Apple IPhone 11 Sale : ಅಗ್ಗದ ದರದಲ್ಲಿ ದುಬಾರಿ ಫೋನ್ ! ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿ iPhone

Apple IPhone 11 Sale on Flipkart : ಇಲ್ಲಿಯವರೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ  ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸಾಲಿನಲ್ಲಿ  Apple iPhone 11 ಬರುತ್ತದೆ .ಈ  ಪ್ರೀಮಿಯಂ ಸ್ಮಾರ್ಟ್‌ಫೋನ್  ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈಗ ಅದಕ್ಕೆ ಸಮಯ  ಸೂಕ್ತವಾಗಿದೆ. 

Written by - Ranjitha R K | Last Updated : Mar 29, 2023, 11:56 AM IST
  • ಐಫೋನ್ 11 ಅನ್ನು ಪ್ರಸ್ತುತ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
  • ಐಫೋನ್ 11 ಅನ್ನು 2019 ರಲ್ಲಿ ಬಿಡುಗಡೆ ಮಾಡಲಾಯಿತು.
  • ಕೇವಲ 12,999 ರೂಗೆ ಖರೀದಿಸಿ iPhone 11
Apple IPhone 11 Sale : ಅಗ್ಗದ ದರದಲ್ಲಿ ದುಬಾರಿ ಫೋನ್ ! ಕೇವಲ 13 ಸಾವಿರ ರೂಪಾಯಿಗೆ ಖರೀದಿಸಿ  iPhone title=

ಬೆಂಗಳೂರು : ಐಫೋನ್ 11 ಅನ್ನು ಪ್ರಸ್ತುತ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಐಫೋನ್ 11 ಅನ್ನು 2019 ರಲ್ಲಿ ಬಿಡುಗಡೆ ಮಾಡಲಾಯಿತು. ಇಲ್ಲಿಯವರೆಗೆ ಹೆಚ್ಚು ಮಾರಾಟವಾದ  ಐಫೋನ್  ಇದು ಎನ್ನಲಾಗಿದೆ. ಫೋನಿನ ಈ ಸೀರೀಸ್ ಕರ್ವ್ದ್ ಅಡ್ಜ್ ನೊಂದಿಗೆ  ಬರುತ್ತಿತ್ತು. ಫೋನ್ 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ಪ್ಲೇಯೊಂದಿಗೆ ಬರುತ್ತಿದೆ. ಇದು A13 ಬಯೋನಿಕ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 

 ಕೇವಲ 12,999 ರೂಗೆ ಖರೀದಿಸಿ iPhone 11 :
Apple iPhone 11 ಅನ್ನು ಕಂಪನಿಯು ಕಳೆದ ವರ್ಷ ಸ್ಥಗಿತಗೊಳಿಸಿತ್ತು. ಏಕೆಂದರೆ iPhone 11 ಕಾರಣದಿಂದ  Apple iPhone SE 3 5G ಮಾರಾಟದ ಮೇಲೆ ಹೊಡೆತ ಬೀಳುತ್ತಿದೆ ಎನ್ನುವ ಕಾರಣಕ್ಕಾಗಿ ಕಂಪನಿ ಈ ನಿರ್ಧಾರ ಕೈಗೊಂಡಿತ್ತು. ಇಲ್ಲಿಯವರೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ  ಪ್ರೀಮಿಯಂ ಸ್ಮಾರ್ಟ್‌ಫೋನ್‌ ಸಾಲಿನಲ್ಲಿ  Apple iPhone 11 ಬರುತ್ತದೆ .ಈ   ಪ್ರೀಮಿಯಂ ಸ್ಮಾರ್ಟ್‌ಫೋನ್  ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈಗ ಅದಕ್ಕೆ ಸಮಯ ಸೂಕ್ತವಾಗಿದೆ. ಇದೀಗ  ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಅನ್ನು ಕೇವಲ 12,999 ರೂಗಳಿಗೆ  ಖರೀದಿಸುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : WhatsAppನಲ್ಲಿ ಕಳುಹಿಸಿರುವ ಮೆಸೇಜ್ ಅನ್ನು ಈಗ Edit ಮಾಡಬಹುದು !

iPhone 11 ಆಫರ್ : 
Apple iPhone 11 ಮೇಲೆ  ಫ್ಲಿಪ್‌ಕಾರ್ಟ್‌  2,901 ರೂಪಾಯಿಗಳ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿ ಬಳಿಕ ಈ ಫೋನ್‌ನ ಬೆಲೆ 40,999 ರೂ. ಆಗುತ್ತದೆ. ಇನ್ನು ಬ್ಯಾಂಕ್ ಆಫ್ ಬರೋಡಾ ಮತ್ತು IDFC ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 1,000 ರೂಪಾಯಿಗಳ ತ್ವರಿತ ರಿಯಾಯಿತಿ ನೀಡುತ್ತಿದೆ. ಅಂದರೆ ಈಗ ಈ ಫೋನಿನ ಬೆಲೆ 39,999 ರೂಪಾಯಿ ಆದ ಹಾಗಾಯಿತು. ಇಷ್ಟು ಮಾತ್ರವಲ್ಲದೆ ಈ ಫೋನ್ ಖರೀದಿ ಮೇಲೆ  27 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ಕೂಡಾ ಇದೆ. 

ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ ಅನ್ನು 27,000 ರೂ. ಗಳ;ಇಗೆ ಎಕ್ಸ್‌ಚೇಂಜ್ ಮಾಡಿಕೊಂಡ ಮೇಲೆ, ನೀವು ಖರೀದಿಸುವ Apple iPhone 11 ಫೋನ್‌ನ ಬೆಲೆ 12,999 ರೂಪಾಯಿಗೆ ಇಳಿಯುತ್ತದೆ. 

ಇದನ್ನೂ ಓದಿ : IPL ಪ್ರಿಯರಿಗಾಗಿ ಅಗ್ಗದ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News