ಏಳು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ OnePlus 5G Smartphone ..!

Amazon Electronic Budget Bazaar: ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫೋನ್‌ ಮೇಲೆ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಕೂಡಾ ನೀಡಲಾಗಿದೆ.

Written by - Ranjitha R K | Last Updated : Jul 13, 2022, 02:25 PM IST
  • ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ
  • ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ ಕೂಡಾ ಲಭ್ಯ
  • ಅಮೆಜಾನ್ ಎಲೆಕ್ಟ್ರಾನಿಕ್ ಬಜೆಟ್ ಬಜಾರ್
ಏಳು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ  OnePlus 5G Smartphone ..!  title=
Amazon Electronic Budget Bazaar (file photo)

Amazon Electronic Budget Bazaar:  ಎಲೆಕ್ಟ್ರಾನಿಕ್ ಬಜೆಟ್ ಬಜಾರ್ ಅನ್ನು Amazonನ ಮೊಬೈಲ್ ವಿಭಾಗದಲ್ಲಿ ಲಿಸ್ಟ್ ಮಾಡಲಾಗಿದೆ. ಇಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫೋನ್‌ ಮೇಲೆ ಬ್ಯಾಂಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಕೂಡಾ ನೀಡಲಾಗಿದೆ. ಈ ಆಫರ್ ಗಳನ್ನು ಬಳಸಿದರೆ ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.  ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಜನೆ ಇದ್ದರೆ, OnePlus ನ Nord CE 2 Lite 5G ಅನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. 

ಅಮೆಜಾನ್ ಎಲೆಕ್ಟ್ರಾನಿಕ್ ಬಜೆಟ್ ಬಜಾರ್ : OnePlus Nord CE 2 Lite 5G ಕೊಡುಗೆಗಳು ಮತ್ತು ರಿಯಾಯಿತಿಗಳು:
nePlus Nord CE 2 Lite 5G 6GB RAM, 128GB ಸ್ಟೋರೇಜ್  ಫೋನ್ Amazonನಲ್ಲಿ 19,999 ರೂಪಾಯಿಗೆ ಲಭ್ಯವಿದೆ. ಆದರೆ ಫೋನ್‌  ಮೇಲೆ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್  ಗಳು ಕೂಡಾ ಇವೆ. ಈ ಆಫರ್ ಗಳನ್ನು ಬಳಸಿದರೆ ಫೋನ್‌ನ ಬೆಲೆ ಗಮನಾರ್ಹವಾಗಿ ಕಡಿಮೆಯಾಗಲಿದೆ. 

ಇದನ್ನೂ ಓದಿ : 100 ರೂ.ಗಿಂತ ಕಡಿಮೆ ಬೆಲೆಯಲ್ಲಿ 3 ಪ್ರಿಪೇಯ್ಡ್ ಪ್ಲಾನ್ಸ್ ಪರಿಚಯಿಸಿದ ಬಿಎಸ್ಎನ್ಎಲ್

ಅಮೆಜಾನ್ ಎಲೆಕ್ಟ್ರಾನಿಕ್ ಬಜೆಟ್ ಬಜಾರ್: OnePlus Nord CE 2 Lite 5G ಬ್ಯಾಂಕ್ ಆಫರ್ : 
OnePlus Nord CE 2 Lite 5G ಖರೀದಿಸಲು ICICI ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ, 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಈ ರಿಯಾಯಿತಿ ನಂತರ  ಫೋನ್ ಬೆಲೆ 17,999 ರೂ. ಆಗಿರಲಿದೆ. 

ಅಮೆಜಾನ್ ಎಲೆಕ್ಟ್ರಾನಿಕ್ ಬಜೆಟ್ ಬಜಾರ್: OnePlus Nord CE 2 Lite 5G ಎಕ್ಸ್ಚೇಂಜ್ ಆಫರ್ : 
OnePlus Nord CE 2 Lite 5G ನಲ್ಲಿ 11,500 ರೂಪಾಯಿಗಳ ವಿನಿಮಯ ಕೊಡುಗೆ ಲಭ್ಯವಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ 11,500  ರೂಪಾಯಿಗಳ  ರಿಯಾಯಿತಿ ಪಡೆಯಬಹುದು. ಆದರೆ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 11,500 ರೂ. ಪಡೆಯುವುದು ಸಾಧ್ಯವಾಗುತ್ತದೆ. ಹೀಗೆ ಎಲ್ಲಾ ರಿಯಾಯಿತಿಗಳನ್ನು ಪಡೆಯುವುದು ಸಾಧ್ಯವಾದರೆ ಈ ಫೋನ್‌ ಅನ್ನು  6,499 ರೂ.ಯಲ್ಲಿ ಖರೀದಿಸಬಹುದು.

ಇದನ್ನೂ ಓದಿ :  ಈ WhatsApp ಅಪ್ಲಿಕೇಶನ್‌ಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು, ಎಚ್ಚರ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News