Blockchain Technology - ದತ್ತಾಂಶವನ್ನು ಸುರಕ್ಷಿತವಾಗಿರಿಸಲು ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರಲ್ಲಿ ಎಲ್ಲಾ ಬ್ಲಾಕ್ಗಳು ಒಂದಕ್ಕೊಂದು ಸಂಪರ್ಕ ಹೊದಿರುವ ಕಾರಣ ಅದನ್ನು ಹ್ಯಾಕಿಂಗ್ ಮಾಡುವುದು ಸಹ ಕಷ್ಟ. ಕ್ರಿಪ್ಟೋ (Cryptocurrency) ಅನ್ನು ಬ್ಲಾಕ್ಚೈನ್ನಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ನೀವು ಕೇಳಿರಬಹುದು. ಆದರೆ, ಇದೀಗ ಭಾರತ ಸರ್ಕಾರವು ನಕಲಿ ಬಿಲ್ಲಿಂಗ್ (Fake Billing) ಮತ್ತು ಜಿಎಸ್ಟಿ ಕಳ್ಳತನಗಳನ್ನೂ (Fake GST Claiming) ತಡೆಯಲು ಬ್ಲಾಕ್ಚೈನ್ ತಂತ್ರಜ್ಞಾನವನ್ನು ಬಳಸಸಿದೆ.
ದೊರೆತೆ ಮಾಹಿತಿಗಳ ಪ್ರಕಾರ, ಮೊದಲ ಹಂತದಲ್ಲಿ, ಗೋದಾಮು ಮತ್ತು ಸರಕು ಸಾಗಣೆಯ ಮೇಲ್ವಿಚಾರಣೆಗಾಗಿ ಇದನ್ನು ಬಳಸಲಾಗುವುದು ಎನ್ನಲಾಗಿದೆ. ಈ ತಂತ್ರಜ್ಞಾನವು ಜಿಎಸ್ಟಿಯಲ್ಲಿನ ಕ್ರೆಡಿಟ್ ಫ್ಲೋ ಮೇಲೆ ನಿಗಾ ಇರಿಸಲಿದೆ. ಒಂದೇ ಆಧಾರ್ನೊಂದಿಗೆ ನೋಂದಾಯಿಸಲಾದ ವಿವಿಧ ವ್ಯವಹಾರಗಳಲ್ಲಿ ಕ್ರೆಡಿಟ್ ಚಲನೆ ಇರುತ್ತದೆ. ಇದರಿಂದಾಗಿ ಕಾಗದದ ಮೇಲೆ ಸರಕುಗಳ ಪೂರೈಕೆಯನ್ನು ತೋರಿಸಿ, ನಕಲಿ ಕ್ಲೈಮ್ ಮಾಡುವವರನ್ನು ತಕ್ಷಣವೇ ಹಿಡಿಯಬಹುದು. ಜಿಎಸ್ಟಿಯ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಇನ್ನೂ ಹಲವು ಹೊಸ ತಂತ್ರಜ್ಞಾನಗಳ ಮೇಲೆ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ-ಭಾರತಕ್ಕೆ ಲಗ್ಗೆ ಇಟ್ಟ Redmi Note 11, Redmi Note 11S; ಇಲ್ಲಿದೆ ಬೆಲೆ, ವೈಶಿಷ್ಟ್ಯ
ಯಾರಾದರೂ ನಕಲಿ ಬಿಲ್ಲಿಂಗ್ ಅಥವಾ ಜಿಎಸ್ಟಿ ಕ್ಲೈಮ್ ಮಾಡಿದರೆ, ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಜಿಎಸ್ಟಿ ಕಳ್ಳರನ್ನು ಸುಲಭವಾಗಿ ಹಿಡಿಯಲು ಸರ್ಕಾರಕ್ಕೆ ಸಾಧ್ಯವಾವಾಗಲಿದೆ. ವಾಸ್ತವದಲ್ಲಿ ನಕಲಿ ಬಿಲ್ಲಿಂಗ್ ಮತ್ತು ನಕಲಿ ಕ್ಲೈಮ್ನ ಬ್ಲಾಕ್ಚೈನ್ ವ್ಯವಸ್ಥೆಯಿಂದ ತಕ್ಷಣವೇ ರೆಡ್ ಫ್ಲ್ಯಾಗ್ ಆಗಲಿದೆ. ಬ್ಲಾಕ್ಚೈನ್ ವ್ಯವಸ್ಥೆಯಡಿಯಲ್ಲಿ ಸರಕುಗಳ ಚಲನೆ ಮತ್ತು ದಾಖಲಾತಿ ಇರುತ್ತದೆ. ಇದರಿಂದ ವ್ಯಾಪಾರ ಹಾಗೂ ಇಲಾಖೆಗೆ ಸರಿಯಾದ ಮಾಹಿತಿ ಸಿಗಲಿದೆ. ಗ್ರಾಹಕರು ಯಾವುದೇ ರೀತಿಯ ವರ್ಕಿಂಗ್ ಕ್ಯಾಪಿಟಲ್ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ITC ಲೆಡ್ಜರ್ನೊಂದಿಗೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕ್ರೆಡಿಟ್ ಹರಿವಿನ ವ್ಯವಸ್ಥೆ ಇರುತ್ತದೆ.
ಇದನ್ನೂ ಓದಿ-The Largest Comet: Manhattan ಗಾತ್ರಕ್ಕಿಂತ 7 ಪಟ್ಟು ದೊಡ್ಡ ಮತ್ತು 137 ಕಿ.ಮೀ ಉದ್ದದ ಧೂಮಕೇತು ಪತ್ತೆ
ಬ್ಲಾಕ್ಚೈನ್ ಎಂದರೇನು?
ಬ್ಲಾಕ್ಚೈನ್ ಎನ್ನುವುದು ಡಿಜಿಟಲ್ ಕರೆನ್ಸಿ (Digital Currency) ಮಾತ್ರವಲ್ಲದೆ ಯಾವುದನ್ನಾದರೂ ಡಿಜಿಟೈಸ್ ಮಾಡಬಹುದಾದ ಮತ್ತು ಅದರ ದಾಖಲೆಯನ್ನು ಇರಿಸಬಹುದಾದ ತಂತ್ರಜ್ಞಾನವಾಗಿದೆ. ಅಂದರೆ, ಬ್ಲಾಕ್ಚೈನ್ ಡಿಜಿಟಲ್ ಲೆಡ್ಜರ್ ಆಗಿದೆ. ಅನೇಕ ಕ್ರಿಪ್ಟೋಕರೆನ್ಸಿ ನೆಟ್ವರ್ಕ್ಗಳು ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕವೂ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ-Gmail ಬಳಸುತ್ತೀರಾ? ಹಾಗಿದ್ರೆ ತಕ್ಷಣ ಅಪ್ಡೇಟ್ ಮಾಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.