ಮಾರುತಿ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್- ಮಾರ್ಚ್ 31ರವರೆಗೆ ಮಾತ್ರ ಈ ಸುವರ್ಣಾವಕಾಶ

ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ನಿಮಗಾಗಿ ಕೆಲವು ಆಕರ್ಷಕ ಕೊಡುಗೆಗಳನ್ನು ತಂದಿದೆ. ಈ ಬಂಪರ್ ಕೊಡುಗೆಗಳ ಪ್ರಯೋಜನವನ್ನು ಪಡೆಯುವ ಮೂಲಕ  64000 ರೂ.ವರೆಗೆ ರಿಯಾಯಿತಿ ದರದಲ್ಲಿ ಕಾರು ಖರೀದಿಸಬಹುದಾಗಿದೆ. 

Written by - Yashaswini V | Last Updated : Mar 10, 2023, 11:47 AM IST
  • ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರುಗಳ ಮೇಲೆ ಬಂಪರ್ ಕೊಡುಗೆಗಳನ್ನು ನೀಡುತ್ತಿದೆ.
  • ಮಾರುತಿ ಕಂಪನಿಯ ವ್ಯಾಗನ್ಆರ್, ಸ್ವಿಫ್ಟ್, ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲೆರಿಯೊ, ಆಲ್ಟೊ 800 ಮತ್ತು ಡಿಜೈರ್‌ಗಳ ಮೇಲೆ ಈ ಕೊಡುಗೆಗಳು ಲಭ್ಯವಾಗಲಿವೆ
  • ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ವ್ಯಾಗನ್‌ಆರ್‌ ಕಾರಿನ ಮೇಲೆ ಮಾರುತಿ ಸುಜುಕಿ ಕಂಪನಿಯು ಅತ್ಯಧಿಕ ಕೊಡುಗೆಯನ್ನು ನೀಡುತ್ತಿದೆ.
ಮಾರುತಿ ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್- ಮಾರ್ಚ್ 31ರವರೆಗೆ ಮಾತ್ರ ಈ ಸುವರ್ಣಾವಕಾಶ  title=
Car Discount Offers

ಬೆಂಗಳೂರು: ಹೊಸ ಕಾರ್ ಖರೀದಿಸಲು ಯೋಚಿಸುತ್ತಿರುವವರಿಗೆ ಜನಪ್ರಿಯ ಕಾರ್ ತಯಾರಾಕ ಕಂಪನಿ ಮಾರುತಿ ಸುಜುಕಿ ಭರ್ಜರಿ ಕೊಡುಗೆ ನೀಡುತ್ತಿದೆ. ಆರ್ಥಿಕ ವರ್ಷದ ಕೊನೆಯ ತಿಂಗಳಿನಲ್ಲಿ ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರುಗಳಾದ ವ್ಯಾಗನ್ಆರ್, ಸ್ವಿಫ್ಟ್, ಆಲ್ಟೊ ಕೆ 10, ಎಸ್-ಪ್ರೆಸ್ಸೊ, ಸೆಲೆರಿಯೊ, ಆಲ್ಟೊ 800 ಮತ್ತು ಡಿಜೈರ್‌ಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಈ ಕಾರುಗಳನ್ನು 64,000 ರೂ.ಗಳ ಕೊಡುಗೆಯೊಂದಿಗೆ ನಿಮ್ಮದಾಗಿಸಬಹುದಾಗಿದೆ. ಆದರೆ, ನೆನಪಿಡಿ, ಈ ಕೊಡುಗೆ 2023ರ ಮಾರ್ಚ್ 31ರವರೆಗೆ ಮಾತ್ರ ಲಭ್ಯವಿರಲಿದೆ. 

ಮಾರುತಿಯ ಯಾವ ಕಾರಿನ ಮೇಲೆ ಎಷ್ಟು ಕೊಡುಗೆ ಲಭ್ಯವಾಗಲಿದೆ? 
* ಮಾರುತಿ ವ್ಯಾಗನ್ಆರ್ (Maruti WagonR) ಕಾರಿನ ಮೇಲೆ 64,000ರೂ. 
* ಮಾರುತಿ ಸ್ವಿಫ್ಟ್ (Maruti Swift) ಕಾರಿನ ಮೇಲೆ 54,000 ರೂ.
* ಮಾರುತಿ ಆಲ್ಟೊ ಕೆ10 (Maruti Alto K10)ಕಾರು ಖರೀದಿಯಲ್ಲಿ 49,000 ರೂ.
* ಮಾರುತಿ ಎಸ್-ಪ್ರೆಸ್ಸೊ (Maruti S-Presso) ಖರೀದಿಯಲ್ಲಿ 49,000 ರೂ.
* ಮಾರುತಿ ಸೆಲೆರಿಯೊ (Maruti Celerio) ಕಾರು ಖರೀದಿಯಲ್ಲಿ 44,000ರೂ.
* ಮಾರುತಿ ಆಲ್ಟೊ 800 (Maruti Alto 800) ಕಾರು ಖರೀದಿ ಮೇಲೆ 38,000ರೂ.
* ಮಾರುತಿ ಡಿಜೈರ್ (Maruti Dzire) ಖರೀದಿಯಲ್ಲಿ 10,000ರೂ.ಗಳ ಕೊಡುಗೆ ಲಭ್ಯವಾಗಲಿದೆ.

ಇದನ್ನೂ ಓದಿ- ಕೇವಲ 2700 ರೂ.ಗಳಲ್ಲಿ ನಿಮ್ಮ ಸಾಮಾನ್ಯ ಕಾರ್ ಸೀಟ್ ಅನ್ನು ವೆಂಟಿಲೇಟೆಡ್ ಸೀಟ್ ಆಗಿ ಬದಲಾಯಿಸಿ

ವ್ಯಾಗನ್‌ಆರ್‌ನಲ್ಲಿ ಲಭ್ಯವಿದೆ ಅತ್ಯಧಿಕ ಕೊಡುಗೆ:
ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ವ್ಯಾಗನ್‌ಆರ್‌ ಕಾರಿನ ಮೇಲೆ ಮಾರುತಿ ಸುಜುಕಿ ಕಂಪನಿಯು ಅತ್ಯಧಿಕ ಕೊಡುಗೆಯನ್ನು ನೀಡುತ್ತಿದೆ. ಕಂಪನಿಯು ಈ ಟಾಲ್ ಬಾಯ್ ಸ್ಟೈಲ್ ಹ್ಯಾಚ್‌ಬ್ಯಾಕ್  ಖರೀದಿ ಮೇಲೆ 64,000 ರೂ.ವರೆಗೆ ರಿಯಾಯಿತಿ ನೀಡುತ್ತಿದೆ. ವಿನಿಮಯ ಕೊಡುಗೆಯೊಂದಿಗೆ, ಈ ಕಾರಿನ ಮೇಲೆ 15,000ರೂ, ಹೆಚ್ಚುವರಿ ಕೊಡುಗೆ ಲಭ್ಯವಾಗಲಿದೆ. ಇದಲ್ಲದೆ, ಕಾರ್ಪೋರೇಟ್ ರಿಯಾಯಿತಿ ಸಹ ಸಿಗಲಿದೆ. 

ಇದನ್ನೂ ಓದಿ- ಸಿಲಿಂಡರ್ ಬ್ಲಾಸ್ಟ್ ನಂತಹ ದುರ್ಘಟನೆ ತಪ್ಪಿಸಲು ಇಂದೇ ಮನೆಗೆ ತನ್ನಿ ಎಲ್ಪಿಜಿ ಗ್ಯಾಸ್ ಡಿಟೆಕ್ಟರ್

ಮಾರುತಿ ಕಂಪನಿಯ ಇತರ ಕಾರುಗಳ ಖರೀದಿಯಲ್ಲಿ ಕೂಡ ನಗದು ರಿಯಾಯಿತಿ ಜೊತೆಗೆ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗುತ್ತದೆ. ಆದರೆ, ಗಮನಿಸಿ ಸ್ಥಳ ಮತ್ತು ಡೀಲರ್‌ಶಿಪ್‌ಗೆ ಅನುಗುಣವಾಗಿ ಈ ಕೊಡುಗೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News