huge discount on smartphone : ಕೇವಲ 99 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು Realmeಯ ಈ ಫೋನ್

ಫ್ಲಿಪ್‌ಕಾರ್ಟ್ ಪ್ರಸ್ತುತ ವಿಶೇಷ ಎಲೆಕ್ಟ್ರಾನಿಕ್ಸ್ ಸೇಲ್  ನಡೆಸುತ್ತಿದೆ.   ಈ ಸೇಲ್ ನಲ್ಲಿ  ಕೇವಲ 99 ರೂಪಾಯಿಗಳಿಗೆ Realme C11 ಸ್ಮಾರ್ಟ್ ಫೋನ್ ಖರೀದಿಸಬಹುದು. 

Written by - Ranjitha R K | Last Updated : Jan 28, 2022, 05:36 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಜ. 31 ರವರೆಗೆ ನಡೆಯಲಿದೆ ಎಲೆಕ್ಟ್ರಾನಿಕ್ಸ್ ಸೇಲ್
  • ಈ ಸೇಲ್ ನಲ್ಲಿ 99 ರೂ.ಗೆ realme ಸ್ಮಾರ್ಟ್‌ಫೋನ್ ಖರೀದಿಸಿ
  • ಜನವರಿ 31 ಸೇಲ್ ನ ಕೊನೆಯ ದಿನವಾಗಿರಲಿದೆ
huge discount on smartphone : ಕೇವಲ 99 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು Realmeಯ ಈ ಫೋನ್  title=
ಫ್ಲಿಪ್‌ಕಾರ್ಟ್‌ನಲ್ಲಿ ಜ. 31 ರವರೆಗೆ ನಡೆಯಲಿದೆ ಎಲೆಕ್ಟ್ರಾನಿಕ್ಸ್ ಸೇಲ್ (file photo)

ನವದೆಹಲಿ :  ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅನೇಕ ಆಸಕ್ತಿದಾಯಕ ಕೊಡುಗೆಗಳನ್ನು ನೀಡುತ್ತಲೇ ಬರುತ್ತಿದೆ.  ಫ್ಲಿಪ್‌ಕಾರ್ಟ್ ಪ್ರಸ್ತುತ ವಿಶೇಷ ಎಲೆಕ್ಟ್ರಾನಿಕ್ಸ್ ಸೇಲ್  (Flipkart sale) ನಡೆಸುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಎಸಿಗಳು ಮತ್ತು ಫ್ರಿಜ್‌ಗಳವರೆಗೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.  ಈ ಸೇಲ್ ನಲ್ಲಿ  ಕೇವಲ 99 ರೂಪಾಯಿಗಳಿಗೆ Realme C11 ಸ್ಮಾರ್ಟ್ ಫೋನ್ ಖರೀದಿಸಬಹುದು. 

ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ Realme C11  : 
ಮಾರುಕಟ್ಟೆಯಲ್ಲಿ Realme C11ರ  ಬೆಲೆ 9,999 ರೂ. ಈ 4G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನ ಎಲೆಕ್ಟ್ರಾನಿಕ್ಸ್ ಸೇಲ್‌ನಿಂದ ( flipkart electronics sale) ಖರೀದಿಸುವುದಾದರೆ,  10% ರಿಯಾಯಿತಿಯೊಂದಿಗೆ 8,999 ರೂ.ಗೆ ಖರೀದಿಸಬಹುದು. ಹಾಗಂತ ಆಫರ್ (Flipkart offer) ಇಲ್ಲಿಗೆ ಮುಗಿಯುವುದಿಲ್ಲ. ಈ ಡೀಲ್‌ನಲ್ಲಿ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) ಬಳಸಿದರೆ  5% ಕ್ಯಾಶ್‌ಬ್ಯಾಕ್ ಅಂದರೆ 450 ರೂಗಳ ರಿಯಾಯಿತಿ ಸಿಗಲಿದೆ. ಈ ಮೂಲಕ ಫೋನ್ ಬೆಲೆ 8,999 ರೂ.ಯಿಂದ 8,549 ರೂ.ಗೆ ಇಳಿಯಲಿದೆ.  

ಇದನ್ನೂ ಓದಿ : ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತಂದ WhatsApp..! ಏನೆಲ್ಲಾ ಇವೆ ಗೊತ್ತೇ ?

ಕೇವಲ 99 ರೂ.ಗೆ ಖರೀದಿಸಿ ಈ ಅದ್ಬುತ ಫೋನ್ : 
ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ Realme C11 ಅನ್ನು ಖರೀದಿಸುವುದಾದರೆ, ಈ ಡೀಲ್‌ನಲ್ಲಿ ಲಭ್ಯವಿರುವ ಎಕ್ಸ್‌ಚೇಂಜ್ ಆಫರ್‌ (Exchange offer) ಮೂಲಕ 8,450 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ, ಈ ಫೋನ್‌ ಬೆಲೆ ಕೇವಲ  99 ರೂಪಾಯಿಗಳಿಗೆ ಖರೀದಿಸಬಹುದು. 

ಈ ಫೋನ್‌ನ ವಿಶೇಷತೆ ಏನು ?
4G ಸೇವೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಇಂಟರ್ನಲ್  ಸ್ಟೋರೇಜ್ ಮ್ನೊಂದಿಗೆ ಬರುತ್ತದೆ. ಇದನ್ನು ಮೆಮೊರಿ ಕಾರ್ಡ್ ಸಹಾಯದಿಂದ ಇದನ್ನೂ 256GB ವರೆಗೆ ವಿಸ್ತರಿಸಬಹುದು.  Android 11 ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್‌  6.5-ಇಂಚಿನ HD + LCD ಇನ್-ಸೆಲ್ ಡಿಸ್ಪ್ಲೇ, 1,600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 5,000mAh ಬ್ಯಾಟರಿಯನ್ನು ಹೊಂದಿರಲಿದೆ. ಈ ರಿಯಲ್‌ಮಿ ಸ್ಮಾರ್ಟ್‌ಫೋನ್ (Realme Smartphone) 8MP ರಿಯೇರ್ ಕ್ಯಾಮೆರಾ ಮತ್ತು 5MP ಫ್ರಂಟ್  ಕ್ಯಾಮೆರಾದೊಂದಿಗೆ ಬರುತ್ತದೆ. ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.

ಇದನ್ನೂ ಓದಿ : Google Mapsಗೆ ಸೇರಿದ ಮತ್ತೊಂದು ವೈಶಿಷ್ಟ್ಯ, ಇನ್ಮುಂದೆ ಕೇವಲ ಪಿನ್ ಕೋಡ್ ಬಳಸಿ ವಿಳಾಸ ಹುಡುಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News