ಕೇವಲ 5 ಸಾವಿರ ರೂಪಾಯಿ ಬೆಲೆಗೆ ಸಿಗುತ್ತದೆ Portable Air Conditioner..!

ಎಸಿ ದುಬಾರಿಯಾಗಿರುವುದರಿಂದ ಎಲ್ಲರೂ ಅದನ್ನು ಖರೀದಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೋರ್ಟಬಲ್ AC ಕಡಿಮೆ ಬೆಲೆಯಲ್ಲಿ ಸಿಗುತ್ತದೆ.  

Written by - Ranjitha R K | Last Updated : Jun 21, 2022, 12:24 PM IST
  • ಅತಿಯಾದ ಬಿಸಿಲಿನಲ್ಲಿ ಫ್ಯಾನ್ ಕೂಲರ್ ಗಳು ಕೂಡಾ ಪ್ರಯೋಜನಕಾರಿಯಾಗಿರುವುದಿಲ್ಲ.
  • ಮಾರುಕಟ್ಟೆಯಲ್ಲಿ ಲಭ್ಯವಿದೆ ಪೋರ್ಟಬಲ್ ಎಸಿ
  • ಪೋರ್ಟಬಲ್ ಎಸಿ ಉತ್ತಮ ವೈಶಿಷ್ಟ್ಯಗಳನ್ನು ಕೂಡಾ ಹೊಂದಿದೆ.
ಕೇವಲ 5 ಸಾವಿರ ರೂಪಾಯಿ ಬೆಲೆಗೆ  ಸಿಗುತ್ತದೆ Portable Air Conditioner..!  title=
Portable AC (file photo)

ಬೆಂಗಳೂರು : ಕೆಲವು ರಾಜ್ಯಗಳಲ್ಲಿ ಇನ್ನೂ ತಾಪಮಾನವು 45 ಡಿಗ್ರಿ ಮೀರಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜನ ಪರಿತಪಿಸುವಂತಾಗಿದೆ. ಇಂಥ ಸಮಯದಲ್ಲಿ ಕೆಲವೊಮ್ಮೆ ಫ್ಯಾನ್ ಕೂಲರ್ ಗಳು ಕೂಡಾ ಪ್ರಯೋಜನಕಾರಿಯಾಗಿರುವುದಿಲ್ಲ. ಆದರೆ ಎಸಿ ದುಬಾರಿಯಾಗಿರುವುದರಿಂದ ಎಲ್ಲರೂ ಅದನ್ನು ಖರೀದಿಸುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೋರ್ಟಬಲ್ ಎಸಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ.  ಈ ಪೋರ್ಟಬಲ್  ಎಸಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವುದು ಮಾತ್ರವಲ್ಲ  ಉತ್ತಮ ವೈಶಿಷ್ಟ್ಯಗಳನ್ನು ಕೂಡಾ ಹೊಂದಿದೆ. 

ಪೋರ್ಟಬಲ್ ಏರ್ ಕಂಡಿಷನರ್ : 
ಪೋರ್ಟಬಲ್ ಏರ್ ಕಂಡೀಷನರ್ ಬೆಲೆ 18,291 ರೂ. ಆದರೆ Amazon 71% ರಷ್ಟು ರಿಯಾಯಿತಿ ಬೆಲೆಗೆ ಲಭ್ಯವಿದ್ದು, ಇದನ್ನು ಇಲ್ಲಿ  5,336 ರೂಗಳಿಗೆ ಖರೀದಿಸಬಹುದಾಗಿದೆ.  ಇದು 500 ಮಿಲಿ ನೀರಿನ ಟ್ಯಾಂಕ್ ಅನ್ನು ಹೊಂದಿದ್ದು,  3ರಿಂದ 5 ಗಂಟೆಗಳವರೆಗೆ ಬರುತ್ತದೆ. ಇದರಲ್ಲಿ ನೀರಿನೊಂದಿಗೆ ಸಣ್ಣ ಐಸ್ ಬ್ಲಾಕ್ ಗಳನ್ನು ಕೂಡ ಹಾಕಬಹುದು. ಇದು 3 ವಿಧಾನಗಳಲ್ಲಿ ಬರುತ್ತದೆ.  ಸ್ಲೋ, ಮೀಡಿಯಂ, ಫಾಸ್ಟ್ ಹೀಗೆ ಮೂರು ವಿಧಾನಗಲ್ಲಿ ಬರುತ್ತದೆ. 

ಇದನ್ನೂ ಓದಿ : Telegram Premium ಸೇವೆ ಬಿಡುಗಡೆ, ಸಿಗಲಿವೆ ವಾಟ್ಸ್ ಆಪ್ ಗಿಂತ ಹಲವು ಜಬರ್ದಸ್ತ್ ವೈಶಿಷ್ಟ್ಯಗಳು

G.FIDEL USB ಪೋರ್ಟಬಲ್ ಮಿನಿ AC ಕೂಲರ್ : 
G.FIDEL USB ಪೋರ್ಟಬಲ್ ಮಿನಿ AC ಕೂಲರ್ ಸಂಪೂರ್ಣವಾಗಿ ಪ್ಲಾಸ್ಟಿಕ್ ಕೂಲರ್ ಆಗಿದೆ. ಇದು ನೋಡಲು ಬಹಳ ಚಿಕ್ಕದಾಗಿದೆ ಮತ್ತು ಹಗುರವಾಗಿರುತ್ತದೆ. ಇದನ್ನು ಎಲ್ಲಿಗೆ  ಬೇಕಾದರೂ ಜೊತೆಯಲ್ಲಿ ಕೊಂಡೊಯ್ಯಬಹುದು. ಇದರ ಬೆಲೆ 999 ರೂ. ಆದರೆ Amazon ನಲ್ಲಿ 599 ರೂ.ಗಳಲ್ಲಿ ಲಭ್ಯವಿದೆ. ಇದನ್ನು USB ನೊಂದಿಗೆ ಪ್ಲಗ್ ಇನ್ ಮಾಡಬಹುದು. ಇದರ ಎತ್ತರವು ಕೇವಲ 8 ಸೆಂಟಿಮೀಟರ್ ಆಗಿದೆ. 

ಮೇರಿ ಶಾಪ್ ಪೋರ್ಟಬಲ್ ಏರ್ ಕೂಲರ್ ಫ್ಯಾನ್ ಡೆಸ್ಕ್‌ಟಾಪ್ ಕೂಲಿಂಗ್ ಏರ್ ಕಂಡಿಷನರ್ :
ಈ ಸ್ಟೈಲಿಶ್ ಏರ್ ಕೂಲರ್‌ನ ಬೆಲೆ 7,496 ರೂ. ಆಗಿದೆ. ಇದನ್ನು ಅಮೆಜಾನ್‌ನಲ್ಲಿ  3,748 ರೂ.ಗಳಿಗೆ ಖರೀದಿಸಬಹುದು. ಇದರ ವಿನ್ಯಾಸ ಸಾಕಷ್ಟು ಸೊಗಸಾಗಿದೆ. ಉತ್ತಮ ವಿನ್ಯಾಸದೊಂದಿಗೆ ಸಣ್ಣ ಕೂಲರ್ ಅನ್ನು ಪಡೆಯಲು ಬಯಸಿದರೆ, ಇದು ಅತ್ಯುತ್ತಮ ಆಯ್ಕೆಯಾಗಿದೆ. 

ಇದನ್ನೂ ಓದಿ : ಭೂಮಿಗೆ ಅಪ್ಪಳಿಸಲಿದೆ 600 KM /ಸೆಕೆಂಡ್ ವೇಗದಲ್ಲಿ ಚಲಿಸುವ ಸೌರ ಮಾರುತ .! GPS ಮೇಲೆ ಬೀರಲಿದೆ ನೇರ ಪರಿಣಾಮ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News