Affordable Electric Car: ಪೆಟ್ರೋಲ್ ಚಿಂತೆ ಬಿಟ್ಟುಬಿಡಿ, ಭಾರತಕ್ಕೆ ಬರಲಿದೆ ಅಗ್ಗದ ಎಲೆಕ್ಟ್ರಿಕ್ ಕಾರು!

MG ಮೋಟಾರ್ ಇಂಡಿಯಾ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಇದು ಸಣ್ಣ ಗಾತ್ರದ ಕಾರಾಗಿದ್ದು, ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಓಡಿಸಲು ಸಾಧ್ಯವಾಗುತ್ತದೆ. ಇದು ಎರಡು ಬಾಗಿಲುಗಳ 4 ಆಸನಗಳ ಕಾರು ಆಗಿರುತ್ತದೆ.

Written by - Puttaraj K Alur | Last Updated : Mar 13, 2022, 12:05 PM IST
  • ಭಾರತೀಯ ಮಾರುಕಟ್ಟೆಗೆ ಬರಲಿದೆ ಅಗ್ಗದ ಎಲೆಕ್ಟ್ರಿಕ್ ಕಾರು!
  • ಒಂದೇ ಚಾರ್ಜ್‌ನಲ್ಲಿ 150 ಕಿಮೀ ಪ್ರಯಾಣಿಸಲು ಅನುವು ಮಾಡಿಕೊಡಲಿದೆ
  • ಗ್ರಾಹಕರ ಬಜೆಟ್‌ಗೆ ತಕ್ಕಂತೆ ಎಲೆಕ್ಟ್ರಿಕ್ ಕಾರು ರಿಲೀಸ್ ಮಾಡಲು ಸಿದ್ಧತೆ
Affordable Electric Car: ಪೆಟ್ರೋಲ್ ಚಿಂತೆ ಬಿಟ್ಟುಬಿಡಿ, ಭಾರತಕ್ಕೆ ಬರಲಿದೆ ಅಗ್ಗದ ಎಲೆಕ್ಟ್ರಿಕ್ ಕಾರು!   title=
ಭಾರತೀಯ ಮಾರುಕಟ್ಟೆಗೆ ಅಗ್ಗದ ಎಲೆಕ್ಟ್ರಿಕ್ ಕಾರು

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ವಾತಾವರಣವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಮನದಲ್ಲಿಟ್ಟುಕೊಂಡು ಗ್ರಾಹಕರು ಈಗ ಈ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. MG ಮೋಟಾರ್ ಇಂಡಿಯಾ ಸಹ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯು ಗ್ರಾಹಕರ ಬಜೆಟ್‌ಗೆ ತಕ್ಕಂತೆ ಹಲವು ಕೈಗೆಟುಕುವ ಎಲೆಕ್ಟ್ರಿಕ್ ಕಾರು(Affordable Electric Car)ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. MG ZS EV ನಂತರ ಶೀಘ್ರದಲ್ಲೇ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಇದು ಸಣ್ಣ ಗಾತ್ರದ ಕಾರು ಆಗಿರಬಹುದು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ಕಂಪನಿಯು ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಕಾರು ಬಿಡುಗಡೆ ಮಾಡಲು ಯೋಚಿಸುತ್ತಿದೆ. ಈ ಕಾರಿನ ಕೋಡ್ ನೇಮ್ MG E230 ಆಗಿದೆ.

ಇದನ್ನೂ ಓದಿ: Airtel ಗ್ರಾಹಕರಿಗೆ ಸಿಹಿ ಸುದ್ದಿ : ₹209 ಗೆ ಡೈಲಿ ಡೇಟಾ ಜೊತೆಗೆ Amazon Prime ಚಂದಾದಾರಿಕೆ!

2 ಡೋರ್ ಮತ್ತು 4 ಆಸನಗಳು

MGಯ ಈ ಹೊಸ ಎಲೆಕ್ಟ್ರಿಕ್ ಕಾರು(Electric Car) ಗಾತ್ರದಲ್ಲಿ ತುಂಬಾ ಚಿಕ್ಕದಾಗಿರಲಿದೆ. ಇದು ಕೇವಲ ಎರಡು ಬಾಗಿಲುಗಳೊಂದಿಗೆ ಬರಲಿದ್ದು, 4 ಜನರಿಗೆ ಆಸನ ವ್ಯವಸ್ಥೆಯನ್ನು ಹೊಂದಿರಲಿದೆ. ಕಂಪನಿಯು ಮುಂದಿನ ವರ್ಷದ ವೇಳೆಗೆ ಭಾರತೀಯ ಮಾರುಕಟ್ಟೆಗೆ ಇದನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ EVಯು 2,197 mm ಉದ್ದ, 1,493 mm ಅಗಲ ಮತ್ತು 1,621 mm ಎತ್ತರವಿರಲಿದೆ. ಆದರೆ ವೀಲ್‌ಬೇಸ್ 1,940 mm ಆಗಿರುತ್ತದೆ. ಒಟ್ಟಾರೆ ಹೇಳಬೇಕೆಂದರೆ ಈ ಕಾರು ಮಾರುತಿ ಆಲ್ಟೊ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಈ ಕಾರು ಈಗಾಗಲೇ ಚೀನೀ ಮಾರುಕಟ್ಟೆಯಲ್ಲಿದ್ದು, ಜನರಿಗೆ ತುಂಬಾ ಇಷ್ಟವಾಗಿದೆ. ಭಾರತೀಯ ಗ್ರಾಹಕರ ಆರ್ಥಿಕ ಮತ್ತು ಪ್ರೀತಿಯ ಮನಸ್ಥಿತಿಯನ್ನು ಪರಿಗಣಿಸಿ ಇದನ್ನು ರಿಲೀಸ್ ಮಾಡಲು ಕಂಪನಿ ಯೋಚಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Flipkart Big Saving Days: 8 ಸಾವಿರದೊಳಗೆ ಖರೀದಿಸಿ 42 ಇಂಚಿನ ಸ್ಮಾರ್ಟ್ ಟಿವಿ

ಉತ್ತಮ ವೈಶಿಷ್ಟ್ಯಗಳೊಂದಿಗೆ ಬಲಿರುವ ಕಾರು

ಹೊಸ ಎಲೆಕ್ಟ್ರಿಕ್ ಕಾರು ABS ಜೊತೆಗೆ EBD, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ಮತ್ತು ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳೊಂದಿಗೆ ಬರಲಿದೆ. ಇದಲ್ಲದೆ ಕಾರ್ ಸಂಪರ್ಕಿತ ಕಾರ್ ತಂತ್ರಜ್ಞಾನವನ್ನು ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. 20 kW-R ಬ್ಯಾಟರಿ ಪ್ಯಾಕ್ ನೊಂದಿಗೆ ಬರುವ ಈ ಕಾರು ಒಂದೇ ಚಾರ್ಜ್‌ನಲ್ಲಿ 150 ಕಿಮೀ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಗ್ರಾಹಕರ ಬಜೆಟ್‌ನಲ್ಲಿ ಬರುವ ಹೊಸ MG EV ಬೆಲೆ 10 ಲಕ್ಷ ರೂ.ಗಿಂತಲೂ ಕಡಿಮೆಯಿರುತ್ತದೆ(Cheapest Electric Car) ಎಂದು ಅಂದಾಜಿಸಲಾಗಿದೆ. ಈ ಬೆಲೆಗೆ ಮಾರುಕಟ್ಟೆ ಪ್ರವೇಶಿಸಿದರೆ ಇದು ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರು ಆಗಲಿದೆ. ಪ್ರಸ್ತುತ ಭಾರತದಲ್ಲಿನ ಅಗ್ಗದ ಎಲೆಕ್ಟ್ರಿಕ್ ಕಾರು(EV Car) ಟಾಟಾ ಟಿಗೊರ್ EV ಆಗಿದ್ದು, ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 11.99 ಲಕ್ಷ ರೂ. ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News