ಕೇವಲ 401 ರೂ.ಗಳಿಗೆ 1 ಟಿಬಿ ಡೇಟಾ ನೀಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ ಈ ಟೆಲಿಕಾಂ ಕಂಪನಿ!

Cheap And Best Internet Plan: ಜಿಯೋ ಕಂಪನಿಯು ಏರ್‌ಫೈಬರ್‌ಗಾಗಿ ಹೊಸ ರೂ 401 ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಬಳಕೆದಾರರಿಗೆ 1TB ಡೇಟಾಗೆ ಪ್ರವೇಶವನ್ನು ನೀಡುತ್ತದೆ. ಎಲ್ಲಾ ವಿವರಗಳನ್ನು ತಿಳಿಯಿರಿ.(Technology News In Kannada)  

Written by - Nitin Tabib | Last Updated : Dec 8, 2023, 09:47 PM IST
  • ಜಿಯೋ ಏರ್ ಫೈಬರ್ ಸೇವೆಯ ಈ ಹೊಸ ಯೋಜನೆಯ ಬೆಲೆ 401 ರೂ.
  • ಈ ಯೋಜನೆಯಲ್ಲಿ, ಬಳಕೆದಾರರು 1TB ಡೇಟಾಗೆ ಪ್ರವೇಶವನ್ನು ಪಡೆಯುತ್ತಾರೆ.
  • ಆದಾಗ್ಯೂ, ಜಿಯೋದ ಈ ಯೋಜನೆಯು ಡೇಟಾ ಬೂಸ್ಟರ್ ಯೋಜನೆಯಾಗಿದ್ದು,
  • ಇದು ಮೂಲ ಯೋಜನೆಯೊಂದಿಗೆ ಬಳಕೆದಾರರ ಹೆಚ್ಚುವರಿ ಡೇಟಾ ಅಗತ್ಯತೆಗಳನ್ನು ಪೂರೈಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಕೇವಲ 401 ರೂ.ಗಳಿಗೆ 1 ಟಿಬಿ ಡೇಟಾ ನೀಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ ಈ ಟೆಲಿಕಾಂ ಕಂಪನಿ! title=

ಬೆಂಗಳೂರು: ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕಂಪನಿಯು ಇತ್ತೀಚೆಗೆ ಜಿಯೋ ಏರ್ ಫೈಬರ್ ಸೇವೆಯನ್ನು ಪ್ರಾರಂಭಿಸಿದೆ. ಇದು ಕಂಪನಿಯ 5G ಫಿಕ್ಸ್ದ್ ವೈರ್ ಲೆಸ್ ಆಕ್ಸಸ್ (ಸ್ಥಿರ-ವೈರ್‌ಲೆಸ್ ಪ್ರವೇಶ) ಸೇವೆಯಾಗಿದೆ, ಇದನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲಾಗಿದೆ. ಬಿಡುಗಡೆಯ ಸಮಯದಲ್ಲಿ, ಕಂಪನಿಯು ಏರ್‌ಫೈಬರ್ ಸೇವೆಯ ಅಡಿಯಲ್ಲಿ 6 ಹೊಸ ಯೋಜನೆಗಳನ್ನು ಆರಂಭಿಸಿತ್ತು. ಅವುಗಳಲ್ಲಿ  ಜಿಯೋ ಏರ್‌ಫೈಬರ್ ನಿಯಮಿತ ಮತ್ತು ಜಿಯೋ ಏರ್‌ಫೈಬರ್ ಮ್ಯಾಕ್ಸ್ ಯೋಜನೆಗಳು ಶಾಮೀಲಾಗಿವೆ. ನಿಯಮಿತ ಯೋಜನೆಯು ಮೂರು ಪ್ಲಾನ್‌ಗಳನ್ನು ಒಳಗೊಂಡಿದೆ, ಅವುಗಳ ಮುಖಬೆಲೆಗಳು ಬೆಲೆ ರೂ 599, ರೂ 899 ಮತ್ತು ರೂ 1199. ಆದರೆ, ಮ್ಯಾಕ್ಸ್ ಪ್ಲಾನ್‌ನಲ್ಲಿ ರೂ 1499, ರೂ 2499 ಮತ್ತು ರೂ 3,999 ಬೆಲೆಯ ಯೋಜನೆಗಳನ್ನು ಪರಿಚಯಿಸಲಾಗಿದೆ. ಇದೇ ವೇಳೆ, ಈಗ ಕಂಪನಿಯು ಏರ್‌ಫೈಬರ್ ಅಡಿಯಲ್ಲಿ ಮತ್ತೊಂದು ಕೈಗೆಟುಕುವ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬೆಲೆ ಕೇವಲ 401 ರೂ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ, (Technology News In Kannada)

ಜಿಯೋ ಏರ್ ಫೈಬರ್ ಸೇವೆಯ ಈ ಹೊಸ ಯೋಜನೆಯ ಬೆಲೆ 401 ರೂ. ಈ ಯೋಜನೆಯಲ್ಲಿ, ಬಳಕೆದಾರರು 1TB ಡೇಟಾಗೆ ಪ್ರವೇಶವನ್ನು ಪಡೆಯುತ್ತಾರೆ. ಆದಾಗ್ಯೂ, ಜಿಯೋದ ಈ ಯೋಜನೆಯು ಡೇಟಾ ಬೂಸ್ಟರ್ ಯೋಜನೆಯಾಗಿದ್ದು, ಇದು ಮೂಲ ಯೋಜನೆಯೊಂದಿಗೆ ಬಳಕೆದಾರರ ಹೆಚ್ಚುವರಿ ಡೇಟಾ ಅಗತ್ಯತೆಗಳನ್ನು ಪೂರೈಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಸರಳವಾಗಿ ಹೇಳುವುದಾದರೆ, ಬಳಕೆದಾರರು ಇದರ ಜೊತೆಗೆ ಮತ್ತೊಂದು ಬೇಸ್ ಪ್ಲಾನ್ ಸಕ್ರಿಯವಾಗಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

ಈ ಮೂಲ ಯೋಜನೆಯು ರೂ 599, ರೂ 899, ರೂ 1199, ರೂ 1499, ರೂ 2499 ಮತ್ತು ರೂ 3,999 ಆಗಿರಬಹುದು. ಈ ಯೋಜನೆಗಳಲ್ಲಿ ಯಾವುದಾದರೂ ಒಂದನ್ನು ಸಕ್ರಿಯಗೊಳಿಸಿದ ನಂತರವೇ ನೀವು ಜಿಯೋದ ಈ ಡೇಟಾ ಬೂಸ್ಟರ್ ಯೋಜನೆಯ ಲಾಭವನ್ನು ಪಡೆಯಬಹುದು. ಡೇಟಾ ಬೂಸ್ಟರ್ ಯೋಜನೆಯಡಿಯಲ್ಲಿ ಲಭ್ಯವಿರುವ 1TB ಡೇಟಾವು ಮೂಲ ಯೋಜನೆಯ ಮಾನ್ಯತೆಯವರೆಗೆ ಮಾನ್ಯವಾಗಿರುತ್ತದೆ. ಉದಾಹರಣೆಗೆ, ನೀವು 1 ತಿಂಗಳ ಯೋಜನೆಯನ್ನು ಸಕ್ರಿಯಗೊಳಿಸಿದ್ದರೆ, ಡೇಟಾ ಬೂಸ್ಟರ್ ಯೋಜನೆಯ ಅಡಿಯಲ್ಲಿ ಲಭ್ಯವಿರುವ 1TB ಡೇಟಾವನ್ನು ನೀವು 1 ತಿಂಗಳವರೆಗೆ ಯಾವಾಗ ಬೇಕಾದರೂ ಬಳಸಬಹುದು.

ಜಿಯೋ ಏರ್‌ಫೈಬರ್ ಯೋಜನೆಗಳು
599 ರ ಜಿಯೋ ಏರ್‌ಫೈಬರ್ ಪ್ಲಾನ್ ಕುರಿತು ಹೇಳುವುದಾದರೆ, ಇದರಲ್ಲಿ ನೀವು 30Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ಇದಲ್ಲದೆ, ಈ ಯೋಜನೆಯು 14 ಓಟಿಟಿ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಒಳಗೊಂಡಿದೆ. ರೂ 899 ಮತ್ತು ರೂ 1199 ಯೋಜನೆಗಳು 100Mbps ವೇಗದಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತವೆ. ರೂ 899 ಯೋಜನೆಯಲ್ಲಿ 14 ಓಟಿಟಿ ಅಪ್ಲಿಕೇಶನ್‌ಗಳು ಮತ್ತು ರೂ 1199 ಯೋಜನೆಯಲ್ಲಿ 14 ಓಟಿಟಿ ಅಪ್ಲಿಕೇಶನ್‌ಗಳನ್ನು ಹೊರತುಪಡಿಸಿ, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೂ ಸಿನಿಮಾ  ಪ್ರೀಮಿಯಂಗೆ ಉಚಿತ ಚಂದಾದಾರಿಕೆ ಲಭ್ಯವಿದೆ.

ಮ್ಯಾಕ್ಸ್ ಯೋಜನೆಯಲ್ಲಿ, ರೂ 1499 ಯೋಜನೆಯು 300mbps ವೇಗದಲ್ಲಿ ಇಂಟರ್ನೆಟ್ ಅನ್ನು ಒದಗಿಸುತ್ತದೆ. ರೂ 2499 ಯೋಜನೆಯು 500mbps ವೇಗದಲ್ಲಿ ಡೇಟಾವನ್ನು ಒದಗಿಸುತ್ತದೆ. ಇದೇ ವೇಳೆ , ರೂ 3999 ಯೋಜನೆಯು 1000mbps ವೇಗದಲ್ಲಿ ಡೇಟಾ ಪ್ರವೇಶವನ್ನು ಒದಗಿಸುತ್ತದೆ. ಎಲ್ಲಾ ಮೂರು ಪ್ಯಾಕ್‌ಗಳೊಂದಿಗೆ, 14 ಓಟಿಟಿ ಅಪ್ಲಿಕೇಶನ್‌ಗಳನ್ನು ಹೊರತುಪಡಿಸಿ, ನೀವು ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ ಮತ್ತು ಜಿಯೋ ಸಿನಿಮಾ ಪ್ರೀಮಿಯಂಗೆ ಉಚಿತ ಚಂದಾದಾರಿಕೆಯನ್ನು ಪಡೆಯುತ್ತೀರಿ.

Trending News