ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ JiO !ಉಳಿದ ನೆಟ್ ವರ್ಕ್ ಗಳಿಗೆ ಭಾರೀ ಟಕ್ಕರ್

Jio Recharge Plan :ಜಿಯೋ ಈಗ ತನ್ನ 4 ಜಿ ಫೀಚರ್ ಫೋನ್ ಗೆ ಹೋದ ಮತ್ತು ಅಗ್ಗದ ಪ್ರಿಪೇಯ್ಡ್  ಪ್ಲಾನ್ ಅನ್ನು ಬಿಡುಗಡೆ ಮಾಡಿದೆ.   

Written by - Ranjitha R K | Last Updated : Jul 29, 2024, 10:44 AM IST
  • ರಿಲಯನ್ಸ್ ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿ
  • JioBharat V2 ಫೋನ್ ಕೇವಲ 999 ರೂ.ಗಳಿಗೆ ಬಿಡುಗಡೆ
  • 4G ಫೀಚರ್ ಫೋನ್‌ಗಾಗಿ ಹೊಸ ಪ್ರಿಪೇಯ್ಡ್ ಪ್ಯಾಕ್
 ಮತ್ತೊಂದು ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ JiO !ಉಳಿದ ನೆಟ್ ವರ್ಕ್ ಗಳಿಗೆ ಭಾರೀ ಟಕ್ಕರ್  title=

Jio Recharge Plan : ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ.ಕಂಪನಿಯು ಕಳೆದ ವರ್ಷ ಅಗ್ಗದ JioBharat V2 ಫೋನ್ ಅನ್ನು ಕೇವಲ 999 ರೂ.ಗಳಿಗೆ ಬಿಡುಗಡೆ ಮಾಡಿತ್ತು.ಈಗ ಕಂಪನಿಯು 4G ಫೀಚರ್ ಫೋನ್‌ಗಾಗಿ ಹೊಸ ಪ್ರಿಪೇಯ್ಡ್ ಪ್ಯಾಕ್ ಅನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದೆ. ಅಗ್ಗದ ಕರೆಗಳು, 5G ಡೇಟಾ, OTT ಚಂದಾದಾರಿಕೆಗಳು ಮತ್ತು ಅಗ್ಗದ ಫೋನ್‌ಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿರುವ ಕಾರಣಕ್ಕಾಗಿ ಮುಖೇಶ್ ಅಂಬಾನಿ ಗ್ರಾಹಕರ ಪ್ರಶಂಸೆಗೆ ಪಾತ್ರರಾಗುತ್ತಾರೆ. 

ಹೊಸ ರಿಚಾರ್ಜ್ ಪ್ಲಾನ್ ಬೆಲೆ 299 ರೂ.ಇದರಲ್ಲಿ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ.ಅನಿಯಮಿತ ಕರೆಗಳು ಮತ್ತು ಸಾಕಷ್ಟು ಡೇಟಾ ಸೌಲಭ್ಯ ಕೂಡಾ ಇದರಲ್ಲಿ ಸಿಗುತ್ತದೆ.ಈ ಪ್ಲಾನ್ ನಲ್ಲಿ ಒಟ್ಟು 42GB ಡೇಟಾ ಪಡೆಯಬಹುದು.ಅಂದರೆ,ಪ್ರತಿದಿನ 1.5GB ಡೇಟಾ ಸಿಗುತ್ತದೆ.ಇದಲ್ಲದೇ  ಪ್ರತಿದಿನ 100 ಎಸ್‌ಎಂಎಸ್‌ ಸೌಲಭ್ಯ ಕೂಡಾ ಇದೆ. 

ಇದನ್ನೂ ಓದಿ : Best Smartphone 2024: 2024ರ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಯಾವುವು..?

ಇದಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸೇವೆ ಕೂಡಾ ಲಭ್ಯವಿದೆ. ಡೇಟಾ ಮುಗಿದ ನಂತರ 64kbps ಸ್ಪೀಡ್ ನಲ್ಲಿ ಇಂಟರ್ನೆಟ್ ಬಳಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ಯೋಜನೆಯಲ್ಲಿ ಜಿಯೋ ಸಿನಿಮಾ ಪ್ರೀಮಿಯಂ ಲಭ್ಯವಿರುವುದಿಲ್ಲ.ಇದಕ್ಕಾಗಿ ನೀವು ಜಿಯೋದ ಪ್ರತ್ಯೇಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

Jio ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದಿನಕ್ಕೆ 2GB ಡೇಟಾದೊಂದಿಗೆ ಅನಿಯಮಿತ 5G ಜೊತೆ ಸೇವೆ ಲಭ್ಯವಿರುವ ಪ್ಲಾನ್ ಗೆ 349 ರೂಪಾಯಿ ಪಾವತಿಸಬೇಕು.ಈ ಯೋಜನೆಯಲ್ಲಿ ಇತರ ಟೆಲಿಕಾಂ ಕಂಪನಿಗಳಿಗಿಂತ ಹೆಚ್ಚಿನ ಪ್ರಯೋಜನ ಸಿಗುತ್ತದೆ. 

ಇದನ್ನೂ ಓದಿ ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News