ನವದೆಹಲಿ : ದೇಶದ ದೈತ್ಯ ಟೆಲಿಕಾಂ ಕಂಪನಿ ರಿಲಯನ್ಸ್ (Reliance) ಪ್ರಸ್ತುತ ಗೂಗಲ್ ನೊಂದಿಗೆ 'ವಿಶ್ವದ ಅಗ್ಗದ 4 ಜಿ ಸ್ಮಾರ್ಟ್ ಫೋನ್' ತಯಾರಿಸಲು ಸಿದ್ದತೆ ನಡೆಸುತ್ತಿದೆ. ಜನರು ಈ ಫೋನ್ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈಗ JioPhone Next ನ ಪ್ರಿ -ಬುಕಿಂಗ್‌ಗೆ ಸಂಬಂಧಿಸಿದ ಮಾಹಿತಿ ಹೊರ ಬಿದ್ದಿದೆ.
ಮುಂದಿನ ವಾರದಿಂದ ಪೂರ್ವ-ಬುಕಿಂಗ್!:
ಮಾಧ್ಯಮ ವರದಿಗಳ ಪ್ರಕಾರ, JioPhone Next ಮುಂದಿನ ವಾರದಿಂದ ಪೂರ್ವ-ಬುಕಿಂಗ್‌ಗೆ ಆರಂಭಿಸಲಿದೆ. ಫೋನ್‌ನ ಮಾರಾಟ ಸೆಪ್ಟೆಂಬರ್ 10 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಿ -ಬುಕಿಂಗ್‌ಗೆ (Pre booking) ಸಂಬಂಧಿಸಿದ ಈ ಟೈಮ್‌ಲೈನ್ ಸರಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಂಪನಿಯ ಮಾಲೀಕ ಮುಖೇಶ್ ಅಂಬಾನಿ (Mukhesh Ambani) 44 ನೇ ರಿಲಯನ್ಸ್ ಎಜಿಎಂ ಸಮಯದಲ್ಲಿ ಡಿವೈಸ್ ಬಗ್ಗೆ ಮಾಹಿತಿ ನೀಡುವಾಗ ಅದರ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದರು.
ಇದನ್ನೂ ಓದಿ: BharatCaller Launched: TrueCallerಗೆ ಪೈಪೋಟಿ ನೀಡಲು ಬಂದಿದೆ ದೇಸಿ ಆಪ್ BharatCaller
ಫೋನ್ ಬೆಲೆ ಎಷ್ಟು?
ಜಿಯೋಫೋನ್ ನೆಕ್ಸ್ಟ್ (JioPhone Next) ರಿಲಯನ್ಸ್‌ನ ಎಲ್‌ವೈಎಫ್ ಬ್ರಾಂಡ್ ಸ್ಮಾರ್ಟ್‌ಫೋನ್‌ಗಿಂತ ಭಿನ್ನವಾಗಿದೆ. ಮೊದಲೇ ಹೇಳಿದಂತೆ, ಇದನ್ನು Google ನ ಸಹಭಾಗಿತ್ವದಲ್ಲಿ ಮಾಡಲಾಗಿದೆ. ಜಿಯೋಫೋನ್ ನೆಕ್ಸ್ಟ್ ಪೂರ್ಣ ಪ್ರಮಾಣದ ಸ್ಮಾರ್ಟ್ಫೋನ್ ಆಗಿದ್ದು ಅದು ಗೂಗಲ್ ಪ್ಲೇ ಸ್ಟೋರ್ (Google playstore) , ಗೂಗಲ್ ಅಸಿಸ್ಟೆಂಟ್ ಇತ್ಯಾದಿಗಳನ್ನು ಬೆಂಬಲಿಸುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ ರಿಲಯನ್ಸ್ ಹ್ಯಾಂಡ್‌ಸೆಟ್‌ನ ವಿಶೇಷತೆಗಳು ಮತ್ತು ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಇದು ವಿಶ್ವದ ಅತ್ಯಂತ ಒಳ್ಳೆ ಸ್ಮಾರ್ಟ್ ಫೋನ್ ಎಂದು ಮಾತ್ರ ಹೇಳಲಾಗಿದೆ. ಪ್ರಸ್ತುತ, ಅಗ್ಗದ 4 ಜಿ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 01 (Samsung Galaxy M01) ಆಗಿದ್ದು, ಇದರ ಬೆಲೆ 4,999 ರೂ. ಇದರರ್ಥ ಜಿಯೋಫೋನ್ ನೆಕ್ಸ್ಟ್‌ನ ಬೆಲೆ ರೂ 5,000 ಕ್ಕಿಂತ ಕಡಿಮೆ ಇರಲಿದೆ.
ಈ ವೈಶಿಷ್ಟ್ಯಗಳು ಫೋನಿನಲ್ಲಿರಬಹುದು:
ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ 11 ಗೋ ಆವೃತ್ತಿಯೊಂದಿಗೆ ಬರುತ್ತದೆ. ಇದು ಎಚ್‌ಡಿಆರ್, ನೈಟ್ ಮೋಡ್ (HDR, Night Mode) ಮತ್ತು ಸ್ನ್ಯಾಪ್‌ಚಾಟ್ ಫಿಲ್ಟರ್‌ಗಳನ್ನು ಬಳಸುವ ಗೂಗಲ್ ಕ್ಯಾಮೆರಾ ಗೋ ಆಪ್ (Google Camera Go) ಅನ್ನು ಹೊಂದಿದೆ. ಜಿಯೋದ ಈ ಫೋನ್ 13MP ಹಿಂಭಾಗದ ಕ್ಯಾಮರಾ ಮತ್ತು 8MP ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ. ಜಿಯೋಫೋನ್ ನೆಕ್ಸ್ಟ್ ಹ್ಯಾಂಡ್‌ಸೆಟ್‌ನಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ನೀಡಲಾಗಿದೆ ಮತ್ತು ಇದು 4G VoLTE ಬೆಂಬಲವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ನಲ್ಲಿ 2500mAh ಬ್ಯಾಟರಿಯನ್ನು ನೀಡಲಾಗಿದೆ. ಮಾಹಿತಿಯ ಪ್ರಕಾರ,ಡಿವೈಸ್ ಯುನಿಸೋಕ್ SoC ನಿಂದ 4GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: Smartphone: ಸ್ಮಾರ್ಟ್‌ಫೋನ್‌ನಲ್ಲಿ ಬೆಂಕಿಗೆ ಕಾರಣವಾಗುವ ಈ 10 ತಪ್ಪುಗಳ ಬಗ್ಗೆ ಇರಲಿ ಎಚ್ಚರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ