BIG Discovery: ಬಾಹ್ಯಾಕಾಶದಲ್ಲಿ ದೊರೆತ ಭೂಮಿಯ ಪರ್ಯಾಯ ಆಯ್ಕೆ!

Exoplanet: ಭೂಮಿಯಿಂದ (Earth) ಸುಮಾರು 90 ಬೆಳಕಿನ ವರ್ಷಗಳಷ್ಟು ದೂರದಲ್ಲಿ ಹೊಸ ಎಕ್ಸೋಪ್ಲಾನೆಟ್ (Exoplanet) ವೊಂದು ಪತ್ತೆಯಾಗಿದೆ. ಭೂಮಿಯಂತೆ, ಈ ಗ್ರಹದಲ್ಲಿ ನೀರಿನ ಮೋಡಗಳ ಚಿಹ್ನೆಗಳು ಕಂಡುಬಂದಿವೆ. ನಿಜಕ್ಕೂ ಒಂದು ವೇಳೆ ಇದು ನೀರಿನ  ಮೋಡಗಳನ್ನು ಹೊಂದಿದ್ದರೆ. ಇದು ಮಾನವರ ಪಾಲಿಗೆ ಈ ಶತಮಾನದ ಅತಿದೊಡ್ಡ ಆವಿಷ್ಕಾರ ಎಂದೇ ಸಾಬೀತಾಗಲಿದೆ.

Written by - Nitin Tabib | Last Updated : Jun 11, 2021, 02:12 PM IST
  • ಭೂಮಿಯಿಂದ ಸುಮಾರು 90 ಪ್ರಕಾಶವರ್ಷಗಳಷ್ಟು ದೂರದಲ್ಲಿದೆ ಒಂದು ಹೊಸ ಎಕ್ಸೋ ಪ್ಲಾನೆಟ್.
  • ಈ ಗ್ರಹದಲ್ಲಿಯೂ ಕೂಡ ಭೂಮಿಯಂತೆಯೇ ನೀರಿನ ಮೋಡಗಳು ಇರುವ ಸಂಕೇತ ದೊರೆತಿದೆ.
  • TOI-1231 b ಗ್ರಹದ ಆಕಾರ ಹಾಗೂ ಸಾಂಧ್ರತೆ ನೆಪ್ಚೂನ್ ಗೆ ಹೋಲುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
BIG Discovery: ಬಾಹ್ಯಾಕಾಶದಲ್ಲಿ ದೊರೆತ ಭೂಮಿಯ ಪರ್ಯಾಯ ಆಯ್ಕೆ! title=
Exoplanet TOI-1231 b (File Photo)

ನವದೆಹಲಿ: Space Science - ವಿಜ್ಞಾನಿಗಳು ಭೂಮಿಗೆ ಹೊಸ ಪರ್ಯಾಯವೊಂದನ್ನು (Earth's Option) ಕಂಡುಕೊಂಡಿದ್ದಾರೆ. ಭೂಮಿಯಿಂದ ಸುಮಾರು 90 ಬೆಳಕಿನ ವರ್ಷಗಳ ದೂರದಲ್ಲಿ ಒಂದು ಹೊಸ ಎಕ್ಸೋಪ್ಲಾನೆಟ್ ಇರುವುದು ಪತ್ತೆಯಾಗಿದೆ. ಭೂಮಿಯಂತೆ, ಈ ಗ್ರಹದಲ್ಲಿ ನೀರಿನ ಮೋಡಗಳ ಚಿಹ್ನೆಗಳಿವೆ. ಈ ಎಕ್ಸೋಪ್ಲಾನೆಟ್ ಸೌರಮಂಡಲದ ಹೊರಗೆ ಇದೆ. TOI-1231 b ಹೆಸರಿನ ಈ ಎಕ್ಸೋಪ್ಲಾನೆಟ್ ತನ್ನ ನಕ್ಷತ್ರದ ಒಂದು ಕಕ್ಷೆಯನ್ನು 24 ದಿನಗಳಲ್ಲಿ ಪೂರ್ಣಗೊಳಿಸುತ್ತದೆ.

ಭೂಮಿಯ ಹೋಲಿಕೆಯಲ್ಲಿ ಸುಮಾರು 8 ಪಟ್ಟು ಹತ್ತಿರವಿದೆ
ಈ ಕುರಿತು ಹೇಳಿಕೆ ನೀಡಿರುವ ಅಧ್ಯಯನದ ಸಹ ಲೇಖಕ ಪ್ರೊಫೆಸ್ಸರ್ ಡಯಾನಾ ಡ್ರಾಗೋಮೀರ್, TOI-1231 b ಸೂರ್ಯನಂತೆಯೇ ಇರುವ ತನ್ನ ನಕ್ಷತ್ರಕ್ಕೆ ಎಂದು ಪಟ್ಟು ಹತ್ತಿರದಲ್ಲಿದೆ. ಆದರೆ, ಅದರ ಉಷ್ಮಾಂಶ ಮಾತ್ರ ಭೂಮಿಯಂತೆಯೇ ಇದೆ ಎಂದಿದ್ದಾರೆ. ಏಕೆಂದರೆ ಈ ಗ್ರಹ (Exoplanet TOI-1231 b) ಸುತ್ತುವ ನಕ್ಷತ್ರ ಕಡಿಮೆ ಪ್ರಕಾಶಮಾನವಾದ ಹಾಗೂ ತಂಪಾದ ನಕ್ಷತ್ರವಾಗಿದೆ. ಹೀಗಾಗಿ TOI-1231 b ಭೂಮಿಯ ಹೋಲಿಕೆಯಲ್ಲಿ ತನ್ನ ನಕ್ಷತ್ರದ ಎಂಟು ಪಟ್ಟು ಹತ್ತಿರದಲ್ಲಿದ್ದರೂ ಕೂಡ ಅದರಲ್ಲಿ ತಾಪಮಾನ ಹೆಚ್ಚಾಗಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA

ಭೂಮಿಗಿಂತ ಇದು ಗಾತ್ರದಲ್ಲಿ ದೊಡ್ಡದಾಗಿದೆ
TOI-1231 b ಗ್ರಹ ಭೂಮಿಗಿಂತ ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ. ಆದರೆ, ಇದು ನೆಪ್ಚ್ಯೂನ್ ಗಿಂತ ಗಾತ್ರದಲ್ಲಿ ಚಿಕ್ಕದಾಗಿದೆ. ಹೀಗಾಗಿ ಇದನ್ನು ನಾವು ಸಬ್-ನೆಪ್ಚ್ಯುನ್ ಎಂದು ಕರೆಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಗ್ರಹದ ಶೋಧದ ಬಳಿಕ ವಿಜ್ಞಾನಿಗಳಲ್ಲಿ ಭಾರಿ ಭರವಸೆ ಮನೆ ಮಾಡಿದೆ. ಏಕೆಂದರೆ ನಿಜಕ್ಕೂ ಒಂದು ವೇಳೆ ಈ ಗ್ರಹದಲ್ಲಿ ನೀರಿನ ಮೋಡಗಳಿದ್ದರೆ (Water Clouds On Planet), ಇದು ಮಾನವರ ಪಾಲಿಗೆ ಈ ಶತಮಾನದ ಅತಿ ದೊಡ್ಡ ಆವಿಷ್ಕಾರ ಸಾಬೀತಾಗಲಿದೆ.

ಇದನ್ನೂ ಓದಿ-Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ

ನೀರಿನ ಆವಿ ಇರುವ ನಿರೀಕ್ಷೆ
ಈ ಕುರಿತು ಹೇಳಿಕೆ ನೀಡಿರುವ ಅಧ್ಯಯನದ ಮತ್ತೋರ್ವ ಸಹ ಲೇಖಕ ಜೆನ್ನಿಫರ್ ಬಾರ್ಟ್, TOI-1231 b ಗ್ರಹದ ಆಕಾರ ಹಾಗೂ ನೆಪ್ಚ್ಯುನ್ ಗ್ರಹದ ಆಕಾರ ಹಾಗೂ ಸಾಂಧ್ರತೆಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ ಇದರ ಆವಿಗಳ ವಾತಾವರಣದಲ್ಲಿಯೂ ಸಾಮ್ಯತೆ ಇರಬಹುದು. ವಿಜ್ಞಾನಿಗಳ ಪ್ರಕಾರ TOI-1231 b ಗ್ರಹದ ಸರಾಸರಿ ತಾಪಮಾನ 140 ಡಿಗ್ರೀ ಫ್ಯಾರನ್ ಹೀಟ್ (60 ಡಿಗ್ರಿ ಸೆಲ್ಸಿಯಸ್) ಆಗಿದೆ. ಇದುವರೆಗೆ ಪತ್ತೆಹಚ್ಚಲಾಗಿರುವ ಎಕ್ಸೋಪ್ಲಾನೆಟ್ ಗಳ ಹೋಲಿಕೆಯಲ್ಲಿ TOI-1231 b ಪ್ಲಾನೆಟ್ ಸಕಾರಾತ್ಮಕ ರೂಪದಲ್ಲಿ ತಂಪಾಗಿದೆ ಎಂದು NASA ವಿಜ್ಞಾನಿಯೂ ಆಗಿರುವ ಜೆನ್ನಿಫರ್ ಬಾರ್ಟ್ ಹೇಳಿದ್ದಾರೆ.

ಇದನ್ನೂ ಓದಿ-NASA, GJ 1132 b: ಎರಡನೇ ಭೂಮಿಯ ಕುರಿತು ಸಿಕ್ಕ ಸಂಕೇತ! ಲಾವಾರಸದಿಂದ ಕೂಡಿದ ಈ Alien ಗ್ರಹ (Alien Planet) ತನ್ನದೇ ವಾಯುಮಂಡಲ ಸೃಷ್ಟಿಸುತ್ತಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News