ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

BSNL Recharge Plan: ಜುಲೈ ಮೊದಲ ವಾರದಲ್ಲಿ ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ಪ್ಲಾನ್​ಗಳಲ್ಲಿ ಬೆಲೆಗಳನ್ನು ಹೆಚ್ಚಿಸಿದ ಬಳಿಕ ಜನರು ಸಾರ್ವಜನಿಕ ಟೆಲಿಕಾಂ ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಲು ಆರಂಭಿಸಿದ್ದಾರೆ. 

Written by - Yashaswini V | Last Updated : Aug 20, 2024, 08:18 AM IST
  • ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್​ಗಳನ್ನು ಒದಗಿಸುತ್ತಿರುವ ಬಿಎಸ್​ಎನ್​ಎಲ್​
  • ಖಾಸಗಿ ಕಂಪನಿಗಳನ್ನು ಬಿಟ್ಟು ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡುತ್ತಿರುವ ಜನ
  • ಬಿ‌ಎಸ್‌ಎನ್‌ಎಲ್​ನ 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಬೇಡಿಕೆ
ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ನತ್ತ ಮುಖ ಮಾಡಿದ ಗ್ರಾಹಕರು: 229 ರೂ. ರಿಚಾರ್ಜ್ ಪ್ಲಾನ್​ಗೆ ಡಿಮ್ಯಾಂಡಪ್ಪೋ  ಡಿಮ್ಯಾಂಡ್  title=

BSNL Rs 299 Recharge Plan: ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ (Mukesh Ambanis Reliance Jio) ಸೇರಿದಂತೆ, ಭಾರತದ ಪ್ರಸಿದ್ದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್​ಟೆಲ್ (Airtel)​​, ವೋಡಾಫೋನ್-ಐಡಿಯಾ (Vodafone-Idea) ಕಂಪನಿಗಳು ಕಳೆದ ತಿಂಗಳು ಮೊದಲ ವಾರದಲ್ಲಿ ರಿಚಾರ್ಜ್ ಪ್ಲಾನ್​ಗಳ ಬೆಲೆಗಳನ್ನು ಹೆಚ್ಚಿಸಿವೆ. ಇದರಿಂದ ಮೊದಲೇ ಹಣದುಬ್ಬರದಿಂದಾಗಿ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿರುವ ಜನರು ಇದೀಗ ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್​ನತ್ತ (BSNL) ಮುಖಮಾಡುತ್ತಿದ್ದು, ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹಲವು ವರದಿಗಳು ಬಂದಿವೆ. ಇದರೊಂದಿಗೆ ಬಿ‌ಎಸ್‌ಎನ್‌ಎಲ್​ನ ಒಂದು ರಿಚಾರ್ಜ್ ಪ್ಲಾನ್​ಗೆ ಭಾರೀ ಡಿಮ್ಯಾಂಡ್ ಇದೆ. 

ಇದನ್ನೂ ಓದಿ- ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ! 

ಹೌದು, ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್​ಗಳನ್ನು (Recharge Plan) ಕೂಡ ಒದಗಿಸುತ್ತಿದೆ.  ಇವುಗಳಲ್ಲಿ ಬಿ‌ಎಸ್​ಎನ್​ಎಲ್​ನ  229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿದೆ. 

ಇದನ್ನೂ ಓದಿ- ನಿಮ್ಮ ಏರಿಯಾದಲ್ಲಿ ಯಾವ ದಿನದಿಂದ ಆರಂಭವಾಗಲಿದೆ BSNL 4G? ಇಲ್ಲಿದೆ ಕಂಪನಿ ನೀಡಿದ ಮಾಹಿತಿ

ಬಿ‌ಎಸ್‌ಎನ್‌ಎಲ್ 229ರೂ. ರಿಚಾರ್ಜ್ ಪ್ಲಾನ್​ನಲ್ಲಿ ಸಿಗುವ ಪ್ರಯೋಜನಗಳು (BSNL Rs.229 Recharge Plan Benefits): 
ಬಿ‌ಎಸ್‌ಎನ್‌ಎಲ್ ನೀಡುತ್ತಿರುವ ಜನಪ್ರಿಯ 229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್ ಪ್ಲಾನ್​ (BSNL Rs.229 Recharge Plan) 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರು ಪೂರ್ಣ ಒಂದು ತಿಂಗಳವರೆಗೆ ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆಯನ್ನು ಆನಂದಿಸಬಹುದಾಗಿದೆ. ಇದರೊಂದಿಗೆ ನಿತ್ಯ 2GB ಡೇಟಾ ಎಂದರೆ ತಿಂಗಳವರೆಗೆ ಒಟ್ಟು 60ಜಿಬಿ ಡೇಟಾ ಪ್ರಯೋಜನವೂ ಇದರಲ್ಲಿ ಲಭ್ಯವಿದ್ದು, ಕಾಂಪ್ಲಿಮೆಂಟರಿಯಾಗಿ ನಿತ್ಯ 100 ಉಚಿತ ಎಸ್​ಎಮ್​ಎಸ್​  ಅನ್ನು ಕೂಡ ಆನಂದಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News