Chandrayaan 3 :ಚಂದ್ರನ ಮೇಲೈ ಸ್ಪರ್ಶಕ್ಕೆ ಕ್ಷಣಗಣನೆ ! ಈ ಅದ್ಬುತದ ನೇರ ದೃಶ್ಯಗಳನ್ನು ಇಲ್ಲಿ ವೀಕ್ಷಿಸಿ

Chandrayaan 3 latest update :ಆಗಸ್ಟ್ 23 ರ ಬುಧವಾರ 18.04 ಗಂಟೆಗೆ ಚಂದ್ರಯಾನ-3 ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ.

Written by - Ranjitha R K | Last Updated : Aug 21, 2023, 12:53 PM IST
  • ಇತಿಹಾಸ ನಿರ್ಮಿಸಲು ಸಜ್ಜಾಗಿದೆ ಚಂದ್ರಯಾನ-3
  • ಅದ್ಭುತ ಘಳಿಗೆಗೆ ಕ್ಷಣಗಣನೆ
  • ಈ ದೃಶ್ಯಾವಳಿ ನೇರ ಪ್ರಸಾರ ಕೂಡಾ ಲಭ್ಯ
Chandrayaan 3 :ಚಂದ್ರನ ಮೇಲೈ ಸ್ಪರ್ಶಕ್ಕೆ ಕ್ಷಣಗಣನೆ ! ಈ ಅದ್ಬುತದ ನೇರ ದೃಶ್ಯಗಳನ್ನು ಇಲ್ಲಿ ವೀಕ್ಷಿಸಿ   title=

Chandrayaan 3 latest update : ಚಂದ್ರಯಾನ-3 ಇತಿಹಾಸ ನಿರ್ಮಿಸಲು ಸಜ್ಜಾಗಿದೆ! ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಗ್ಯಾನ್' ಅನ್ನು ಒಳಗೊಂಡಿರುವ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಆಗಸ್ಟ್ 23 ರ ಬುಧವಾರ 18.04 ಗಂಟೆಗೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ.

ಭಾರತದ ಮೂರನೇ ಚಂದ್ರಯಾನ ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿದೆ. ಕೆಲವು ವಾರಗಳ ನಂತರ, ಅಂದರೆ ಆಗಸ್ಟ್ 5 ರಂದು, ಲ್ಯಾಂಡರ್ ಚಂದ್ರನ ಕಕ್ಷೆಯನ್ನು ತಲುಪಿದೆ. ಆಗಸ್ಟ್ 20 ರಂದು, ಚಂದ್ರಯಾನ-3 ತನ್ನ ಎರಡನೇ ಮತ್ತು ಅಂತಿಮ ಡಿ-ಬೂಸ್ಟಿಂಗ್ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 

ಇದನ್ನೂ ಓದಿ : ವಾಟ್ಸಪ್‌ನಲ್ಲೂ ಬಂತು ಹೊಸ ಫೀಚರ್‌..ಇಂಟರ್‌ನೆಟ್‌ ಲೋ ಇದ್ರೆ ಈ ಸೌಲಭ್ಯ ಲಾಭ ಇಲ್ಲ..!

ಲ್ಯಾಂಡಿಂಗ್ ಎಲ್ಲಿ ನಡೆಯುತ್ತದೆ? : 
ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ "ಸಾಫ್ಟ್ ಲ್ಯಾಂಡಿಂಗ್" ಮಾಡುವಂತೆ ಹೊಂದಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ನ ಯಶಸ್ವಿ ಸ್ಪರ್ಶದ ನಂತರ, ಅದರ ಪ್ರೊಪಲ್ಷನ್ ಮಾಡ್ಯೂಲ್ ಭೂಮಿಯ ವಾತಾವರಣದ ಸಂಶೋಧನೆ ನಡೆಸುವ ಉದ್ದೇಶದಿಂದ ಚಂದ್ರನ ಸುತ್ತ ತನ್ನ ಕಕ್ಷೆಯನ್ನು ನಿರ್ವಹಿಸುತ್ತದೆ. ಈ ಮೂಲಕ ಅಮೆರಿಕ, ಚೀನಾ ಮತ್ತು ರಷ್ಯಾ ನಂತರ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.

 

ಬಹು ನಿರೀಕ್ಷಿತ  ಘಳಿಗೆಯನ್ನು ಆಗಸ್ಟ್ 23 ರಂದು 17:27 ಕ್ಕೆ ವಿವಿಧ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಆಗಸ್ಟ್ 20 ರಂದು, ಐತಿಹಾಸಿಕ ಲ್ಯಾಂಡಿಂಗ್ ಅನ್ನು ವೀಕ್ಷಿಸಬಹುದಾದ ವಿವಿಧ ವೇದಿಕೆಗಳ ಕುರಿತು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಈ ಅದ್ಭುತ  ಕ್ಷಣಗಳ ಪ್ರಸಾರವು ಇಸ್ರೋ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನೆಲ್, ಇಸ್ರೋದ ಫೇಸ್‌ಬುಕ್ ಪೇಜ್ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್‌ನಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ : ಹೆಚ್ಚುವರಿ ವಿದ್ಯುತ್ ಯೂನಿಟ್ ಗಳ ಬಳಕೆಯ ಕಾರಣದಿಂದ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದೀರಾ? ಇಲ್ಲಿವೆ ಟಿಪ್ಸ್!

ಇಸ್ರೋ ವೆಬ್‌ಸೈಟ್ - https://isro.gov.in
YouTube - https://youtube.com/watch?v=DLA_64yz8Ss
ಫೇಸ್ಬುಕ್ : https://facebook.com/ISROನಲ್ಲಿ  ಈ ಅಮೃತ ಘಳಿಗೆಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News