BSNL: ಸೈಲೆಂಟ್ ಆಗಿ 3 ಅತ್ಯಂತ ಆಗ್ಗದ ಪ್ರೀಪೆಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಈ ಟೆಲಿಕಾಂ ಕಂಪನಿ

BSNL Launches Prepaid Plans: ಕೆಲ ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ಎರಡು ಹೋದ ಪ್ರೀಪೆಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿತ್ತು. ಅವುಗಳ ಬೆಲೆ ರೂ.239 ಮತ್ತು ರೂ.228 ಆಗಿದೆ. ಆದರೆ ಇದೀಗ ಬಿಎಸ್ಎನ್ಎಲ್ ಕದ್ದುಮುಚ್ಚಿ ಮೂರು ಹೊಸ ಅಗ್ಗದ ಪ್ಲಾನ್ ಗಳನ್ನು ಬಿಡುಗಡೆ ಮಾಡಿ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ   

Written by - Nitin Tabib | Last Updated : Jul 3, 2022, 02:10 PM IST
  • ಸೈಲೆಂಟ್ ಆಗಿ ಮೂರು ಅಗ್ಗದ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದ ಬಿಎಸ್ಎನ್ಎಲ್
  • ಇದೀಗ ರೂ.99, ರೂ.118 ಹಾಗೂ ರೂ.319 ರಲ್ಲಿ ಮೂರು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ.
  • ಈ ಪ್ಲಾನ್ ಗಳಲ್ಲಿ ನೀವು ಯಾವ ಯಾವ ಲಾಭ ಪಡೆದುಕೊಳ್ಳಬಹುದು ತಿಳಿಯೋಣ
BSNL: ಸೈಲೆಂಟ್ ಆಗಿ 3 ಅತ್ಯಂತ ಆಗ್ಗದ ಪ್ರೀಪೆಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಈ ಟೆಲಿಕಾಂ ಕಂಪನಿ title=
Cheapest Recharge Schemes

BSNL Announces New Prepaid Plans Check Prices and Benefits: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾಗಿರುವ BSNL, ಕಳೆದ ಕೆಲ ದಿನಗಳಿಂದ ತನ್ನ ಗ್ರಾಹಕರಿಗೆ ಹಲವು ಆಸಕ್ತಿದಾಯಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗಷ್ಟೇ BSNL ರೂ 228 (BSNL ರೂ 228 ಪ್ರಿಪೇಯ್ಡ್ ಯೋಜನೆ) ಮತ್ತು ರೂ 239 (BSNL ರೂ 239 ಪ್ರಿಪೇಯ್ಡ್ ಯೋಜನೆ) ಯೋಜನೆಯನ್ನು ಪರಿಚಯಿಸಿತ್ತು. ಈ ಎರಡು ಯೋಜನೆಗಳ ನಂತರ, BSNL ಇದೀಗ ಇನ್ನೂ ಮೂರು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ, ಅದರ ಅವೂ ಕೂಡ ಅಗ್ಗದ ಬೆಲೆಯ ಯೋಜನೆಗಲಾಗಿವೆ ಎಂಬುದು ಇಲ್ಲಿ ಗಮನಾರ್ಹ. ಅವುಗಳಲ್ಲಿ ಒಂದು ಪ್ಲಾನ್‌ನ ಬೆಲೆ 100 ರೂ.ಗಿಂತಟೂ ಕಡಿಮೆ ಇದೆ. ಎರಡನೇ ಪ್ಲಾನ್ ಬೆಲೆ 120 ರೂ.ಗಿಂತ ಕಡಿಮೆ ಮತ್ತು ಮೂರನೇ ಪ್ಲಾನ್  ಪ್ಲಾನ್‌ನ ಬೆಲೆ 400 ರೂ.ಗಿಂತ ಕಡಿಮೆ ಇದೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಮೂರು ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದ ಬಿಎಸ್ಎನ್ಎಲ್
ಇತ್ತೀಚೆಗಷ್ಟೇ ರೂ.228 ಹಾಗೂ ರೂ.239 ರಲ್ಲಿ ಎರಡು ಪ್ರೀಪೆಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದ್ದ ಬಿಎಸ್ಎನ್ಎಲ್, ಇದೀಗ ರೂ.99, ರೂ.118 ಹಾಗೂ ರೂ.319 ರಲ್ಲಿ ಮೂರು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಗಳಲ್ಲಿ ನೀವು ಯಾವ ಯಾವ ಲಾಭ ಪಡೆದುಕೊಳ್ಳಬಹುದು ತಿಳಿಯೋಣ

ಬಿಎಸ್ಎನ್ಎಲ್ ರೂ.99ರ ಯೋಜನೆ
ಕಂಪನಿ ಬಿಡುಗಡೆ ಮಾಡಿರುವ ಮೂರು ಅಗ್ಗದ ಯೋಜನೆಗಳಲ್ಲಿ ರೂ.99ರ ಯೋಜನೆ ಅತ್ಯಂತ ಅಗ್ಗದ ಯೋಜನೆಯಾಗಿದೆ. ಈ ಪ್ಲಾನ್ ನಲ್ಲಿ ನಿಮಗೆ ಯಾವುದೇ ರೀತಿಯ ಡೇಟಾ ಹಾಗೂ ಎಸ್ಎಂಎಸ್ ಕೊಡುಗೆಗಳು ಲಭ್ಯವಿಲ್ಲ. ಆದರೆ, ಯಾವುದೇ ನೆಟ್ವರ್ಕ್ ಗೆ ನೀವು ಅನಿಯಮಿತ ಕರೆಗಳನ್ನು ಮಾಡಬಹುದು. ಈ ಪ್ರೀಪೆಯ್ಡ್ ಪ್ಲಾನ್ ನಲ್ಲಿ ನಿಮಗೆ ಫ್ರೀ PRBT ಸೇವೆಯನ್ನು ಕೂಡ ನೀಡಲಾಗುತ್ತಿದೆ. ಇದರಿಂದ ನೀವು ನಿಮ್ಮ ನೆಚ್ಚಿನ ಕಾಲರ್ ಟ್ಯೂನ್ ಅನ್ನು ಸೆಟ್ ಮಾಡಬಹುದು. ಈ ಪ್ಲಾನ್ ವ್ಯಾಲಿಡಿಟಿ 18 ದಿನಗಳದ್ದಾಗಿದೆ.

ಇದನ್ನೂ ಓದಿ-Business Idea: ಕೇವಲ 25 ಸಾವಿರ ಹೂಡಿಕೆ ಮಾಡಿ 72 ಲಕ್ಷ ಸಂಪಾದಿಸುವ ಪರ್ಫೆಕ್ಟ್ ಪರಿಕಲ್ಪನೆ ಇದು!

ಬಿಎಸ್ಎನ್ಎಲ್ ನ ರೂ.118 ಪ್ಲಾನ್
ರೂ.118ರ ಪ್ಲಾನ್ 20 ದಿನಗಳ ಸಿಂಧುತ್ವವನ್ನು ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ನಿತ್ಯ 0.5 ಜಿಬಿ ಡೇಟಾ, ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ, ವಾಯಿಸ್ ಕಾಲಿಂಗ್ ಹಾಗೂ ಉಚಿತ PRBT ಸೇವೆಯ ಸಂಪೂರ್ಣ ಲಾಭ ಸಿಗಲಿದೆ. ನಿತ್ಯದ ಡೇಟಾ ಲಿಮಿಟ್ ಖಾಲಿಯಾದ ಬಳಿಕ ಇಂಟರ್ನೆಟ್ ವೇಗ 40 ಕೆಬಿಪಿಎಸ್ ಗೆ ಇಳಿಯಲಿದೆ. ಆದರೆ, ಇದರಲ್ಲಿ ನಿಮಗೆ ಎಸ್ಎಂಎಸ್ ಸೌಕರ್ಯವನ್ನು ಒದಗಿಸಲಾಗಿಲ್ಲ.

ಇದನ್ನೂ ಓದಿ-ಈ ನಾಣ್ಯದ ಬೆಲೆ ಬರೋಬ್ಬರಿ 126 ಕೋಟಿ : ಸಿಬಿಐ ತನಿಖೆ ನಡೆಸ್ತಿರೋ ಈ ಕಾಯಿನ್‌ ಸ್ಪೆಷಾಲಿಟಿ ಏನು?

ಬಿಎಸ್ಎನ್ಎಲ್ ರೂ.319ರ ಯೋಜನೆ
ರೂ.319ರ ಯೋಜನೆಯಲ್ಲಿ ಬಳಕೆದಾರರಿಗೆ ಸುಮಾರು 10ಜಿಬಿ ಡೇಟಾ, 300 ಎಸ್ಎಂಎಸ್ ಹಾಗೂ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕಾಲ್ ಲಾಭವನ್ನು ನೀಡಲಾಗುತ್ತಿದೆ. ಈ ಯೋಜನೆಯ ಒಟ್ಟು ಮಾನ್ಯತೆ 65 ದಿನಗಳದ್ದಾಗಿದೆ. ಇದರಲ್ಲಿ ನಿಮಗೆ ಡೇಟಾ, ಎಸ್ಎಂಎಸ್, ಕಾಲಿಂಗ್ ಮೂರೂ ರೀತಿಯ ಲಾಭಗಳನ್ನೂ ನೀಡಲಾಗುತ್ತಿದ್ದು, ಇತರ ಟೆಲಿಕಾಂ ಕಂಪನಿಗಳ ಹೋಲಿಕೆಯಲ್ಲಿ ಇದು ಅಗ್ಗದ ರೀಚಾರ್ಜ್ ಯೋಜನೆಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News