ಎಲ್ಲಾದರು ಹೊರಡುವಾಗ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅರ್ಧಕ್ಕೆ ನಿಲ್ಲುತ್ತೀರಾ? ಈ ಶಕುನ-ಅಪಶಕುನಗಳ ಅರ್ಥವೇನು ಗೊತ್ತಾ?

Cat Crossing Sign: ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ. ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಅಂದಹಾಗೆ, ಈ ರೀತಿಯಾಗಿ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ. ಅದರ ಹಿಂದೆ ವೈಜ್ಞಾನಿಕ ಕಾರಣವಿದೆ.  

Written by - Bhavishya Shetty | Last Updated : Sep 10, 2024, 06:29 PM IST
    • ಬೆಕ್ಕು ಅಡ್ಡಬಂದರೆ ಕೆಲವರು ಅದನ್ನು ಅಪಶಕುನ ಎಂದು ಹೇಳುತ್ತಾರೆ.
    • ಬೆಕ್ಕು ಅಡ್ಡ ಬಂದರೆ ಆ ದಾರಿಯಲ್ಲಿ ಹೋಗಬಾರದು, ಹೋದರೆ ಅಹಿತಕರ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ.
    • ಇನ್ನು ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ
ಎಲ್ಲಾದರು ಹೊರಡುವಾಗ ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅರ್ಧಕ್ಕೆ ನಿಲ್ಲುತ್ತೀರಾ? ಈ ಶಕುನ-ಅಪಶಕುನಗಳ ಅರ್ಥವೇನು ಗೊತ್ತಾ? title=
File Photo

Cat Crossing Sign: ಎಲ್ಲಾದರು ಹೊರಡುವಾಗ ಅಥವಾ ಹೊರಟು ನಿಂತಾಗ ಬೆಕ್ಕು ಅಡ್ಡಬಂದರೆ ಕೆಲವರು ಅದನ್ನು ಅಪಶಕುನ ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ಕೆಲವರು ಸ್ವಲ್ಪ ಸಮಯದವರೆಗೆ ನಿಂತರೆ, ಇನ್ನೂ ಕೆಲವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಬೆಕ್ಕು ಅಡ್ಡ ಬಂದರೆ ಆ ದಾರಿಯಲ್ಲಿ ಹೋಗಬಾರದು, ಹೋದರೆ ಅಹಿತಕರ ಘಟನೆಗಳು ನಡೆಯುತ್ತವೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ವಿರಾಟ್‌ ಪುತ್ರ! ಕೊನೆಗೂ ಮಗನ ಫೋಟೋ ರಿವೀಲ್‌ ಮಾಡಿದ ಅನುಷ್ಕಾ... ಫೋಟೋ ನೋಡಿ

ಇನ್ನು ಬೆಕ್ಕಿನ ಬಣ್ಣದ ಬಗ್ಗೆಯೂ ಕೆಲ ನಂಬಿಕೆಗಳು ಇವೆ. ಕಪ್ಪು ಬೆಕ್ಕು ಮತ್ತು ಬಿಳಿ ಬೆಕ್ಕು ಮಾರ್ಗವನ್ನು ದಾಟುವುದಕ್ಕೆ ವಿಭಿನ್ನ ಅರ್ಥಗಳನ್ನು ನೀಡಲಾಗಿದೆ. ಅಂದಹಾಗೆ, ಈ ರೀತಿಯಾಗಿ ಬೆಕ್ಕು ಮಾರ್ಗವನ್ನು ದಾಟಿದಾಗ ನಿಲ್ಲುವುದನ್ನು ಅನೇಕರು ಮೂಢನಂಬಿಕೆ ಅಥವಾ ಭ್ರಮೆ ಎಂದು ಪರಿಗಣಿಸುತ್ತಾರೆ. ಅದರ ಹಿಂದೆ ವೈಜ್ಞಾನಿಕ ಕಾರಣವಿದೆ.

ಪ್ರಾಚೀನ ನಂಬಿಕೆಗಳ ಪ್ರಕಾರ, ಬೆಕ್ಕುಗಳು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಇದನ್ನು ಮನೆಯಲ್ಲಿ ಸಾಕುವುದು ಶುಭವಲ್ಲ. ಬೆಕ್ಕು ಎಡದಿಂದ ಬಲಕ್ಕೆ ಚಲಿಸಿದರೆ ಅದು ಅಶುಭ ಮತ್ತು ಬಲದಿಂದ ಎಡಕ್ಕೆ ಚಲಿಸಿದರೆ ಅದು ಶುಭ ಎಂದು ಜನರಲ್ಲಿ ಅನೇಕ ತಪ್ಪು ಕಲ್ಪನೆಗಳು ಹರಡಿವೆ. ಅಷ್ಟೇ ಅಲ್ಲದೆ, ಬೆಕ್ಕಿನ ಅಳು ಸಹ ಅಶುಭವೆಂದು ಪರಿಗಣಿಸಲಾಗಿದೆ. ಇದಲ್ಲದೇ ಮನೆಯಲ್ಲಿ ಇಟ್ಟಿರುವ ಆಹಾರವನ್ನು ಬೆಕ್ಕು ಹಾಳು ಮಾಡಿದರೆ ಅದನ್ನು ಬಿಸಾಡುತ್ತಾರೆ. ಇದೇ ರೀತಿಯ ಹಲವು ತಪ್ಪು ಕಲ್ಪನೆಗಳು ಜನರಲ್ಲಿ ಇವೆ.

-ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಬೆಕ್ಕುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೆ, ಬೆಕ್ಕು ರಸ್ತೆ ದಾಟಿದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಆದರೆ ಇದರ ಹಿಂದಿರುವ ಸತ್ಯವೇನು ಗೊತ್ತಾ?

ಹಿಂದಿನ ಕಾಲದಲ್ಲಿ ಕರೆಂಟು ಇರುತ್ತಿರಲಿಲ್ಲ. ಆ ಸಮಯದಲ್ಲಿ ದಾರಿಯಲ್ಲಿ ಯಾವುದಾದರೂ ಸದ್ದು ಬಂದಾಗ ಜನರು ನಿಲ್ಲುತ್ತಿದ್ದರು. ಇದರಿಂದ ಕಾಡುಪ್ರಾಣಿಗಳು ರಸ್ತೆ ದಾಟಿದರೆ ಆರಾಮವಾಗಿ ರಸ್ತೆ ದಾಟಬಹುದಿತ್ತು. ಅವುಗಳು ನಮಗೆ ಹಾನಿ ಮಾಡಬಾರದು ಮತ್ತು ನಮ್ಮಿಂದ ಅವುಗಳಿಗೆ ಹಾನಿಯಾಗಬಾರದು ಎಂಬ ಉದ್ದೇಶ ಅಲ್ಲಿತ್ತು. ಕ್ರಮೇಣ ಈ ಸಂಪ್ರದಾಯವು ಕಪ್ಪು ಬೆಕ್ಕಿಗೆ ಅಪಶಕುನ, ಮೂಢನಂಬಿಕೆಗೆ ಸಂಪರ್ಕ ಪಡೆದುಕೊಂಡಿತು.

ಇದನ್ನೂ ಓದಿ: "ಉಪೇಂದ್ರ ಕಾರಣಕ್ಕೇ ನಾನು ಇನ್ನೂ ಮದ್ವೆಯಾಗಿಲ್ಲ"- ಉಪ್ಪಿ ಪತ್ನಿ ಪ್ರಿಯಾಂಕ ಮುಂದೆಯೇ ಸತ್ಯ ಬಿಚ್ಚಿಟ್ಟ ಆ್ಯಂಕರ್​ ಅನುಪಮಾ ಗೌಡ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News