Cyber Attack Alert...! Google Chrome ಹಾಗೂ Microsoft Edge ಬಳಕೆದಾರರಿಗೆ ಎಚ್ಚರಿಕೆ

Cyber Attack Alert...! ಬಹುತೇಕ ಬಳಕೆದಾರರ ಜನನ ದಿನಾಂಕ, ಇ-ಮೇಲ್ ಅಡ್ರೆಸ್, ಡಿವೈಸ್ ಇನ್ಫಾರ್ಮಶನ್, ಫಸ್ಟ್ ಸೈನ್ ಇನ್ ಟೈಮ್, ಲಾಸ್ಟ್ ಲಾಗ್ ಇನ್ ಟೈಮ್, ಡಿವೈಸ್ ಹೆಸರು, ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಇನ್ಫಾರ್ಮಶನ್, ಐಪಿ ಅಡ್ರೆಸ್ಸ್ ಗಳನ್ನು ಸೈಬರ್ ಕಳ್ಳರು ಕದ್ದಿದ್ದಾರೆ.

Written by - Nitin Tabib | Last Updated : Dec 20, 2020, 11:07 AM IST
  • Google Chrome ಹಾಗೂ Microsoft Edge ಗಳ ಮೇಲೆ ಸೈಬರ್ ದಾಳಿ.
  • ಇಂಟರ್ನೆಟ್ ಬಳಕೆದಾರರ ಮಹತ್ವದ ಮಾಹಿತಿ ಸೋರಿಕೆ.
  • ಈ ದಾಳಿಯಿಂದ ಹೇಗೆ ಪಾರಾಗಬೇಕು ಎಂಬುದನ್ನು ಕೂಡಲೇ ತಿಳಿಯಿರಿ.
Cyber Attack Alert...! Google Chrome ಹಾಗೂ Microsoft Edge ಬಳಕೆದಾರರಿಗೆ ಎಚ್ಚರಿಕೆ  title=
Cyber Attack Alert...! (Photo File)

ನವದೆಹಲಿ: Cyber Attack Alert...! ಒಂದು ವೇಳೆ ನೀವೂ ಕೂಡ ಇಂಟರ್ನೆಟ್ ಬ್ರೌಸಿಂಗ್ಗಾಗಿ ನೀವು Google Chrome ಅಥವಾ Microsoft Edge ಅನ್ನು ಬಳಸುತ್ತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ. ಈ ಎರಡೂ ಇಂಟರ್ನೆಟ್ ಬ್ರೌಸರ್‌ಗಳನ್ನು ಸಕ್ರಿಯಗೊಳಿಸುವವರ  ಮೇಲೆ ಸೈಬರ್ ದಾಳಿ ನಡೆಯುವ ಸಾಧ್ಯತೆ ಇದೆ. ನಿಮ್ಮ ಇಂಟರ್ನೆಟ್ ಬ್ರೌಸರ್‌ಗೆ ಸಂಬಂಧಿಸಿದ ಎಕ್ಸಟೆನ್ಶನ್ ಅನ್ನು ಆದಷ್ಟು ಬೇಗ ಅನ್ಇನ್ಸ್ಟಾಲ್ ಮಾಡಿ.

ಇದನ್ನು ಓದಿ- Malware Attack: ನೀವೂ ಈ Web Browsers ಗಳನ್ನು ಬಳಸುತ್ತಿದ್ದರೆ ತಕ್ಷಣ ನಿಲ್ಲಿಸಿ, ಇಲ್ಲಿದೆ Microsoft ನೀಡಿರುವ ಎಚ್ಚರಿಕೆ

ನಮ್ಮ ಪಾಲುದಾರ ವೆಬ್‌ಸೈಟ್ bgr.in ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ , ಸೈಬರ್ ಸಂಸ್ಥೆ ಅವಾಸ್ಟ್ ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ವೈರಸ್ ದಾಳಿಗೆ ಕಾರಣವಾಗುವಂತಹ 28 ಕ್ಕೂ ಹೆಚ್ಚು ಬ್ರೌಸರ್ ವಿಸ್ತರಣೆಗಳನ್ನು ಗುರುತಿಸಿದೆ. ಈ ಮಾಲ್‌ವೇರ್ ಗಳು ನಿಮ್ಮ ಇಮೇಲ್ ವಿಳಾಸಗಳು, ಫೋನ್ ಸಂಖ್ಯೆಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿಯಂತಹ ವೈಯಕ್ತಿಕ ಡೇಟಾವನ್ನು ಕದಿಯಬಹುದು. ಭದ್ರತಾ ಸಂಸ್ಥೆ ಅವಾಸ್ಟ್ ಪ್ರಕಾರ, ಈ ವಿಸ್ತರಣೆಗಳಿಂದ 3 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಪ್ರಭಾವಿತರಾಗಿದ್ದಾರೆ.

ಇದನ್ನು ಓದಿ- ನೀವೂ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ Google Chrome ಬಳಸುತ್ತಿರಾ? ಈ ಸುದ್ದಿಯನ್ನು ಓದಲು ಮರೆಯದಿರಿ

ಭದ್ರತಾ ಸಂಸ್ಥೆಯ ಪ್ರಕಾರ, ಬಳಕೆದಾರರು ತಮ್ಮ ಕೆಲಸವನ್ನು ಸುಲಭಗೊಳಿಸಲು ಯಾವುದೇ ಬ್ರೌಸರ್‌ನಲ್ಲಿ ವಿಸ್ತರಣೆಗಳನ್ನು ಸ್ಥಾಪಿಸುತ್ತಾರೆ. ಯುಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳಿಂದ ವೀಡಿಯೊಗಳನ್ನು ಡೌನ್‌ಲೋಡ್ ಮಾಡಲು ಹೆಚ್ಚಿನ ಬಳಕೆದಾರರು ಈ ವಿಸ್ತರಣೆಗಳನ್ನು ಸ್ಥಾಪಿಸುತ್ತಾರೆ. ಫೇಸ್‌ಬುಕ್‌ಗಾಗಿ ವೀಡಿಯೊ ಡೌನ್‌ಲೋಡರ್, ವಿಮಿಯೋ ವಿಡಿಯೋ ಡೌನ್‌ಲೋಡರ್, ಇನ್‌ಸ್ಟಾಗ್ರಾಮ್ ಸ್ಟೋರಿ ಡೌನ್‌ಲೋಡರ್ ಮತ್ತು ವಿಕೆ ಅನ್‌ಬ್ಲಾಕ್‌ನಂತಹ ವಿಸ್ತರಣೆಗಳಿಂದ ಲಕ್ಷಾಂತರ ಬಳಕೆದಾರರು ಪ್ರಭಾವಿತರಾಗಿದ್ದಾರೆ ಎಂದು ಭದ್ರತಾ ಸಂಸ್ಥೆ ತಿಳಿಸಿದೆ.

ಇದನ್ನು ಓದಿ- Google Chrome ಬಳಸಿ ನೀವು Secure Passwords ರಚಿಸಬಹುದು... ಇಲ್ಲಿದೆ ವಿಧಾನ

ಪ್ರಭಾವಕ್ಕೆ ಒಳಗಾದ ಬಳಕೆದಾರರ ವೈಯಕ್ತಿಕ ಮಾಹಿತಿ
ಇಂತಹ 28 ವಿಸ್ತರಣೆಗಳು ದುರುದ್ದೇಶಪೂರಿತ JavaScript ಅನ್ನು ಹೊಂದಿದ್ದು ಅದು ಮಾಲ್ವೇರ್ (Malware) ಅನ್ನು ಸುಲಭವಾಗಿ ಆಹ್ವಾನಿಸುತ್ತವೆ  ಎಂದು Avast ಹೇಳಿದೆ. ಬಳಕೆದಾರರು ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ, ಅದು ಈ ಮಾಹಿತಿಯನ್ನು ಸೈಬರ್ ಅಪರಾಧಗಳು ಅಥವಾ ದಾಳಿಕೋರರಿಗೆ ರವಾನಿಸುತ್ತವೆ. ಇದರ ನಂತರ, ದಾಳಿಕೋರರು ಈ ವಿಸ್ತರಣೆಗಳ ಮೂಲಕ ಕಮಾಂಡ್ ಗಳನ್ನು ಬದಲಾಯಿಸಿ  ಬಳಕೆದಾರರನ್ನು ಫಿಶಿಂಗ್ ವೆಬ್‌ಸೈಟ್‌ಗೆ ಕೊಂಡೊಯ್ಯುತ್ತಾರೆ. ತನ್ಮೂಲಕ ಸೈಬರ್ ದಾಳಿಕೋರರು ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನಹಾಕುತ್ತಾರೆ.

ಇದನ್ನು ಓದಿ- ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂರಕ್ಷಿಸಲು Google ಮಾಡಿದೆ ಈ ಬದಲಾವಣೆ... ತಿಳಿದುಕೊಳ್ಳಲು ಮರೆಯದಿರಿ

ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ Avast, ಹೆಚ್ಚಿನ ಬಳಕೆದಾರರು ಜನ್ಮ ದಿನಾಂಕ, ಇ-ಮೇಲ್ ವಿಳಾಸ ಮತ್ತು ಸಾಧನದ ಮಾಹಿತಿ, ಮೊದಲ ಸೈನ್-ಇನ್ ಸಮಯ, ಕೊನೆಯ ಲಾಗಿನ್ ಸಮಯ, ಸಾಧನದ ಹೆಸರು, ಆಪರೇಟಿಂಗ್ ಸಿಸ್ಟಮ್, ಬ್ರೌಸರ್ ಮಾಹಿತಿ, ಐಪಿ ವಿಳಾಸಕ್ಕೆ ಖದೀಮರು ಕನ್ನಹಾಕಿದ್ದಾರೆ ಎಂದು  ಹೇಳಿದೆ. ಯಾವುದೇ ಒಂದು ಸೈಟ್ ನ ಟ್ರ್ಯಾಫಿಕ್ ಅನ್ನು ಇತರ ಸೈಟ್ ಗಳಿಗೆ ರೀಡೈರೆಕ್ಟ್ ಮಾಡಿ ಹಣ ಗಳಿಕೆ ಮಾಡುವುದು ಸೈಬರ್ ದಾಳಿಕೋರರ ಮುಖ್ಯ ಉದ್ದೇಶವಾಗಿದೆ ಎಂದು ಸಂಸ್ಥೆ ಹೇಳಿದೆ.

ಇದನ್ನು ಓದಿ-ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ಬಿಡುಗಡೆಗೊಳಿಸಿದ Google Chrome

ಭದ್ರತಾ ಸಂಸ್ಥೆಯ ಪ್ರಕಾರ, ಈ ಹೆಚ್ಚಿನ ವಿಸ್ತರಣೆಗಳು ಗೂಗಲ್ ಕ್ರೋಮ್ ಮತ್ತು ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್‌ಗಳಲ್ಲಿ ಲಭ್ಯವಿದೆ. ಈ ವಿಸ್ತರಣೆಗಳ ಮೂಲಕ, ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಮತ್ತು ನಿಮ್ಮನ್ನು ಮೋಸ ಮಾಡಬಹುದು. ಈ ಯಾವುದೇ ವಿಸ್ತರಣೆಗಳನ್ನು ನೀವು Google Chrome ಅಥವಾ Microsoft Edge ನಲ್ಲಿ ಡೌನ್‌ಲೋಡ್ ಮಾಡಿ ಸ್ಥಾಪಿಸಿದ್ದರೆ, ತಕ್ಷಣ ಅವುಗಳನ್ನು ಅಸ್ಥಾಪಿಸಿ. ಸಾಧ್ಯವಾದರೆ, ಬ್ರೌಸರ್ ಅನ್ನುಸಹ ಅನ್ ಇನ್ಸ್ಟಾಲ್ ಮಾಡಿ ಮತ್ತೆ ಇನ್ಸ್ಟಾಲ್ ಮಾಡಿ ಎಂದು ಅವಾಸ್ಟ್ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News