ನಾಳೆಯಿಂದ ಆರಂಭವಾಗಲಿದೆ Flipkart Sale ; ಅಗ್ಗದ ಬೆಲೆಗೆ ಸಿಗಲಿದೆ ಸ್ಮಾರ್ಟ್ ಪೋನ್

ನಾಳೆಯಿಂದ Flipkart Sale ಆರಂಭವಾಗಲಿದೆ.  Shop From Home Days ಹೆಸರಿನಲ್ಲಿ ಈ ಸೇಲ್ ಆರಂಭವಾಗಲಿದೆ. ನಾಳೆಯಿಂದ ಅಂದರೆ ಮೇ 27ರಿಂದ  ಮೇ 29ರವರೆಗೆ ಈ ಸೇಲ್ ನಡೆಯಲಿದೆ.

Written by - Ranjitha R K | Last Updated : May 26, 2021, 11:46 AM IST
  • Flipkart Sale ಮೇ 27 ರಂದು ಪ್ರಾರಂಭವಾಗಲಿದ್ದು, ಮೇ 29 ರಂದು ಕೊನೆಗೊಳ್ಳಲಿದೆ.
  • ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರರಿಗೆ 10% ತ್ವರಿತ ರಿಯಾಯಿತಿ ಸಿಗಲಿದೆ.
  • Shop From Home Days ಹೆಸರಿನಲ್ಲಿ ನಡೆಯಲಿದೆ ಸೇಲ್
ನಾಳೆಯಿಂದ ಆರಂಭವಾಗಲಿದೆ Flipkart Sale ; ಅಗ್ಗದ ಬೆಲೆಗೆ ಸಿಗಲಿದೆ ಸ್ಮಾರ್ಟ್ ಪೋನ್ title=
Shop From Home Days ಹೆಸರಿನಲ್ಲಿ ನಡೆಯಲಿದೆ ಸೇಲ್ (file photo)

ನವದೆಹಲಿ : ನಾಳೆಯಿಂದ Flipkart Sale ಆರಂಭವಾಗಲಿದೆ.  Shop From Home Days ಹೆಸರಿನಲ್ಲಿ ಈ ಸೇಲ್ ಆರಂಭವಾಗಲಿದೆ. ನಾಳೆಯಿಂದ ಅಂದರೆ ಮೇ 27ರಿಂದ  ಮೇ 29ರವರೆಗೆ ಈ ಸೇಲ್ ನಡೆಯಲಿದೆ. ಇದರಲ್ಲಿ HDFC Bank ಗ್ರಾಹಕರಿಗೆ 10% ತ್ವರಿತ ರಿಯಾಯಿತಿ (Instant Discount) ಸಿಗಲಿದೆ. ಈ ರಿಯಾಯಿತಿ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ (EMI) ಟ್ರಾನ್ಸಾಕ್ಶನ್ ಮೇಲೆ ಲಭ್ಯವಿರುತ್ತದೆ. ಸೇಲ್ ನಲ್ಲಿ ಸ್ಮಾರ್ಟ್ ಪೋನ್ ಗಳ ಮೇಲೆ No-cost-EMI, ಎಕ್ಸ್ ಚೇಂಜ್ ಆಫರ್ ಜೊತೆಗೆ ಡಿಸ್ಕೌಂಟ್ ಕೂಡಾ ಸಿಗಲಿದೆ. ಇದಲ್ಲದೆ, ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರೀಸ್ ಮೇಲೆ 80 ಪ್ರತಿಶತದವರೆಗೆ ರಿಯಾಯಿತಿ ಲಭ್ಯವಿರಲಿದೆ. 

Flipkart Sale ಸಿಗಲಿರುವ ಆಫರ್ ಗಳು : 
Flipkart Sale ನಲ್ಲಿ ಟಿವಿ ಮತ್ತು ಉಪಕರಣಗಳ ಮೇಲೆ 75%ದಷ್ಟು  ರಿಯಾಯಿತಿ ಸಿಗಲಿದೆ. ಅಲ್ಲದೆ, ಇತರ ಉತ್ಪನ್ನಗಳ ಮೇಲೆಯೂ ಆಕರ್ಷಕ ಕೊಡುಗೆಗಳು ಸಿಗಲಿವೆ. ಇನ್ನು ಸೇಲ್‌ನಲ್ಲಿ ಲಭ್ಯವಿರುವ ಮೊಬೈಲ್ ಆಫರ್ ಗಳ ಬಗ್ಗೆ ಹೇಳುವುದಾದರೆ,  Realme C20, Realme Narzo 30A ಮತ್ತು  Realme 9 Power ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಪಡೆಯಬಹುದು. ಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಪವರ್ ಫುಲ್ ಬ್ಯಾಟರಿಯನ್ನು ಹೊಂದಿದೆ.  ಇದಲ್ಲದೆ Flipkart Sale ನಲ್ಲಿ Realme X50 Pro  ಸ್ಮಾರ್ಟ್ ಫೋನ್ ಅನ್ನು 24,999 ರೂಗಳಿಗೆ ಖರೀದಿಸಬಹುದು. 

ಇದನ್ನೂ ಓದಿ :  Alert! ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ Apps ಇದ್ದರೆ ತಕ್ಷಣವೇ ಡಿಲೀಟ್ ಮಾಡಿ

ಫ್ಲ್ಯಾಗ್‌ಶಿಪ್ 5G  ಸ್ಮಾರ್ಟ್‌ಫೋನ್ ಅನ್ನು ಕೇವಲ 25 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. ಇದರ ಜೊತೆಗೆ Mi 10T  ಸ್ಮಾರ್ಟ್‌ಫೋನ್ ಅನ್ನು 25,499 ರೂಗಳಿಗೆ ಖರೀದಿಸಬಹುದು. Vivo X60   ಸರಣಿಯನ್ನು 37,990 ರೂಗಳಿಗೆ ಖರೀದಿಸಬಹುದು. ಈ ಸೆಲ್‌ನಲ್ಲಿ ರಿಯಲ್‌ಮೆ ನಾರ್ಜೊ 20 ಸ್ಮಾರ್ಟ್‌ಫೋನ್ ಅನ್ನು 9,999 ರೂಗಳಿಗೆ ಖರೀದಿಸಬಹುದು.  ಇದು 6000mAh ಬ್ಯಾಟರಿ ಮತ್ತು 48 MP  ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ, Realme X7 5G ಸ್ಮಾರ್ಟ್ಫೋನ್ ಅನ್ನು 17,999 ರೂಗಳಿಗೆ ಖರೀದಿಸಬಹುದು. 

Samsung F41 ಸ್ಮಾರ್ಟ್‌ಫೋನ್ ಸೆಲ್‌ನಲ್ಲಿ 14,499 ರೂಗಳಿಗೆ ಲಭ್ಯವಿರಲಿದೆ. ಈ ಫೋನ್  64 MP ಕ್ಯಾಮೆರಾದೊಂದಿಗೆ ಬರಲಿದೆ.  Poco X3  ಸ್ಮಾರ್ಟ್‌ಫೋನ್ 14,499 ರೂಗಳಿಗೆ ಲಭ್ಯವಾಗಲಿದ್ದು, ಇದು 6 GB RAM ಮತ್ತು 64 GB ಸ್ಟೋರೇಜ್ ನೊಂದಿಗೆ ಬರಲಿದೆ. ಫೋನ್‌ ಸ್ನಾಪ್‌ಡ್ರಾಗನ್ 732 G ಪ್ರೊಸೆಸರ್ ಅನ್ನು ಹೊಂದಿದೆ. Realme Narzo 30 Pro 5G ಸ್ಮಾರ್ಟ್‌ಫೋನ್ ಅನ್ನು 15,499 ರೂಗಳಿಗೆ ಮತ್ತು  Realme 8 ಸ್ಮಾರ್ಟ್‌ಫೋನ್ ಅನ್ನು ಆರಂಭಿಕ ಬೆಲೆಗೆ ಅಂದರೆ  14,499 ರೂಗಳಿಗೆ  ಖರೀದಿಸಬಹುದು. ಅದೇ ಸಮಯದಲ್ಲಿ, ರಿಯಲ್ಮೆ 8 5 G ಸ್ಮಾರ್ಟ್ಫೋನ್ ಆರಂಭಿಕ ಬೆಲೆ 13,999 ರೂಗಳಲ್ಲಿ ಲಭ್ಯವಿರುತ್ತದೆ. ಇದಲ್ಲದೆ, ಇತರ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಕೂಡಾ ಡಿಸ್ಕೌಂಟ್ ಸಿಗಲಿದೆ. 

ಇದನ್ನೂ ಓದಿ : ಈ 10 ಭಾರತೀಯ ಭಾಷೆಗಳಲ್ಲಿ Privacy Update ಬಗ್ಗೆ ನೆನಪಿಸಲಿದೆ WhatAapp..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News