ಜೀವನೋಪಾಯಕ್ಕೆ ದುಡ್ಡಿಲ್ಲದೆ ಟ್ಯಾಕ್ಸಿ ಓಡಿಸ್ತಿದ್ದಾನೆ ಈ ಸ್ಟಾರ್‌ ಸ್ಪಿನ್‌ ಬೌಲರ್!‌ ಸಚಿನ್‌, ಸೆಹ್ವಾಗ್‌ʼರಂತ ದಿಗ್ಗಜರಿಗೇ ಭಯಹುಟ್ಟಿಸಿದ್ದ ಕ್ರಿಕೆಟಿಗನೀತ

Arshad Khan: ಅರ್ಷದ್ ಖಾನ್ 1997 ರಲ್ಲಿ ಪಾಕಿಸ್ತಾನಿ ತಂಡಕ್ಕಾಗಿ ತಮ್ಮ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. ಮಾಧ್ಯಮ ವರದಿಗಳ ಪ್ರಕಾರ, ಅರ್ಷದ್ ಜೀವನೋಪಾಯಕ್ಕಾಗಿ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರು ಪಾಕಿಸ್ತಾನಿ ತಂಡದ ಉದಯೋನ್ಮುಖ ಸ್ಪಿನ್ ಬೌಲರ್ ಆಗಿದ್ದರು.  

Written by - Bhavishya Shetty | Last Updated : Sep 12, 2024, 01:17 PM IST
    • ದಿಗ್ಗಜರಿಗೂ ಭಯ ಹುಟ್ಟಿಸುತ್ತಿದ್ದ ಮಾಜಿ ಪಾಕಿಸ್ತಾನಿ ಸ್ಪಿನ್ನರ್ ಅರ್ಷದ್ ಖಾನ್
    • ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದಾರೆ.
    • ಅಷ್ಟೇ ಅಲ್ಲದೆ, ಜೀವನೋಪಾಯಕ್ಕಾಗಿ ಅರ್ಷದ್ ಟ್ಯಾಕ್ಸಿ ಓಡಿಸಿಸುತ್ತಿದ್ದರು.
ಜೀವನೋಪಾಯಕ್ಕೆ ದುಡ್ಡಿಲ್ಲದೆ ಟ್ಯಾಕ್ಸಿ ಓಡಿಸ್ತಿದ್ದಾನೆ ಈ ಸ್ಟಾರ್‌ ಸ್ಪಿನ್‌ ಬೌಲರ್!‌ ಸಚಿನ್‌, ಸೆಹ್ವಾಗ್‌ʼರಂತ ದಿಗ್ಗಜರಿಗೇ ಭಯಹುಟ್ಟಿಸಿದ್ದ ಕ್ರಿಕೆಟಿಗನೀತ title=
File Photo

Arshad Khan: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಸ್ಫೋಟಕ ಮಾಜಿ ಬ್ಯಾಟ್ಸ್‌ʼಮನ್ ವಿರೇಂದ್ರ ಸೆಹ್ವಾಗ್ʼರಂತಹ ದಿಗ್ಗಜರಿಗೂ ಭಯ ಹುಟ್ಟಿಸುತ್ತಿದ್ದ ಮಾಜಿ ಪಾಕಿಸ್ತಾನಿ ಸ್ಪಿನ್ನರ್ ಅರ್ಷದ್ ಖಾನ್ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಜೀವನೋಪಾಯಕ್ಕಾಗಿ ಅರ್ಷದ್  ಟ್ಯಾಕ್ಸಿ ಓಡಿಸಿಸುತ್ತಿದ್ದರು.

ಇದನ್ನೂ ಓದಿ: ಅಭ್ಯರ್ಥಿಗಳ ಬೇಡಿಕೆಗೆ ಅಸ್ತು ಎಂದ ಸರ್ಕಾರ :ಪಿಎಸ್ಐ ಪರೀಕ್ಷೆ ಮುಂದೂಡಿಕೆ, ಮುಂದಿನ ದಿನಾಂಕ ಪ್ರಕಟ

ಅರ್ಷದ್ ಖಾನ್ 1997 ರಲ್ಲಿ ಪಾಕಿಸ್ತಾನಿ ತಂಡಕ್ಕಾಗಿ ತಮ್ಮ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು. ಮಾಧ್ಯಮ ವರದಿಗಳ ಪ್ರಕಾರ, ಅರ್ಷದ್ ಜೀವನೋಪಾಯಕ್ಕಾಗಿ ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರು ಪಾಕಿಸ್ತಾನಿ ತಂಡದ ಉದಯೋನ್ಮುಖ ಸ್ಪಿನ್ ಬೌಲರ್ ಆಗಿದ್ದರು.

ಅರ್ಷದ್ ಖಾನ್ ಯಾವಾಗಲೂ ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರಂತಹ ಆಟಗಾರರ ವಿಕೆಟ್‌ʼಗಳನ್ನು ಸಹ ಪಡೆದಿದ್ದಾರೆ. ಅರ್ಷದ್ ಅವರ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡುವುದಾದರೆ 9 ಟೆಸ್ಟ್‌ʼಗಳಲ್ಲಿ 32 ಮತ್ತು 58 ಏಕದಿನ ಪಂದ್ಯಗಳಲ್ಲಿ 56 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶೇಷವೆಂದರೆ ಅರ್ಷದ್ ತಮ್ಮ ಕೊನೆಯ ಟೆಸ್ಟ್ ಮತ್ತು ಏಕದಿನ ಪಂದ್ಯವನ್ನು ಭಾರತದ ವಿರುದ್ಧವೇ ಆಡಿದ್ದರು.

ಇದನ್ನೂ ಓದಿ: ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇ

ಇನ್ನು ಇದೀಗ ಇವರ ಕಷ್ಟವನ್ನು ನೋಡಿ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಮಹಿಳಾ ಕ್ರಿಕೆಟ್‌ ತಂಡದ ತರಬೇತುದಾರರನ್ನಾಗಿ ಮಾಡಿದೆ ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News