Disha Patani : ಪೂರಿ ಜಗನ್ನಾಥ್ ನಿರ್ದೇಶನದ ವರುಣ್ ತೇಜ್ ನಟಿಸಿದ 'ಲೋಫರ್' ಚಿತ್ರದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ದಿಶಾ ಪಟಾನಿ ಇತ್ತೀಚಿಗೆ ಕಲ್ಕಿ 2898 ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡರು.. ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆ ಸಧ್ಯ ತನ್ನ ಸೌಂದರ್ಯದಿಂದ ಸಿನಿರಸಿಕಗರ ಮನಗೆಲ್ಲುತ್ತಿದ್ದಾಳೆ..
ದಿಶಾ ಪಟಾನಿಯ ಮಾರ್ಕ್ ಸ್ಟೈಲ್, ಫಿಟ್ನೆಸ್ ಮತ್ತು ನಟನೆಯ ಮೂಲಕ ಸಿನಿರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಚೆಲುವೆ.
ಇತ್ತೀಚೆಗೆ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾ ತರೆ ಕಂಡಿತ್ತು. ಈ ಚಿತ್ರದಲ್ಲಿ ದಿಶಾ ಪಟಾನಿ ನಟಿಸಿದ್ದರು.
ಈ ಚಿತ್ರದಲ್ಲಿ ದಿಶಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ. ಪ್ರಭಾಸ್ ಜೊತೆಗಿನ ಹಾಡೊಂದನ್ನು ಬಿಟ್ಟರೆ ದಿಶಾ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.
ದಿಶಾ ಪಟಾನಿ ಯಾವಾಗಲೂ ಹೊಸ ಪ್ರವೃತ್ತಿಯನ್ನು ಅನುಸರಿಸುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬ್ಯುಸಿ ಇರುವ ಸುಂದರಿ, ತಮ್ಮ ಅಭಿಮಾನಿಗಳೊಂದಿಗೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. Instagram ನಲ್ಲಿ 61.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ದಿಶಾ, 'ಕಲ್ಕಿ 2898 ಎಡಿ'ಯಲ್ಲಿ ರಾಕ್ಸಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಸೂರ್ಯ ನಟನೆಯ 'ಕಂಗುವಾ' ಮೂಲಕ ಕಾಲಿವುಡ್ ಪ್ರವೇಶ ಮಾಡಲಿದ್ದಾರೆ.
ದಿಶಾ ಬಾಲಿವುಡ್ ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ‘ಯೋಧ’ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿದ್ದರು. ಸದ್ಯದಲ್ಲೇ 'ವೆಲ್ ಕಮ್ ಬ್ಯಾಕ್ ಟು ದಿ ಜಂಗಲ್' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ದಿಶಾ ಪಟಾನಿ ತನ್ನ ಬಿಡುವಿನ ವೇಳೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅಭಿಮಾನಿಗಳೊಂದಿಗೆ ಚಿಟ್-ಚಾಟ್ ಮಾಡುತ್ತಾಳೆ. ಇದಲ್ಲದೆ, ಫೊಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..
ಸಿನಿಮಾಗಾಗಿ ಕರಾಟೆ ಸೇರಿದಂತೆ ಹಲವು ರಕ್ಷಣಾತ್ಮಕ ಕಲೆಗಳನ್ನು ಕಲಿತಿರುವ ಚೆಂದುಳ್ಳಿ ನೋಡಲು ಎಷ್ಟು ಸುಂದರವೋ ಹತ್ತಿರ ಹೋದ್ರೆ ಅಷ್ಟೇ ಡೆಂಜರ್..