Flipkart Realme Festive Days: ಈ 5G Smartphone ಮೇಲೆ ಸಿಗಲಿದೆ 20 ಸಾವಿರಗಳ ರಿಯಾಯಿತಿ

 Realme GT Neo 2 5G ಸ್ಮಾರ್ಟ್‌ಫೋನ್ ಆಗಿದೆ. ಇದರ ಮಾರುಕಟ್ಟೆ ಬೆಲೆ  34,999 ರೂ. ಆಗಿದೆ.  ಫ್ಲಿಪ್‌ಕಾರ್ಟ್‌ನಲ್ಲಿ (Flipkart) 8% ರಿಯಾಯಿತಿಯ ನಂತರ ಈ ಸ್ಮಾರ್ಟ್‌ಫೋನ್ ಅನ್ನು 31,999 ರೂ . ಗೆ ಮಾರಾಟ ಮಾಡಲಾಗುತ್ತಿದೆ.

Written by - Ranjitha R K | Last Updated : Dec 13, 2021, 02:47 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ Realme Festive Days ಸೇಲ್
  • Realme GT Neo 2 ಮೇಲೆ 20 ಸಾವಿರ ರೂಪಾಯಿಗಳ ರಿಯಾಯಿತಿ
  • ಇಂದು ಈ ಸೇಲ್ ನ ಕೊನೆಯ ದಿನ
Flipkart Realme Festive Days: ಈ 5G Smartphone ಮೇಲೆ ಸಿಗಲಿದೆ 20 ಸಾವಿರಗಳ ರಿಯಾಯಿತಿ  title=
ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ Realme Festive Days ಸೇಲ್ (file photo)

ನವದೆಹಲಿ : ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ವಿಶೇಷ Realme Festive Days ಸೇಲ್  ನಡೆಯುತ್ತಿದೆ. ಇದರಲ್ಲಿ Realmeಯ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ.  ಇ ಸೇಲ್ ನಲ್ಲಿ Realme GT Neo 2  ಸ್ಮಾರ್ಟ್‌ಫೋನ್ ಮೇಲೆ 20 ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ. 

ಈ ಸ್ಮಾರ್ಟ್‌ಫೋನ್ ಮೇಲೆ 20 ಸಾವಿರ ರೂಪಾಯಿಗಳ ರಿಯಾಯಿತಿ ಸಿಗಲಿದೆ : 
 Realme GT Neo 2 5G ಸ್ಮಾರ್ಟ್‌ಫೋನ್ ಆಗಿದೆ. ಇದರ ಮಾರುಕಟ್ಟೆ ಬೆಲೆ  34,999 ರೂ. ಆಗಿದೆ.  ಫ್ಲಿಪ್‌ಕಾರ್ಟ್‌ನಲ್ಲಿ (Flipkart) 8% ರಿಯಾಯಿತಿಯ ನಂತರ ಈ ಸ್ಮಾರ್ಟ್‌ಫೋನ್ ಅನ್ನು 31,999 ರೂ . ಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್,  ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (credit card) ಬಳಸುವವರಿಗೆ 5% ಅಂದರೆ 1,600 ರೂಪಾಯಿಗಳ ಕ್ಯಾಶ್‌ಬ್ಯಾಕ್ (Cash back) ನೀಡಲಾಗುತ್ತದೆ. ಈ ರೀತಿಯಾಗಿ,  ಈ ಫೋನ್ ಅನ್ನು 31,999 ರೂಪಾಯಿಗಳ ಬದಲಿಗೆ 30,399 ರೂಪಾಯಿಗಳಿಗೆ ಖರೀದಿಸಬಹುದು. 

ಇದನ್ನೂ ಓದಿ : WhatsApp Privacy Feature: WhatsAppನಿಂದ ಜಬರ್ದಸ್ತ್ ಪ್ರೈವೆಸಿ ವೈಶಿಷ್ಟ್ಯ, ಇನ್ಮುಂದೆ ಯಾರೂ ಈ ಕೆಟ್ಟ ಕೆಲಸಕ್ಕಿಳಿಯುವಂತಿಲ್ಲ

ಈ ಡೀಲ್ ನಲ್ಲಿ ಎಕ್ಸ್ಚೇಂಜ್ ಆಫರ್ ಕೂಡಾ ಸೇರಿಸಲಾಗಿದೆ :
ಫ್ಲಿಪ್‌ಕಾರ್ಟ್‌ನ ಈ ಡೀಲ್‌ನಲ್ಲಿ ಎಕ್ಸ್‌ಚೇಂಜ್ ಆಫರ್ (Exchnge offer) ಕೂಡ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ, 15,450 ರೂ.ವರೆಗೆ ಉಳಿಸಬಹುದು. ಈ ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನ ಸಿಕ್ಕಿದರೆ, ಈ ಸ್ಮಾರ್ಟ್‌ಫೋನ್ ಬೆಲೆ 30,399 ರೂ.ಗಳಿಂದ 14,949 ರೂ.ಗೆ ಇಳಿಯುತ್ತದೆ. ಈ ರೀತಿಯಾಗಿ, ಒಟ್ಟಾರೆಯಾಗಿ ಈ ಡೀಲ್‌ನಲ್ಲಿ  20,050 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. 

Realme GT Neo 2 ನ ವೈಶಿಷ್ಟ್ಯಗಳು :
ಈ 5G ಸ್ಮಾರ್ಟ್‌ಫೋನ್ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. Qualcomm Snapdragon 870 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ (Smartphone), 6.62-ಇಂಚಿನ Full HD + AMOLED ಡಿಸ್ಪ್ಲೇ ಇರಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮೇನ್ ಸೆನ್ಸಾರ್  64MP, ವೈಡ್ ಆಂಗಲ್ ಲೆನ್ಸ್ 8MP ಮತ್ತು 2MP ಮ್ಯಾಕ್ರೋ ಲೆನ್ಸ್ ಇದೆ. ಸೆಲ್ಫಿ ತೆಗೆದುಕೊಳ್ಳಲು ಮತ್ತು ವೀಡಿಯೊಗಳನ್ನು ಮಾಡಲು, ನಿಮಗೆ 16MP ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯೊಂದಿಗೆ ಬರುತ್ತದೆ. 

ಇದನ್ನೂ ಓದಿ : Hidden River Found Under Sangam: ಗಂಗೆ-ಯಮುನೆಯ ಪವಿತ್ರ ಸಂಗಮದ ಕೆಳಗೆ ಮೂರನೇ ನದಿ, ನಿಬ್ಬೇರಗಾದ ವಿಜ್ಞಾನಿಗಳು

ಫ್ಲಿಪ್‌ಕಾರ್ಟ್‌ನಲ್ಲಿನ ಈ Realme ಫೆಸ್ಟಿವ್ ಡೇಸ್ ಸೇಲ್‌ನಲ್ಲಿ, ಪ್ರತಿಯೊಂದು ರಿಯಲ್‌ಮೆ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇಂದು ಈ ಮಾರಾಟದ ಕೊನೆಯ ದಿನವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News