Flipkart Hot Deal: 50 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ರಿಯಾಯಿತಿ, ಇಂದೇ ಖರೀದಿಸಿ

ಫ್ಲಿಪ್‌ಕಾರ್ಟ್‌ನಲ್ಲಿ Mi, OnePlus ಸೇರಿದಂತೆ ಹಲವು ಬ್ರಾಂಡ್‌ಗಳ ಟಿವಿಗಳ ಮೇಲೆ ಅದ್ಭುತ ರಿಯಾಯಿತಿ ಲಭ್ಯವಿದೆ.

Written by - Puttaraj K Alur | Last Updated : Jan 3, 2022, 02:48 PM IST
  • ಫ್ಲಿಪ್‌ಕಾರ್ಟ್‌ನಲ್ಲಿ Mi, OnePlus ಸೇರಿ ಹಲವು ಬ್ರಾಂಡ್‌ಗಳ ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ
  • 50 ಇಂಚಿನ ಸ್ಮಾರ್ಟ್ ಟಿವಿಯನ್ನು ಅಗ್ಗವಾಗಿ ಖರೀದಿಸಲು ಇದೇ ಸರಿಯಾದ ಅವಕಾಶ
  • ಕೇವಲ 15,599 ರೂ.ಗೆ ಖರೀದಿಸಿ iFFALCON 50 ಇಂಚಿನ Ultra 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ
Flipkart Hot Deal: 50 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭರ್ಜರಿ ರಿಯಾಯಿತಿ, ಇಂದೇ ಖರೀದಿಸಿ title=
ಅಗ್ಗದ ಬೆಲೆ ಸ್ಮಾರ್ಟ್ ಟಿವಿ ಖರೀದಿಸಿರಿ

ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿ ಪ್ರತಿದಿನ ಕೆಲವು ರಿಯಾಯತಿ ಮಾರಾಟಗಳು ನಡೆಯುತ್ತಿರುತ್ತವೆ. ಇಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಖರೀದಿ ಮೇಲೆ ಬಹುದೊಡ್ಡ ಕೊಡುಗೆಗಳು ಲಭ್ಯವಿವೆ. ಇಂದು ನಾವು ಭರ್ಜರಿ ರಿಯಾಯತಿ ಹೊಂದಿರುವ ಸ್ಮಾರ್ಟ್ ಟಿವಿ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ನೀವು ದೊಡ್ಡ ಗಾತ್ರದ ಅತ್ಯುತ್ತಮ ಟಿವಿ ಖರೀದಿಸಲು ಹುಡುಕಾಡುತ್ತಿದ್ದರೆ ಇಲ್ಲಿದೆ ಅವಕಾಶ.   

ಫ್ಲಿಪ್‌ಕಾರ್ಟ್‌ನಲ್ಲಿ Mi, OnePlus ಸೇರಿದಂತೆ ಹಲವು ಬ್ರಾಂಡ್‌ಗಳ ಟಿವಿಗಳ ಮೇಲೆ ಅದ್ಭುತ ರಿಯಾಯಿತಿ ಲಭ್ಯವಿದೆ. ನೀವು 50 ಇಂಚಿನ ಸ್ಮಾರ್ಟ್ ಟಿವಿಯನ್ನು ಅಗ್ಗವಾಗಿ ಖರೀದಿಸಲು ಬಯಸಿದರೆ ಇದೇ ಸರಿಯಾದ ಅವಕಾಶ. iFFALCONನ 50 ಇಂಚಿನ ಸ್ಮಾರ್ಟ್ ಟಿವಿ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ನೀವು iFFALCON 50 ಇಂಚಿನ Ultra 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಕೇವಲ 15,599 ರೂ.ಗೆ ಖರೀದಿಸಬಹುದು. ಇದು ಹೇಗೆಂದು ತಿಳಿದುಕೊಳ್ಳಿರಿ.

ಇದನ್ನೂ ಓದಿWhatsapp: ವಾಟ್ಸಾಪ್‌ ಗ್ರಾಹಕರಿಗೆ ಶಾಕ್! 17 ಲಕ್ಷಕ್ಕೂ ಹೆಚ್ಚು ಖಾತೆಗಳು ಬ್ಯಾನ್

ಅಲ್ಟ್ರಾ 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ  

iFFALCON 50 ಇಂಚಿನ Ultra 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬಿಡುಗಡೆ ಬೆಲೆ 58,990 ರೂ. ಆಗಿದೆ. ಈ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ 28,999 ರೂ.ಗೆ ಲಭ್ಯವಿದೆ. ಅಂದರೆ ಈ ಸ್ಮಾರ್ಟ್ ಟಿವಿ ಮೇಲೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಟಿವಿಯಲ್ಲಿ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಕೂಡ ಇದ್ದು, ಇದರಿಂದ ಟಿವಿ ಬೆಲೆ ಮತ್ತಷ್ಟು ಕಡಿಮೆಗೆ ನಿಮಗೆ ಸಿಗಲಿದೆ.

iFFALCON ಸ್ಮಾರ್ಟ್ ಟಿವಿ ಬ್ಯಾಂಕ್ ಕೊಡುಗೆ

ನೀವು Axis ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ 1,400 ರೂ. ತ್ವರಿತ ರಿಯಾಯಿತಿ ಪಡೆಯುತ್ತೀರಿ. ಇದಲ್ಲದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 1 ಸಾವಿರ ರೂ. ರಿಯಾಯಿತಿ ಸಿಗಲಿದೆ. ಅಂದರೆ ಬ್ಯಾಂಕ್ ನಿಂದ ನಿಮಗೆ ಒಟ್ಟು 2,400 ರೂ.ಗಳ ರಿಯಾಯಿತಿ ಸಿಗಲಿದೆ. ಆಗ ಟಿವಿಯ ಬೆಲೆ 26,599 ರೂ. ಆಗಲಿದೆ. ಇದಾದ ನಂತರ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಇದನ್ನೂ ಓದಿ: Vodafone ಬಳಕೆದಾರರಿಗೆ new year ಗಿಫ್ಟ್ , ಮೂರು ಪ್ಲಾನ್ ಗಳಲ್ಲಿ ಸಿಗಲಿದೆ ಭಾರೀ ಪ್ರಯೋಜನ

iFFALCON ಸ್ಮಾರ್ಟ್ ಟಿವಿ ಎಕ್ಸ್ ಚೇಂಜ್ ಆಫರ್

iFFALCON 50 ಇಂಚಿನ Ultra 4K LED Smart Android TV ಮೇಲೆ 11 ಸಾವಿರ ರೂ.ಗಳ ಎಕ್ಸ್ ಚೇಂಜ್ ಆಫರ್ ಇದೆ. ನೀವು ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡಿಕೊಂಡರೆ ಇಷ್ಟು ರಿಯಾಯಿತಿ ಸಿಗಲಿದೆ. ಹಳೆಯ ಸ್ಮಾರ್ಟ್ ಟಿವಿಯ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನಿಮಗೆ 11 ಸಾವಿರ ರೂ.ಗಳ ರಿಯಾಯಿತಿ ಸಿಗುತ್ತದೆ. ನೀವು ಈ ಎಲ್ಲಾ ಆಫರ್ ಗಳನ್ನು ಸಂಪೂರ್ಣವಾಗಿ ಬಳಸಿಕೊಂಡರೆ ಈ ಸ್ಮಾರ್ಟ್ ಟಿವಿ ಕೇವಲ 15,599 ರೂ.ಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News