Wi-Fi Password: ನಿಮ್ಮ ವೈ-ಫೈ ಪಾಸ್‌ವರ್ಡ್ ಮರೆತಿರುವಿರಾ? ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ

Wi-Fi Password: ವೈ-ಫೈ ಪಾಸ್‌ವರ್ಡ್ ಮರೆಯುವುದು ಸರ್ವೇ ಸಾಮಾನ್ಯ. ಆದರೆ, ಕೆಲವು ಸಿಂಪಲ್ ವಿಧಾನಗಳ ಮೂಲಕ ನೀವು ನಿಮ್ಮ ವೈ-ಫೈ ಪಾಸ್‌ವರ್ಡ್ ಅನ್ನು ಸುಲಭವಾಗಿ ಕಂಡು ಹಿಡಿಯಬಹುದು. 

Written by - Yashaswini V | Last Updated : Mar 1, 2024, 02:11 PM IST
  • ಯಾವುದೇ ಒಂದು ಸಾಧನದಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ಸೇವ್ ಮಾಡಿದ್ದರೆ, ಅದನ್ನು ಮತ್ತೆ ನಮೂದಿಸುವ ಅಗತ್ಯವಿಲ್ಲ.
  • ನೀವು ಆ ವೈ-ಫೈ ವ್ಯಾಪ್ತಿಯೊಳಗೆ ಬಂದ ತಕ್ಷಣ, ನಿಮ್ಮ ಫೋನ್ ಅಥವಾ ಸಾಧನದಲ್ಲಿನ ವೈ-ಫೈ ಸ್ವಯಂಚಾಲಿತವಾಗಿ ಸಂಪರ್ಕಗೊಳ್ಳುತ್ತದೆ.
  • ಹಾಗಾಗಿ, ನಾವು ಪದೇ ಪದೇ ಪಾಸ್‌ವರ್ಡ್ ಉಪಯೋಗಿಸದೇ ಇರುವುದರಿಂದ ಹಲವು ಬಾರಿ ವೈ-ಫೈ ಪಾಸ್‌ವರ್ಡ್ ಮರೆತುಬಿಡುತ್ತೇವೆ.
Wi-Fi Password: ನಿಮ್ಮ ವೈ-ಫೈ ಪಾಸ್‌ವರ್ಡ್ ಮರೆತಿರುವಿರಾ? ಈ ರೀತಿ ಸುಲಭವಾಗಿ ಪತ್ತೆ ಹಚ್ಚಿ  title=

Wi-Fi Password: ನಿಮ್ಮ ಮನೆ ಅಥವಾ ಕಚೇರಿಯ ವೈ-ಫೈ ಪಾಸ್‌ವರ್ಡ್ ಅನ್ನು ನೀವು ಮರೆತಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನೀವು ಕ್ಷಣಾರ್ಧದಲ್ಲಿ ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. Android ಮತ್ತು iPhone ನಲ್ಲಿ  ಸೇವ್ ಮಾಡಲಾದ ವೈ-ಫೈ ಪಾಸ್‌ವರ್ಡ್‌ಗಳನ್ನು ಕಂಡು ಹಿಡಿಯಲು ಕೆಲವು ಸರಳ ಟ್ರಿಕ್ ಗಳು ತುಂಬಾ ಪ್ರಯೋಜನಕಾರಿ ಆಗಿದೆ. 

ವಾಸ್ತವವಾಗಿ, ಯಾವುದೇ ಒಂದು ಸಾಧನದಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ಸೇವ್ ಮಾಡಿದ್ದರೆ, ಅದನ್ನು ಮತ್ತೆ ನಮೂದಿಸುವ ಅಗತ್ಯವಿಲ್ಲ. ನೀವು ಆ ವೈ-ಫೈ ವ್ಯಾಪ್ತಿಯೊಳಗೆ ಬಂದ ತಕ್ಷಣ, ನಿಮ್ಮ ಫೋನ್ ಅಥವಾ ಸಾಧನದಲ್ಲಿನ ವೈ-ಫೈ ಸ್ವಯಂಚಾಲಿತವಾಗಿ ಸಂಪರ್ಕಗೊಳ್ಳುತ್ತದೆ. ಹಾಗಾಗಿ, ನಾವು ಪದೇ ಪದೇ ಪಾಸ್‌ವರ್ಡ್ ಉಪಯೋಗಿಸದೇ ಇರುವುದರಿಂದ ಹಲವು ಬಾರಿ ವೈ-ಫೈ ಪಾಸ್‌ವರ್ಡ್ ಮರೆತುಬಿಡುತ್ತೇವೆ.

ಸ್ನೇಹಿತರು/ಸಂಬಂಧಿಕರು ಮನೆಗೆ ಬಂದಾಗ ವೈ-ಫೈ ಪಾಸ್‌ವರ್ಡ್ ಅನ್ನು ಕೇಳಿದಾಗ ಅಯ್ಯೋ ವೈ-ಫೈ ಪಾಸ್‌ವರ್ಡ್ ಮರೆತೇ ಹೋಗಿದೆ ಎನ್ನುವುದು ಬಹುತೇಕ ಜನರ ಪ್ರತಿಕ್ರಿಯೆ ಆಗಿರುತ್ತದೆ. ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗಬಹುದು. ಆದರೆ, ಈ ಬಗ್ಗೆ ಚಿಂತಿಸುವು ಅಗತ್ಯವಿಲ್ಲ. ಕೆಲವು ಟ್ರಿಕ್ ಬಳಸಿ ಕೆಲವೇ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು  ನಿಮ್ಮ ಫೋನ್‌ನಲ್ಲಿ ಸೇವ್ ಮಾಡಿರುವ ವೈ-ಫೈ ಪಾಸ್‌ವರ್ಡ್ ಅನ್ನು ಬಹಳ ಸುಲಭವಾಗಿ ಪತ್ತೆ ಹಚ್ಚಬಹುದು. ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ನೀವು ಸೇವ್ ಮಾಡಿರುವ ಪಾಸ್‌ವರ್ಡ್‌ಗಳನ್ನು ಪತ್ತೆ ಹಚ್ಚುವ ವಿಧಾನ ಸ್ವಲ್ಪ ವಿಭಿನ್ನವಾಗಿದೆ. 

ಇದನ್ನೂ ಓದಿ- Google Pay: ಜೂನ್‌ನಿಂದ ಈ ದೇಶದಲ್ಲಿ ಕಾರ್ಯನಿರ್ವಹಿಸಲ್ಲ Gpay

ಆಂಡ್ರಾಯ್ಡ್  ಫೋನ್‌ನಲ್ಲಿ ನಿಮ್ಮ ವೈ-ಫೈ ಪಾಸ್‌ವರ್ಡ್ ಪತ್ತೆ ಹಚ್ಚಲು ಈ ಹಂತಗಳನ್ನು ಅನುಸರಿಸಿ: 
ಹಂತ 1: - ಆಂಡ್ರಾಯ್ಡ್  ಫೋನ್‌ನಲ್ಲಿ ಸೇವ್ ಮಾಡಲಾದ ವೈ-ಫೈ ಪಾಸ್‌ವರ್ಡ್ ಪತ್ತೆ ಹಚ್ಚುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ ಮೊದಲು ನಿಮ್ಮ ವೈ-ಫೈ ಆಯ್ಕೆಗೆ ಹೋಗಬೇಕು. 

ಹಂತ 2:- ಬಳಿಕ ನಿಮ್ಮ ವೈ-ಫೈ ನೆಟ್‌ವರ್ಕ್ ಮೇಲೆ ಕ್ಲಿಕ್ ಮಾಡಿ.

ಹಂತ 3: ಈಗ ನಿಮ್ಮ ಸಂಪರ್ಕಿತ ಸಾಧನದ ವೈ-ಫೈ ಪಕ್ಕದಲ್ಲಿ ಗೋಚರಿಸುವ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.

ಹಂತ 4: ಇಲ್ಲಿ ಪಾಸ್‌ವರ್ಡ್ ಐ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಬಳಿಕ ನಿಗದಿತ ಜಾಗದಲ್ಲಿ ಸಾಧನದ ಪಿನ್ ನಮೂದಿಸಿ. 

ಹಂತ 5: ನಂತರ ನಿಮ್ಮ ವೈ-ಫೈ ಪಾಸ್‌ವರ್ಡ್ ಗೋಚರಿಸುತ್ತದೆ. 

ಇದನ್ನೂ ಓದಿ- YouTube Playlist: ಯೂಟ್ಯೂಬ್‌ನಲ್ಲಿ ನೆಚ್ಚಿನ ವಿಡಿಯೋಗಳ ಪ್ಲೇ ಲಿಸ್ಟ್ ರಚಿಸಲು ಇಲ್ಲಿದೆ ಸುಲಭ ಮಾರ್ಗ

ಐಫೋನ್‌ನಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ಹೇಗೆ ನೋಡುವುದು? 
>> ನಿಮ್ಮ ಐಫೋನ್‌ನಲ್ಲಿ ವೈ-ಫೈ ಪಾಸ್‌ವರ್ಡ್ ಅನ್ನು ವೀಕ್ಷಿಸಲು ಮೊದಲು ಐಫೋನ್‌ನ ವೈ-ಫೈ ವಿಭಾಗಕ್ಕೆ ಹೋಗಿ. 
>> ನಂತರ ಸಂಪರ್ಕಿತ Wi-Fi ನೆಟ್ವರ್ಕ್ ಮೇಲೆ ಕ್ಲಿಕ್ ಮಾಡಿ.
>> ಇದರ ಮುಂದೆ ಕಾಣುವ i ಐಕಾನ್ ಮೇಲೆ ಕ್ಲಿಕ್ ಮಾಡಿ.
>>  ಪಾಸ್‌ವರ್ಡ್ ಅನ್‌ಲಾಕ್ ಮಾಡಲು, ನೀವು ಫೇಸ್ ಐಡಿ ಮತ್ತು ಟಚ್ ಐಡಿಯನ್ನು ಬಳಸಬೇಕಾಗುತ್ತದೆ.
>> ನಂತರ ಇಲ್ಲಿ ನೀವು ಸೇವ್ ಮಾಡಲಾದ ಪಾಸ್‌ವರ್ಡ್ ಗೋಚರಿಸುತ್ತದೆ. 

ಈ ರೀತಿಯಾಗಿ ನಿಮ್ಮ ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲಿ ಸೇವ್ ಮಾಡಲಾಗಿರುವ ವೈ-ಫೈ ಪಾಸ್‌ವರ್ಡ್ ಅನ್ನು ಸುಲಭವಾಗಿ ಕಂಡು ಹಿಡಿಯಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News