ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ

How To Avoid SmartPhone: ನೀವು ನಿತ್ಯ ನಿಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದರೆ, ಕೆಲವು ಸರಳವಾದ ಸಲಹೆಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಈ ಕೆಟ್ಟ ಅಭ್ಯಾಸವನ್ನು ಬದಲಾಯಿಸಬಹುದು. 

Written by - Yashaswini V | Last Updated : Jan 9, 2024, 11:50 AM IST
  • ಕೆಲವರಿಗೆ ಮಲಗುವಾಗಲೂ ಸ್ಮಾರ್ಟ್‌ಫೋನ್‌ ಅನ್ನು ತಮ್ಮ ಪಕ್ಕದಲ್ಲೇ ಇಟ್ಟು ಮಲಗುವ ಅಭ್ಯಾಸವಿರುತ್ತದೆ.
  • ಇದು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
  • ಇದನ್ನು ತಪ್ಪಿಸಲು ನೀವು ಮಲಗುವಾಗ ಸ್ಮಾರ್ಟ್‌ಫೋನ್‌ ಅನ್ನು ದೂರವಿಟ್ಟು ಮಲಗಿ.
ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ title=

How To Avoid SmartPhone: ಈ ಬದಲಾದ ಜಗತ್ತಿನಲ್ಲಿ ಮೊಬೈಲ್ ಫೋನ್ ಅದರಲ್ಲೂ ಸ್ಮಾರ್ಟ್‌ಫೋನ್‌  ನಮ್ಮ ಕೆಲಸಗಳನ್ನು ಸುಲಭಗೊಳಿಸಿದೆ ಎಂಬುದನ್ನು ಸುಲಭವಾಗಿ ತಳ್ಳಿಹಾಕಲು ಕೂಡ ಸಾಧ್ಯವಿಲ್ಲ. ಇನ್ನೂ ಕೆಲವರಿಗಂತೂ ಅವರ ಬಹುತೇಕ ಕೆಲಸ ಮೊಬೈಲ್ ಇಲ್ಲದೆ ಸಾಧ್ಯವೇ ಇಲ್ಲ.  ಆದರೆ, ಗ್ಯಾಜೆಟ್‌ ಅನ್ನು ಪ್ರಮುಖ ಉದ್ದೇಶಗಳಿಗಾಗಿ, ಬೇಕಾದಷ್ಟೂ ಹಿತ ಮಿತವಾಗಿ ಬಳಸಿಕೊಂಡರೆ ಮಾತ್ರವೇ ಅದರ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಬಹುದು. 

ನೀವು ನಿತ್ಯ ನಿಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಿದ್ದರೆ, ಕೆಲವು ಸರಳವಾದ ಸಲಹೆಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಈ ಕೆಟ್ಟ ಅಭ್ಯಾಸವನ್ನು ಬಿಡಲು ಸಹಕಾರಿಯಾಗಬಹುದು. 

ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ:-
ನೀವು ಸ್ಮಾರ್ಟ್‌ಫೋನ್‌/ಫೋನ್ ಬಳಕೆಯನ್ನು ಕಡಿಮೆ ಮಾಡಲು ಮೊಟ್ಟ ಮೊದಲನೆಯದಾಗಿ ಮಾಡಬೇಕಿರುವ ಕೆಲಸ ಎಂದರೆ ಫೋನ್ ಅನ್ನು ಸದಾ ಕೈಯಲ್ಲಿ ಹಿಡಿಯುವ ಬದಲಿಗೆ ಅಗತ್ಯವಿಲ್ಲದಿದ್ದಾಗ ಫೋನ್ ಅನ್ನು ದೂರದಲ್ಲಿಡಿ. ಕನಿಷ್ಠ ನೀವು ಕುಳಿತುಕೊಳ್ಳುವ ಜಾಗದಿಂದ ಸ್ವಲ್ಪ ದೂರದಲ್ಲಿ ಫೋನ್ ಇಡುವುದನ್ನು ರೂಢಿಸಿಕೊಳ್ಳಿ. ಆಗ ನಿಮಗೆ ನೆನಪಾದರೂ ತಕ್ಷಣ ಫೋನ್ ಸ್ಪರ್ಶಿಸುವುದನ್ನು ತಡೆಯಬಹುದು. 

* ಸ್ಮಾರ್ಟ್‌ಫೋನ್‌ನಿಂದ ಅಂತರ ಕಾಯ್ದುಕೊಳ್ಳಿ: 

ಇದನ್ನೂ ಓದಿ- ನೀವು ಸದಾ ಸ್ಮಾರ್ಟ್‌ಫೋನ್‌ ಬಳಸ್ತೀರಾ! ನಿಮ್ಮ ಬ್ರೈನ್ ಮೇಲೆ ಅದು ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ!

* ನೋಟಿಫಿಕೇಶನ್ ಆಫ್ ಮಾಡಿ: 

ಪದೇ ಪದೇ ಬರುವ ನೋಟಿಫಿಕೇಶನ್ ಗಳು ಕೂಡ ನಮ್ಮ ಗಮನವನ್ನು ಸ್ಮಾರ್ಟ್‌ಫೋನ್‌ನತ್ತ ಸೆಳೆಯುತ್ತವೆ. ಇದನ್ನು ತಪ್ಪಿಸಲು ಮೊದಲು ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ ಅಧಿಸೂಚನೆಗಳನ್ನು ಆಫ್ ಮಾಡಿ. ಇದು ನಿಮ್ಮ ಗಮನವನ್ನು ಮತ್ತೆ ಮತ್ತೆ ಫೋನ್‌ನತ್ತ ತಿರುಗಿಸದಂತೆ ಮಾಡುತ್ತದೆ. 

* ಕೆಲಸ ಮಾಡುವ ವೇಳೆ ಫೋನ್ ಬಳಕೆ: 

ಓದುವುದಿರಲಿ, ಕಚೇರಿ ಸಂಬಂಧಿತ ಕೆಲಸವಿರಲಿ, ಅಡುಗೆ ಕೆಲಸವಿರಲಿ ಯಾವುದೇ ಬೇರೆ ಕೆಲಸಗಳನ್ನು ಮಾಡುವಾಗಲಾದರೂ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನಿಮ್ಮಿಂದ ದೂರ ಇಡಿ. ಸಾಧ್ಯವಾದಷ್ಟು ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಬಳಕೆಯನ್ನು ನಿಷೇಧಿಸಿ. ಇದು ನಿಮ್ಮ ಕೆಲಸದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸುತ್ತದೆ. ಮಾತ್ರವಲ್ಲ, ಫೋನ್ ಇಲ್ಲದಿದ್ದರೂ ನೀವು ಜೀವಿಸಬಹುದು ಎಂಬುದನ್ನೂ ಖಾತ್ರಿ ಪಡಿಸುತ್ತದೆ. 

* ಮಲಗುವಾಗ ಸ್ಮಾರ್ಟ್‌ಫೋನ್‌ನಿಂದ ದೂರವಿರಿ: 

ಕೆಲವರಿಗೆ ಮಲಗುವಾಗಲೂ ಸ್ಮಾರ್ಟ್‌ಫೋನ್‌ ಅನ್ನು ತಮ್ಮ ಪಕ್ಕದಲ್ಲೇ ಇಟ್ಟು ಮಲಗುವ ಅಭ್ಯಾಸವಿರುತ್ತದೆ. ಇದು ನಿಮ್ಮ ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇದನ್ನು ತಪ್ಪಿಸಲು ನೀವು ಮಲಗುವಾಗ ಸ್ಮಾರ್ಟ್‌ಫೋನ್‌ ಅನ್ನು ದೂರವಿಟ್ಟು ಮಲಗಿ. ಇದರಿಂದ ನೆಮ್ಮದಿಯ ನಿದ್ರೆ ಪಡೆಯುವುದರ ಜೊತೆಗೆ ಸಮಯವ್ಯರ್ಥವೂ ತಪ್ಪುತ್ತದೆ. 

* ಪುಸ್ತಕಗಳನ್ನು ಓದಿ: 

ನಿಮ್ಮ ಅತಿಯಾದ ಸ್ಮಾರ್ಟ್‌ಫೋನ್‌ ಗೀಳನ್ನು ತಪ್ಪಿಸಲು ಫೋನ್ ಸ್ವಿಚ್ ಆಫ್ ಮಾಡಿ ಈ ಸಮಯವನ್ನು ಪುಸ್ತಕಗಳನ್ನು ಓದಲು ಬಳಸಿಕೊಳ್ಳಿ. ಇದರಿಂದ ಜ್ಞಾನಾರ್ಜನೆಯ ಜೊತೆಗೆ ಕೆಲಕಾಲ ಫೋನ್ ನೋಡುವುದನ್ನೂ ತಪ್ಪಿಸಬಹುದು. 

ಇದನ್ನೂ ಓದಿ- Google Accounts: ಹ್ಯಾಕರ್‌ಗಳು ಪಾಸ್‌ವರ್ಡ್‌ ಇಲ್ಲದೆಯೇ ನಿಮ್ಮ ಅಕೌಂಟ್‌ಗಳನ್ನು ನಿಯಂತ್ರಿಸಬಲ್ಲರು! ಹೇಗೆ ಗೊತ್ತಾ? 

* ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ವೇಳಾಪಟ್ಟಿ: 

ನಿತ್ಯ ನಿಮ್ಮ ಬಿಡುವಿನ ಸಮಯದಲ್ಲಿ ಸ್ಮಾರ್ಟ್‌ಫೋನ್‌ ವೀಕ್ಷಿಸಿ ಸಮಯ ವ್ಯರ್ಥ ಮಾಡುವುದರ ಬದಲಿಗೆ ಈ ಸಮಯದಲ್ಲಿ ನಿಮಗಿಷ್ಟವಾದ ಬೇರೆ ಯಾವುದಾದರೂ ಅಭ್ಯಾಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಪ್ರಯತ್ನಿಸಿ. ವಾಕಿಂಗ್, ಸ್ನೇಹಿತರ ಭೇಟಿ, ತೋಟಗಾರಿಕೆ, ಪೆಯಿಂಟಿಂಗ್, ಅಡುಗೆ ಮಾಡುವುದು ಹೀಗೆ ನಿಮ್ಮಿಷ್ಟದ ಕೆಲಸದಲ್ಲಿ ನಿಮ್ಮನ್ನು ಎಂಗೇಜ್ ಮಾಡಲು ಪ್ರಯತ್ನಿಸಿ. 

* ಅಗತ್ಯವಿಲ್ಲದಿದ್ದಾಗ ಮೊಬೈಲ್ ಗೆ ಹೇಳಿ "NO":

ನಿಮಗೆ ಫೋನ್‌ನಲ್ಲಿ ಏನೂ ಕೆಲಸ ಇಲ್ಲದಿದ್ದಾಗ ಮನಸ್ಸಿಗೆ ಬೇಕೆಂದರೂ ಫೋನ್ ಮುಟ್ಟುವುದನ್ನು ತಪ್ಪಿಸಿ. ದಿನಕ್ಕೆ ಕನಿಷ್ಠ ಒಂದೆರಡು ಗಂಟೆಗಳ ಕಾಲವಾದರೂ ಮೊಬೈಲ್‌ನಿಂದ ದೂರ ಉಳಿಯಿರಿ. ಇದೇ ಸಮಯವನ್ನು ನಿಮಗಾಗಿ ನೀವು ನಿಮ್ಮೊಂದಿಗೆ ಮಾತನಾಡಲು, ನಿಮ್ಮ ಮನಸ್ಸಿನ ಮಾತುಗಳನ್ನು ಕೇಳಲು ಬಳಸಿಕೊಳ್ಳಿ. ಇದರಿಂದ ಸಕಾರಾತ್ಮಕವಾಗಿ ನೀವು ನಿಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತದೆ. 

ಪ್ರತಿದಿನ ಎಷ್ಟು ಸಮಯ ಫೋನ್ ನೋಡುವುದು ಆರೋಗ್ಯಕರ? 

ಆರೋಗ್ಯ ತಜ್ಞರ ಪ್ರಕಾರ ಪ್ರತಿದಿನ 2-3 ಗಂಟೆಗಳ  ಸ್ಕ್ರೀನ್ ಟೈಮ್ ಆರೋಗ್ಯಕರ ಎಂದು ಹೇಳಲಾಗುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  1. https://bit.ly/3AClgDdAndroid Link - 
  2. https://apple.co/3wPoNgrApple Link - 
  3. ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
  4. https://bit.ly/3n6d2R8Twitter Link - 
  5.  https://bit.ly/3HhqmcjFacebook Link - 
  6. Youtube Link - https://www.youtube.com/live/RNn4I7iIaYE?si=3G4W5dh0oCdFnu-T

Trending News