ಏಕಾಏಕಿ ಕುಸಿದ ಐಫೋನ್ ಬೆಲೆ : 35 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಐಫೋನ್ 15 :ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಗೆ ಇದೇ ಅವಕಾಶ

ಗಣರಾಜ್ಯೋತ್ಸವ 2025ರ ಸಂದರ್ಭದಲ್ಲಿ, ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಉತ್ತಮ ಆಫರ್ ಗಳು ನಡೆಯುತ್ತಿವೆ. ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ,  ಅಮೆಜಾನ್‌ನ ರಿಪಬ್ಲಿಕ್ ಸೇಲ್ ಲಾಭವನ್ನು ಪಡೆದುಕೊಳ್ಳಬಹುದು. 

Written by - Ranjitha R K | Last Updated : Jan 14, 2025, 12:17 PM IST
  • Amazonನಲ್ಲಿ ಅಗ್ಗದ ಬೆಲೆಗೆ ಲಭ್ಯ
  • iPhone 15 ಮೇಲೆ ಭಾರೀ ರಿಯಾಯಿತಿ
  • iPhone 15 ಎಕ್ಸ್ಚೇಂಜ್ ಆಫರ್
ಏಕಾಏಕಿ ಕುಸಿದ ಐಫೋನ್ ಬೆಲೆ : 35 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಐಫೋನ್ 15 :ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಗೆ ಇದೇ ಅವಕಾಶ title=

ಬೆಂಗಳೂರು : 2025ರಲ್ಲಿ ಐಫೋನ್ ಖರೀದಿಸಬೇಕು ಎಂದುಕೊಂಡಿದ್ದರೆ ನಿಮಗಾಗಿ ಉತ್ತಮ ಸುದ್ದಿ ಇದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್ 15 ಅನ್ನು ಖರೀದಿಸಬಹುದಾಗಿದೆ. ಗಣರಾಜ್ಯೋತ್ಸವ 2025ರ ಸಂದರ್ಭದಲ್ಲಿ, ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಉತ್ತಮ ಆಫರ್ ಗಳು ನಡೆಯುತ್ತಿವೆ. ಅಮೆಜಾನ್ ಸೇಲ್ ‌ನಲ್ಲಿ ಐಫೋನ್ 15 ಅನೇಕ ಮಾದರಿಗಳಲ್ಲಿ ಭಾರೀ ರಿಯಾಯಿತಿಗಳನ್ನು  ಘೋಷಿಸಲಾಗಿದೆ. 
 
Amazonನಲ್ಲಿ ಅಗ್ಗದ ಬೆಲೆಗೆ ಲಭ್ಯ : 
ಆಪಲ್ ಐಫೋನ್‌ಗಳು ತಮ್ಮ ಉತ್ತಮ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಪ್ರಸಿದ್ಧವಾಗಿವೆ. ನಿಮ್ಮ ಡೇಟಾ ಸುರಕ್ಷಿತವಾಗಿರಬೇಕಾದರೆ ಐಫೋನ್ ಉತ್ತಮ ಆಯ್ಕೆಯಾಗಿದೆ. ನೀವು ಕೂಡಾ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ,  ಅಮೆಜಾನ್‌ನ ರಿಪಬ್ಲಿಕ್ ಸೇಲ್ ಲಾಭವನ್ನು ಪಡೆದುಕೊಳ್ಳಬಹುದು.  

ಇದನ್ನೂ ಓದಿ : Redmi Note 12 Pro 256GB ಬೆಲೆ ಹಠಾತ್‌ ಕುಸಿತ; Flipkartನಲ್ಲಿ ಶೇ.43ರಷ್ಟು ಡಿಸ್ಕೌಂಟ್‌!!

iPhone 15 ರಿಯಾಯಿತಿ : 
Amazonನಲ್ಲಿ iPhone 15 ಬೆಲೆ 69,900 ರೂ. ಆದರೆ ಗಣರಾಜ್ಯೋತ್ಸವ ಸೇಲ್‌ನಲ್ಲಿ Amazon 18% ರಷ್ಟು ದೊಡ್ಡ ರಿಯಾಯಿತಿಯನ್ನು ನೀಡುತ್ತಿದೆ. ಅಂದರೆ ಈ ಫೋನ್ ಬೆಲೆ 57,499 ರೂ.ಗೆ ಇಳಿಯುತ್ತದೆ. EMI ನಲ್ಲಿಯೂ ಈ ಫೋನ್ ಅನ್ನು ಖರೀದಿಸಬಹುದು. ಪ್ರತಿ ತಿಂಗಳು ಕೇವಲ 2,788 ರೂ ಪಾವತಿಸುವ ಮೂಲಕ  iPhone 15 ಅನ್ನು  ಖರೀದಿಸಬಹುದು. 

iPhone 15 ಎಕ್ಸ್ಚೇಂಜ್ ಆಫರ್ : 
ಎಸ್‌ಬಿಐ ಬ್ಯಾಂಕ್ ಕಾರ್ಡ್ ಹೊಂದಿದ್ದರೆ, 1,000 ರೂ. ರಿಯಾಯಿತಿ ಸಿಗುತ್ತದೆ. ಹಳೆಯ ಫೋನ್ ಅನ್ನು ಎಕ್ಸ್ಚೇಂಜ್ ಮಾಡಿಕೊಂಡರೆ 22,800 ರೂ.ವರೆಗೆ  ಪಡೆಯಬಹುದು. ಆದರೆ ಇಷ್ಟು ರಿಯಾಯಿತಿ ಸಿಗಬೇಕಾದರೆ ಹಳೆಯ ಫೋನ್‌ ಉತ್ತಮ ಸ್ಥಿತಿಯಲ್ಲಿರಬೇಕು. 

ಇದನ್ನೂ ಓದಿ : ಹೊಸ ಅಪಡೇಟ್ ಜೊತೆ ಬರಲಿದೆ WhatsApp Pay!

iPhone 15 ವಿಶೇಷಣಗಳು :
ಈ ಫೋನ್ ಅಲ್ಯೂಮಿನಿಯಂ ಫ್ರೇಮ್ ಮತ್ತು ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ. ಇದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಇದು IP68 ರೇಟಿಂಗ್ ಅನ್ನು ಹೊಂದಿದೆ. ಅಂದರೆ ಇದು ನೀರು ಮತ್ತು ಧೂಳಿನಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದರೊಳಗೆ A16 ಬಯೋನಿಕ್ ಚಿಪ್‌ಸೆಟ್ ಅನ್ನು ಸ್ಥಾಪಿಸಲಾಗಿದೆ. ಇದು 4nm ತಂತ್ರಜ್ಞಾನವನ್ನು ಆಧರಿಸಿದೆ. ಇದರಿಂದಾಗಿ ಫೋನ್ ಅತ್ಯಂತ ವೇಗವಾಗಿ ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಈ ಫೋನ್ 6GB RAM ಮತ್ತು 512GB ವರೆಗಿನ ಸ್ಟೋರೇಜ್ ಅನ್ನು ಹೊಂದಿದೆ. 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 12-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News