜಿಲ್ಲೆಗಳು, ಪ್ರಧಾನ ಕಚೇರಿ, ಪುರಸಭೆ ಕಾರ್ಯಾಲಯ ಮತ್ತು 17 ಪುರಸಭೆ ನಿಗಮಗಳು ಮತ್ತು ರಾಜ್ಯದ 217 ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ಸೌಲಭ್ಯದ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇದೀಗ ಜನರಿಗೆ ಉಚಿತ ವೈಫೈ ಸೌಲಭ್ಯವನ್ನು ಒದಗಿಸುವ ಅಭಿಯಾನದಲ್ಲಿ ನಿರತರಾಗಿದ್ದು, ಇದರ ಅಡಿಯಲ್ಲಿ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಆಯುಕ್ತರು, ಡಿಎಂ ಮತ್ತು ಪುರಸಭೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ .

ಆಗಸ್ಟ್ 15 ರಿಂದ ಫ್ರೀ ವೈ-ಫೈ
ಆಗಸ್ಟ್ 15 ರಿಂದ ಈ ಸೌಲಭ್ಯವನ್ನು ಪ್ರತಿ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಸಮೀಪವಿರುವ ಸ್ಥಳಗಳು, ತಹಸಿಲ್ಕಚೇರಿ , ನ್ಯಾಯಾಲಯ, ಬ್ಲಾಕ್ ಆಫೀಸ್, ರಿಜಿಸ್ಟ್ರಾರ್ ಕಚೇರಿ ಮತ್ತು ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜನರಿಗೆ ಲಭ್ಯವಾಗಲಿದೆ. ರಾಜ್ಯದ ಜನರಿಗೆ ಉಚಿತ ವೈಫೈ (Internet) ಸೌಲಭ್ಯವನ್ನು ಒದಗಿಸುವ ಭರವಸೆ ರಾಜ್ಯ ಸರ್ಕಾರ (Yogi Government) ಈ ಮೊದಲೇ ನೀಡಿತ್ತು. ಪಕ್ಷದ ನಿರ್ಣಯ ಪತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ ಸೌಲಭ್ಯವನ್ನು ಲಕ್ನೋ ಸೇರಿದಂತೆ ರಾಜ್ಯದ ಅನೇಕ ನಗರಗಳಲ್ಲಿ ಪ್ರಮುಖ ಸ್ಥಳಗಳಲ್ಲಿಒದಗಿಸಲಾಗುತ್ತಿದೆ.. ಇದಕ್ಕಾಗಿ ಜನರಿಗೆ ವೈಫೈ ಸೌಲಭ್ಯವನ್ನು ಒದಗಿಸಲು ಲಖನೌದ ಹಜರತ್‌ಗಂಜ್ ಪ್ರದೇಶದಲ್ಲಿ ಹಾಟ್‌ಸ್ಪಾಟ್‌ಗಳನ್ನು ನಿರ್ಮಿಸಲಾಗಿತ್ತು. ಹಾಟ್ಸ್ಪಾಟ್ನ 50 ಮೀಟರ್ ಒಳಗೆ ಇರುವ ಜನರು ಈ ಸೌಲಭ್ಯವನ್ನು ಬಳಸಲುಸಾಧ್ಯವಾಗಿದೆ.

ಇದನ್ನೂ ಓದಿ-Google Chrome Updates: ತನ್ನ Chrome ಬ್ರೌಸರ್ ಬಳಕೆದಾರರಿಗೆ ಎರಡು ನೂತನ ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ಕ್ರೋಮ್

ಜಾಗಗಳ ಗುರುತಿಸುವಿಕೆಯ ಕಾರ್ಯ ನಡೆಯುತ್ತಿದೆ
ಈ ಯೋಜನೆಯ ಹಿನ್ನೆಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಯೋಜನೆಯನ್ನು ಪ್ರತಿ ಜಿಲ್ಲಾ ಕೇಂದ್ರ, ನಗರ ಪಾಲಿಕಾ ಪರಿಷತ್ ಮತ್ತು 17 ಪುರಸಭೆಯ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ದೊಡ್ಡ ನಗರಗಳಲ್ಲಿ (ಪುರಸಭೆ ನಿಗಮಗಳು) ಎರಡು ಸ್ಥಳಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿ ಒಂದು ಸ್ಥಳದಲ್ಲಿ ಉಚಿತ ವೈ-ಫೈ ಲಭ್ಯವಿರಲಿದೆ. ಇದರ ಅಡಿಯಲ್ಲಿ ರಾಜ್ಯ ಸರ್ಕಾರವು ಲಕ್ನೋ, ಕಾನ್ಪುರ್, ಆಗ್ರಾ, ಅಲಿಗಡ್, ವಾರಣಾಸಿ, ಪ್ರಯಾಗರಾಜ್, ಝಾನ್ಸಿ, ಬರೇಲಿ, ಸಹರಾನ್ಪುರ್, ಮೊರಾದಾಬಾದ್, ಗೋರಖ್ಪುರ್, ಅಯೋಧ್ಯೆ, ಮೀರತ್, ಶಹಜಹಾನ್ಪುರ್, ಗಾಜಿಯಾಬಾದ್, ಮಥುರಾ-ವೃಂದಾವನ್ ಮತ್ತು ಫಿರೋಜಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಗರಗಳ ಜೊತೆಗೆ, ಈ ಸೌಲಭ್ಯವನ್ನು ನಗರಸಭೆಯ ನಗರಗಳಲ್ಲಿ ಒದಗಿಸಲಾಗುವದು ಎನ್ನಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ತಹಸಿಲ್ ಕಚೇರಿ , ಕೋರ್ಟ್, ಬ್ಲಾಕ್ ಮತ್ತು ರಿಜಿಸ್ಟ್ರಾರ್ ಕಚೇರಿ ಮತ್ತು ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುವುದು. ಇದಕ್ಕಾಗಿ ಸ್ಥಳವನ್ನು ಗುರುತಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಇದನ್ನೂ ಓದಿ-WhatsApp Latest Feature: ವಾಟ್ಸ್ ಆಪ್ ನಲ್ಲಿ ಬಂತು Group Video/Voice Callಗೆ ಸಂಬಂಧಿಸಿದ ಈ ಅದ್ಭುತ ವೈಶಿಷ್ಟ್ಯ

ಇಂಟರ್ನೆಟ್ ಸ್ಪೀಡ್ ಕುರಿತು ವಿಶೇಷ ಗಮನಹರಿಸಲಾಗುವುದು
ಈ ಯೋಜನೆಯ ಅನುಷ್ಠಾನಕ್ಕಾಗಿ ನಗರ ನಿಗಮದ ಅಧಿಕಾರಿಗಳು ಇಂಟರ್ನೆಟ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ವೈ-ಫೈನ, ಇಂಟರ್ನೆಟ್ ವೇಗದ ಬಗ್ಗೆ  ವಿಶೇಷ ಕಾಳಜಿ ವಹಿಸಲಾಗುವುದು. ನಗರಸಭೆ ಆಯುಕ್ತರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ಅಥವಾ ನಗರ ಸಂಸ್ಥೆಗಳು ತಮ್ಮ ಮೂಲದಿಂದ ವೆಚ್ಚವನ್ನು ಭರಿಸುತ್ತವೆ ಎಂದು ಸೂಚನೆ ನೀಡಲಾಗಿದೆ. ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡುವಂತೆ ನಿಗಮಗಳಿಗೆ ಕೋರಲಾಗಿದೆ. ಈ ಸೇವೆಯನ್ನು ಒದಗಿಸಲು ಅಂತರ್ಜಾಲ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಮತ್ತು ಉತ್ತಮ ನೆಟ್ವರ್ಕ್ ನಿರ್ವಹಣೆಯ ಜವಾಬ್ದಾರಿ ಅವರ ಮೇಲೆ ಇರಲಿದೆ. ಇದರಿಂದ ಈ ಯೋಜನೆ ಸರಿಯಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಹೊಂದಲಾಗಿದೆ.

ಇದನ್ನೂ ಓದಿ-2008 GO20 Asteroid: ನಾಳೆ ಭೂಮಿಯ ತುಂಬಾ ಸನೀಹದಿಂದ ಹಾದುಹೋಗಲಿದೆ ಈ ಕ್ಷುದ್ರಗ್ರಹ, ಭೂಮಿಯ ಮೇಲೆ ಏನು ಪ್ರಭಾವ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News