Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ?

ಮಾರುತಿ ತನ್ನ ಕಾರುಗಳ ಬೆಲೆಯನ್ನು ಕಡಿತಗೊಳಿಸಿದೆ. ಇಂದಿನಿಂದ ಈ ಕಾರುಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ.   

Written by - Ranjitha R K | Last Updated : Sep 2, 2024, 03:19 PM IST
  • ಸೆಪ್ಟೆಂಬರ್ 2 ರಿಂದ ಈ ಕಾರುಗಳ ಬೆಲೆ ಕಡಿತ
  • ಮಾಸಿಕ ಮಾರಾಟದ ವರದಿಯ ನಂತರ ಅಗ್ಗವಾದ ಕಾರುಗಳು
  • ಮಾರುತಿ ಸುಜುಕಿಯ ಸಣ್ಣ ಕಾರುಗಳ ಮಾರಾಟದಲ್ಲಿ ಕುಸಿತ
Maruti ಈ ಕಾರುಗಳ ಮೇಲೆ ಬಂಪರ್ ರಿಯಾಯಿತಿ!ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ? title=

Maruti Suzuki Price Cut : ಭಾರತದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ, ಸೆಪ್ಟೆಂಬರ್ 2 ರಿಂದ ಆಲ್ಟೊ ಕೆ 10 ಮತ್ತು ಎಸ್-ಪ್ರೆಸ್ಸೊ ಕೆಲವು ರೂಪಾಂತರಗಳ ಬೆಲೆ ಕಡಿತವನ್ನು ಘೋಷಿಸಿದೆ. "ಎಸ್-ಪ್ರೆಸ್ಸೋ ಎಲ್‌ಎಕ್ಸ್‌ಐ ಪೆಟ್ರೋಲ್ ಬೆಲೆ 2,000 ಮತ್ತು ಆಲ್ಟೊ ಕೆ 10 ವಿಎಕ್ಸ್‌ಐ ಪೆಟ್ರೋಲ್ ಬೆಲೆ 6,500 ರೂಪಾಯಿ ಕಡಿಮೆಯಾಗಿದೆ"ಎಂದು ಮಾರುತಿ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ. 

ಮಾಸಿಕ ಮಾರಾಟದ ವರದಿಯ ನಂತರ ಅಗ್ಗವಾದ ಕಾರುಗಳು  :  
ಮಾರುತಿ ಸುಜುಕಿಯ ವೆಬ್‌ಸೈಟ್ ಪ್ರಕಾರ,ದೆಹಲಿಯಲ್ಲಿ ಆಲ್ಟೊ ಕೆ10 ಎಕ್ಸ್ ಶೋರೂಂ ಬೆಲೆ 3,99,000 ರೂಪಾಯಿಯಿಂದ ಆರಂಭವಾಗುತ್ತದೆ.ಎಸ್-ಪ್ರೆಸ್ಸೊ ಬೆಲೆಗಳು ರಾಜಧಾನಿಯಲ್ಲಿ 4,26,500 (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತವೆ.ಕಂಪನಿಯು ಮಾಸಿಕ ಮಾರಾಟದ ಡೇಟಾವನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಈ ಪ್ರಕಟಣೆ ಹೊರ ಬಿದ್ದಿದೆ.ಅದರ ಪ್ರಕಾರ ಕಂಪನಿಯು ಆಗಸ್ಟ್ 2023ಕ್ಕೆ ಹೋಲಿಸಿದರೆ ಕಾರು ಮಾರಾಟದಲ್ಲಿ 4% ಕಡಿಮೆಯಾಗಿದೆ. ಆದರೆ ಒಟ್ಟು ಮಾರಾಟವು ಮಾಸಿಕ ಆಧಾರದ ಮೇಲೆ 1.82 ಲಕ್ಷ ಯುನಿಟ್‌ಗಳಲ್ಲಿ 1% ಹೆಚ್ಚಾಗಿದೆ.ಕಂಪನಿಯ ಮಾಹಿತಿಯ ಪ್ರಕಾರ,ಎಸ್-ಪ್ರೆಸ್ಸೊ ಮತ್ತು ಆಲ್ಟೊಗಳ ಒಟ್ಟು ಮಾರಾಟವು ಆಗಸ್ಟ್ 2023 ರಲ್ಲಿ 12,209 ಯುನಿಟ್‌ಗಳಷ್ಟಿತ್ತು.ಆಗಸ್ಟ್ 2024ರಲ್ಲಿ 10,648 ಯುನಿಟ್‌ಗಳಿಗೆ ಇಳಿಕೆಯಾಗಿದೆ.

ಇದನ್ನೂ ಓದಿ : BSNL Best Recharge Plan: ಗಣೇಶ ಹಬ್ಬದ ವೇಳೆ ಬಿ‌ಎಸ್‌ಎನ್‌ಎಲ್ ಅಗ್ಗದ ಯೋಜನೆ ಬಿಡುಗಡೆ, ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ಪ್ರಯೋಜನ 

ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾರುತಿ ಸುಜುಕಿಯ 'ಮಿನಿ'ಉಪ-ವರ್ಗದ ಅಡಿಯಲ್ಲಿ ಬರುತ್ತವೆಯಾದರೂ,ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನ್ಆರ್ ಅನ್ನು ಒಳಗೊಂಡಿರುವ ಕಂಪನಿಯ ಕಾಂಪ್ಯಾಕ್ಟ್ ವಿಭಾಗವು ಈ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂಬುದು ಗಮನಿಸಬೇಕಾದ ಸಂಗತಿ. 

ಮಾರುತಿ ಸುಜುಕಿಯ ಯುಟಿಲಿಟಿ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ 7% ರಷ್ಟು ಬೆಳೆದರೆ,ಕಾಂಪ್ಯಾಕ್ಟ್ ವಿಭಾಗದಲ್ಲಿ ಮಾರಾಟವು ವರ್ಷದಿಂದ ವರ್ಷಕ್ಕೆ 20% ಮತ್ತು ತಿಂಗಳಿಗೆ 1% ರಷ್ಟು ಕಡಿಮೆಯಾಗಿದೆ.ಕಾಂಪ್ಯಾಕ್ಟ್ ವಿಭಾಗದಲ್ಲಿ,ಕಾರು ತಯಾರಕರು ಆಗಸ್ಟ್ 2024ರಲ್ಲಿ 58,051 ವಾಹನಗಳನ್ನು ಮಾರಾಟ ಮಾಡಿದ್ದಾರೆ.  ಆದರೆ ಆಗಸ್ಟ್ 2023 ರಲ್ಲಿ 72,451 ವಾಹನಗಳನ್ನು ಮಾರಾಟ ಮಾಡಲಾಗಿತ್ತು.  

ಇದನ್ನೂ ಓದಿ: ರೈಲು ಟಿಕೆಟ್ ಬುಕ್ ಮಾಡಲು ಒಂದು ಫೋನ್ ಕಾಲ್ ಸಾಕು !ರೈಲ್ವೆ ಆರಂಭಿಸಿದೆ ಹೊಸ ಸೇವೆ ! ಅತ್ಯಂತ ಫಾಸ್ಟ್ ಆಗಿ ಆಗುವುದು ಟಿಕೆಟ್ ಬುಕ್

ಮಾರುತಿ ಸುಜುಕಿಯ ಸಣ್ಣ ಕಾರುಗಳ ಮಾರಾಟದಲ್ಲಿನ ಕುಸಿತವು 2023ರ ಆರಂಭದಿಂದಲೂ ಮುಂದುವರೆದಿದೆ.ಕಂಪನಿಯ ಇತ್ತೀಚಿನ ಮಾಹಿತಿಯ ಪ್ರಕಾರ, ಅದರ ಮಿನಿ ಮತ್ತು ಕಾಂಪ್ಯಾಕ್ಟ್ ವಿಭಾಗದ ವಾಹನಗಳ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 13% ಕ್ಕಿಂತ ಹೆಚ್ಚು ಕಡಿಮೆಯಾಗಿದೆ.ಇದರ ಹೊರತಾಗಿ,ಯುಟಿಲಿಟಿ ವೆಹಿಕಲ್ ವಿಭಾಗದ ಮಾರಾಟವು 14% ರಷ್ಟು ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News