ಬದಲಾಗಿದೆ ಕಾಲ ! ಅಲ್ ಫಾನ್ಜೋ ಮಾವಿಗೂ EMI ಸೌಲಭ್ಯ !

Mango on EMI :ತಮ್ಮ ಹಣಕಾಸಿನ ಸಮಸ್ಯೆಗಳನ್ನು ಬದಿಗಿಟ್ಟು  ಆಲ್ಫೊನ್ಸೋ ಮಾವಿನಹಣ್ಣಿನ ರುಚಿಯನ್ನು ಮನಃಪೂರ್ವಕವಾಗಿ ಆನಂದಿಸುವಂತೆ  ಪುಣೆಯ ಆನಂದ್ ನಗರದಲ್ಲಿರುವ ಗೌರವ್ ಎಂಬವರು ಹೇಳಿದ್ದಾರೆ. ಇಲ್ಲಿ ಈ ಮಾವಿನ ಬಿಲ್‌ಗಳನ್ನು ಅತ್ಯಲ್ಪ ವೆಚ್ಚದಲ್ಲಿ EMI ಗಳಾಗಿ ಪರಿವರ್ತಿಸಲಾಗುತ್ತದೆ.  

Written by - Ranjitha R K | Last Updated : Apr 5, 2023, 08:09 PM IST
  • ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಕಂಗಾಲು
  • ಹೊಸ ಐಡಿಯಾ ಕಂಡು ಹಿಡಿದ ಹಣ್ಣು ಬೆಳೆಗಾರ
  • EMIನಲ್ಲಿ ಮಾವು ಮಾರಾಟ
ಬದಲಾಗಿದೆ ಕಾಲ ! ಅಲ್ ಫಾನ್ಜೋ ಮಾವಿಗೂ EMI ಸೌಲಭ್ಯ !  title=

Mango on EMI : ಬೆಲೆ ಏರಿಕೆಯಿಂದಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಅಗತ್ಯ ವಸ್ತುಗಳ ಖರೀದಿಗೂ ಮುಂದೆ ಹಿಂದೆ ಯೋಚನೆ ಮಾಡುವಂತಾಗಿದೆ. ಈ ಬೆಲೆ ಏರಿಕೆ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ನೀಡಲು ಹಣ್ಣು ಬೆಳೆಗಾರರೊಬ್ಬರು ನಿರ್ಧರಿಸಿದ್ದಾರೆ. ಇದಕ್ಕೆ ಹೊಸ ಐಡಿಯಾವನ್ನು ಕಂಡುಕೊಂಡಿದ್ದಾರೆ. ಪುಣೆಯ ಹಣ್ಣು ಮಾರಾಟಗಾರರೊಬ್ಬರು ಅಲ್ಫೋನ್ಸೊ ಮಾವಿನ ಹಣ್ಣುಗಳನ್ನು ಸಮಾನ ಮಾಸಿಕ ಕಂತುಗಳಲ್ಲಿ (ಇಎಂಐ) ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ.

ತಮ್ಮ ಹಣಕಾಸಿನ ಸಮಸ್ಯೆಗಳನ್ನು ಬದಿಗಿಟ್ಟು  ಆಲ್ಫೊನ್ಸೋ ಮಾವಿನಹಣ್ಣಿನ ರುಚಿಯನ್ನು ಮನಃಪೂರ್ವಕವಾಗಿ ಆನಂದಿಸುವಂತೆ  ಪುಣೆಯ ಆನಂದ್ ನಗರದಲ್ಲಿರುವ ಗೌರವ್ ಎಂಬವರು ಹೇಳಿದ್ದಾರೆ. ಇವರು ಸುನಾಸ್ ಪಾಯಿಂಟ್-ಆಫ್-ಸೇಲ್ (ಪಿಒಎಸ್) ಯಂತ್ರಗಳನ್ನು ಸ್ಥಾಪಿಸಿದ್ದು ಅದು ಕ್ರೆಡಿಟ್ ಕಾರ್ಡ್‌ಗಳು ಮತ್ತು ಕೆಲವು ಡೆಬಿಟ್ ಕಾರ್ಡ್‌ಗಳಲ್ಲಿ ಬಿಲ್ ಮೊತ್ತವನ್ನು 3 ರಿಂದ 18 ಇಎಂಐಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : Good News: ವಾಹನ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ!

ಅತಿ ದುಬಾರಿ ಪ್ರೀಮಿಯಂ ಮಾವು : 
ದೇವಗಡ ಹಪಸ್‌ನಂತಹ ಹಣ್ಣುಗಳು ತುಂಬಾ  ದುಬಾರಿಯಾಗಿರುತ್ತದೆ. ಈ  ಕಾರಣದಿಂದ ಹಣದ ಕೊರತೆಯ ಕಾರಣದಿಂದ ಅದೆಷ್ಟೋ ಜನ ಈ ಪ್ರೀಮಿಯಂ ಮಾವಿನಹಣ್ಣುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಈ ಮಾವಿನ ಬಿಲ್‌ಗಳನ್ನು ಅತ್ಯಲ್ಪ ವೆಚ್ಚದಲ್ಲಿ EMI ಗಳಾಗಿ ಪರಿವರ್ತಿಸಲಾಗುತ್ತದೆ.

ಸುಲಭ ಇಎಂಐ ಗಲ್ಲಿ ಮಾವು ಖರೀದಿ :  
ಸುನಾಸ್ ಪ್ರಕಾರ, ದಿಯೋಗರ್ ಹ್ಯಾಪಸ್ ಬಾಕ್ಸ್‌ನ ಬೆಲೆ ಸುಮಾರು 4000 ರೂ (ಪ್ರತಿ ಡಜನ್‌ಗೆ 600 ರಿಂದ 1,300 ರೂ). ಮೊತ್ತವನ್ನು ಪೂರ್ಣವಾಗಿ ಪಾವತಿಸಲು ಇಚ್ಛಿಸದ ಖರೀದಿದಾರರು,  ತಲಾ  700 ರೂಪಾಯಿಯ ಆರು EMI ಗಳಲ್ಲಿ ಆ ಮೊತ್ತವನ್ನು ಪಾವತಿಸಬಹುದಾಗಿದೆ. ಮಹಾರಾಷ್ಟ್ರದಲ್ಲಿ ಮಾವಿನಹಣ್ಣಿಗೆ ಸಾಕಷ್ಟು ಬೇಡಿಕೆಯಿದೆ, ವಿಶೇಷವಾಗಿ ಗುಡಿ ಪಾಡ್ವಾ ಮತ್ತು ಅಕ್ಷಯ ತೃತೀಯ ಅವಧಿಯಲ್ಲಿ ಜನರು ಸಾಕಷ್ಟು ಮಾವಿನಹಣ್ಣುಗಳನ್ನು ಖರೀದಿಸುತ್ತಾರೆ. ಅದರಲ್ಲೂ ಈ ವರ್ಷ ಅಕಾಲಿಕ ಮಳೆಯಿಂದಾಗಿ, ಹಣ್ಣುಗಳ ಇಳುವರಿ ಸರಾಸರಿಗಿಂತ ಕಡಿಮೆಯಾಗಿದೆ. ಹಾಗಾಗಿ  ಬೆಲೆ ಸಾಮಾನ್ಯಕ್ಕಿಂತ ಹೆಚ್ಚಾಗಿದೆ.

ಇದನ್ನೂ ಓದಿ : ಈ ಕಂಪನಿಯ ಬೆಸ್ಟ್ ಸೆಲ್ಲಿಂಗ್ ಕಾರು ಇದೆಯೇ! ಬೆಲೆ 7 ಲಕ್ಷಕ್ಕಿಂತ ಕಡಿಮೆ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News