Weight Loss Habits: ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆಯು ಸಾಂಕ್ರಾಮಿಕ ರೋಗದಂತೆ ದೇಶ ಮತ್ತು ಪ್ರಪಂಚದಲ್ಲೆಡೆ ಹರಡುತ್ತಿದೆ. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯೇ ಬೊಜ್ಜಿಗೆ ಮುಖ್ಯ ಕಾರಣ. ಚಳಿಗಾಲದಲ್ಲಿ ಸ್ಥೂಲಕಾಯದ ಸಮಸ್ಯೆ ಇನ್ನಷ್ಟು ವೇಗವಾಗಿ ಹೆಚ್ಚಾಗುತ್ತದೆ. ಹೌದು, ಈ ಋತುವಿನಲ್ಲಿ ಸೋಮಾರಿತನದಿಂದ ಜನರು ಜಿಮ್‌ಗೆ ಹೋಗುವುದಿಲ್ಲ ಮತ್ತು ಹೊರಗಿನ ಆಹಾರವನ್ನು ಹೆಚ್ಚು ತಿನ್ನುತ್ತಾರೆ. ಅಂದರೆ ಅವರು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ತುಂಬಾ ಅಸಡ್ಡೆ ತೋರುತ್ತಾರೆ. ಈ ಕಾರಣಗಳಿಂದ ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ. ನೀವು ಅಧಿಕ ತೂಕದಿಂದ ಬಳಲುತ್ತಿದ್ದರೆ ಕೆಲವು ಅಭ್ಯಾಸಗಳನ್ನ ರೂಢಿಸಿಕೊಂಡರೆ ಸುಲಭವಾಗಿ ನೀವು ತೂಕ ನಷ್ಟ ಮಾಡಿಕೊಳ್ಳಬಹುದು.
ದೈನಂದಿನ ದಿನಚರಿಯಲ್ಲಿ ಈ ಅಭ್ಯಾಸ ರೂಢಿಸಿಕೊಳ್ಳಿರಿ
ಸಾಕಷ್ಟು ನೀರು ಕುಡಿಯಿರಿ: ಬೊಜ್ಜು ಕಡಿಮೆಯಾಗಲು ದೇಹವು ನೀರಿನಂಶವನ್ನು ಹೊಂದಿರಬೇಕು. ಆದ್ದರಿಂದ ದಿನಕ್ಕೆ ಕನಿಷ್ಠ ಎರಡೂವರೆ ಮೂರು ಲೀಟರ್ ನೀರನ್ನು ಕುಡಿಯಿರಿ. ನೀರು ದೇಹದಲ್ಲಿ ಸಂಗ್ರಹವಾದ ವಿಷವನ್ನು ಹೊರಹಾಕುತ್ತದೆ ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯಕರ ಆಹಾರ ಸೇವಿಸಿರಿ: ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ನಿಮ್ಮ ಆಹಾರವನ್ನು ಸುಧಾರಿಸಿ. ಹೊರಗೆ ತಿನ್ನುವುದನ್ನು ನಿಲ್ಲಿಸಿ, ಎಣ್ಣೆಯುಕ್ತ ಆಹಾರ ಮತ್ತು ಪಿಜ್ಜಾ-ಬರ್ಗರ್ಸ್ ತಿನ್ನಬೇಡಿ. ನಿಮ್ಮ ಆಹಾರದಲ್ಲಿ ಫೈಬರ್, ಪ್ರೋಟೀನ್ ಮತ್ತು ವಿಟಮಿನ್ಗಳನ್ನು ಬಳಸಲು ಪ್ರಾರಂಭಿಸಿ. ನೀವು ಸಾಕಷ್ಟು ಹಸಿರು ತರಕಾರಿಗಳನ್ನು ಸಹ ಸೇವಿಸಬೇಕು.
ರಾತ್ರಿ ಬೇಗ ಆಹಾರ ಸೇವಿಸಿರಿ: ರಾತ್ರಿ ಬೇಗ ಊಟ ಮಾಡದಿರುವುದು ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಮೊದಲನೆಯದಾಗಿ ನಿಮ್ಮ ಆಹಾರ ಪದ್ಧತಿ ಮತ್ತು ಸಮಯವನ್ನು ಸುಧಾರಿಸಿಕೊಳ್ಳಿರಿ. ರಾತ್ರಿ 8 ಗಂಟೆಯ ಮೊದಲು ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
ಇದನ್ನೂ ಓದಿ: ಒಂದು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು? ಇದರ ಅತಿಯಾದ ಸೇವನೆಯಿಂದ ಏನಾಗುತ್ತೆ ಗೊತ್ತಾ..?
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ: ಬೇಗ ನಿದ್ದೆ ಮಾಡದಿದ್ದರೆ ಬೊಜ್ಜು ಕೂಡ ಹೆಚ್ಚುತ್ತದೆ. ಹೀಗಾಗಿ ರಾತ್ರಿ ಆದಷ್ಟು ಬೇಗ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಜನರು ಸಾಮಾನ್ಯವಾಗಿ ರಾತ್ರಿಯಲ್ಲಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸ್ಕ್ರೋಲಿಂಗ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಮಲಗುವ ಅರ್ಧ ಗಂಟೆ ಮೊದಲು ನಿಮ್ಮ ಮೊಬೈಲ್ ತೆಗೆದಿರಿಸಿ. ಮಲಗಿದ ನಂತರ ಯಾವುದೇ ಕಾರಣಕ್ಕೂ ನೀವು ಮೊಬೈಲ್ ಮುಟ್ಟಬೇಡಿ.
ವ್ಯಾಯಾಮ: ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಮತ್ತು ಬೊಜ್ಜು ಕಡಿಮೆ ಮಾಡಲು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು, ನೀವು ಸ್ಕಿಪ್ಪಿಂಗ್, ಸ್ಕ್ವಾಟ್‌ಗಳು ಮತ್ತು ಪ್ಲ್ಯಾಂಕ್‌ನಂತಹ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.