ಕ್ಯಾನ್ಸರ್‌ ಅನ್ನು ಸಂಪೂರ್ಣವಾಗಿ ಗುಣಪಡಿಸುವಷ್ಟು ಶಕ್ತಿ ಇರುವುದು ಈ ವಸ್ತುವಿಗೆ ಮಾತ್ರ ! ವರ್ಷಕ್ಕೆ ಒಮ್ಮೆಯಷ್ಟೇ ಸಿಗುವ ಇದು ಕ್ಷಯರೋಗಿಕ್ಕೂ ಸಂಜೀವಿನಿ!

Cancer Home Remedies: ಕಾರ್ಡಿಸೆಪ್ಸ್ ಎಂಬ ಶಿಲೀಂಧ್ರವು ಕ್ಯಾನ್ಸರ್ ಕೋಶಗಳಲ್ಲಿ ಅತಿಯಾದ ಕೋಶ ಬೆಳವಣಿಗೆಯ ಸಂಕೇತಗಳನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೊಸ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.

Written by - Bhavishya Shetty | Last Updated : Nov 12, 2024, 08:04 PM IST
    • ಬೆನ್ನು-ಮೊಣಕಾಲು ನೋವನ್ನು ಗುಣಪಡಿಸಲು ಬಳಸಲಾಗುತ್ತದೆ
    • ಇದು ಗಂಭೀರ ಕಾಯಿಲೆಗೆ ಟಾನಿಕ್ ಆಗಿಯೂ ಕೆಲಸ ಮಾಡುತ್ತದೆ
    • ಹುಳುಗಳ ಮೇಲೆ ಬೆಳೆಯುವ ಆರೆಂಜ್ ಜೊಂಬಿ ಫಂಗಸ್
ಕ್ಯಾನ್ಸರ್‌ ಅನ್ನು ಸಂಪೂರ್ಣವಾಗಿ ಗುಣಪಡಿಸುವಷ್ಟು ಶಕ್ತಿ ಇರುವುದು ಈ ವಸ್ತುವಿಗೆ ಮಾತ್ರ ! ವರ್ಷಕ್ಕೆ ಒಮ್ಮೆಯಷ್ಟೇ ಸಿಗುವ ಇದು ಕ್ಷಯರೋಗಿಕ್ಕೂ ಸಂಜೀವಿನಿ! title=
Cancer Home Remedies

Caterpillar Fungus: ಕ್ಯಾಟರ್ಪಿಲ್ಲರ್ ಫಂಗಸ್‌ ಅಥವಾ ಶಿಲೀಂಧ್ರವನ್ನು ಟಿಬಿ, ಕೆಮ್ಮು, ರಕ್ತಹೀನತೆ ಮತ್ತು ಬೆನ್ನು-ಮೊಣಕಾಲು ನೋವನ್ನು ಗುಣಪಡಿಸಲು ಬಳಸಲಾಗುತ್ತದೆ. ಇದು ಗಂಭೀರ ಕಾಯಿಲೆಗೆ ಟಾನಿಕ್ ಆಗಿಯೂ ಕೆಲಸ ಮಾಡುತ್ತದೆ. ಕಾರ್ಡಿಸೆಪ್ಸ್ ಎಂದು ಕರೆಯಲ್ಪಡುವ ಕ್ಯಾಟರ್ಪಿಲ್ಲರ್‌ ಅಥವಾ ಹುಳುಗಳ ಮೇಲೆ ಬೆಳೆಯುವ ಆರೆಂಜ್ ಜೊಂಬಿ ಫಂಗಸ್ ಅನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಬಹುದು ಎಂದು ಹೊಸ ಸಂಶೋಧನೆಯು ಬಹಿರಂಗಪಡಿಸಿದೆ.

ಇದನ್ನೂ ಓದಿ: ಮಧುಮೇಹಕ್ಕೆ ಸಂಜೀವಿನಿ ಈ ಪುಟ್ಟ ಹಣ್ಣು... ಒಮ್ಮೆ ತಿಂದರೆ 30 ದಿನ ಕಾಲ ಬ್ಲಡ್‌ ಶುಗರ್‌ ಏರುಪೇರಾಗದೇ ಕಂಟ್ರೋಲ್‌ನಲ್ಲಿರುತ್ತದೆ!

ಕಾರ್ಡಿಸೆಪ್ಸ್ ಎಂಬ ಶಿಲೀಂಧ್ರವು ಕ್ಯಾನ್ಸರ್ ಕೋಶಗಳಲ್ಲಿ ಅತಿಯಾದ ಕೋಶ ಬೆಳವಣಿಗೆಯ ಸಂಕೇತಗಳನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೊಸ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಹುಳುಗಳ ಮೇಲೆ ಬೆಳೆಯುವ ಶಿಲೀಂಧ್ರವನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸಬಹುದು. ಕೀಮೋಥೆರಪಿ ಮತ್ತು ವಿಕಿರಣದಂತಹ ಪರ್ಯಾಯಗಳಿಗಿಂತ ರೋಗಿಗಳಿಗೆ ಕಡಿಮೆ ಹಾನಿಕಾರಕ ಚಿಕಿತ್ಸೆಯಾಗಿದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.

ಈ ಶಿಲೀಂಧ್ರವು ಹೇಗೆ ಕೆಲಸ ಮಾಡುತ್ತದೆ?

FEBS ಲೆಟರ್ಸ್‌ನಲ್ಲಿ ಪ್ರಕಟವಾದ ಸಂಶೋಧನೆಯು ಕಾರ್ಡಿಸೆಪಿನ್ ಆರೋಗ್ಯಕರ ಅಂಗಾಂಶಗಳಿಗೆ ಹಾನಿಯಾಗದಂತೆ ಕ್ಯಾನ್ಸರ್ ಕೋಶಗಳ ಬೆಳವಣಿಗೆಯ ಸಂಕೇತಗಳನ್ನು ಅಡ್ಡಿಪಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಈ ಕಿತ್ತಳೆ ಬಣ್ಣದ ಜೊಂಬಿ ಶಿಲೀಂಧ್ರವನ್ನು ಸಾಂಪ್ರದಾಯಿಕ ಏಷ್ಯನ್ ಔಷಧದಲ್ಲಿ ದೀರ್ಘಕಾಲ ಬಳಸಲಾಗಿದೆ. ಆದರೆ ಈಗ ಸಂಶೋಧಕರು ಅದರ ಕ್ಯಾನ್ಸರ್-ಹೋರಾಟದ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ.

ನಾರ್ಥಾಂಪ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಾರ್ಮಸಿಯ ತಂಡವು ಸಾವಿರಾರು ಜೀನ್‌ಗಳ ಮೇಲೆ ಕಾರ್ಡಿಸೆಪಿನ್ ಪರಿಣಾಮವನ್ನು ಅಧ್ಯಯನ ಮಾಡಿದೆ ಮತ್ತು ಇದು ಕಾರ್ಡಿಸೆಪಿನ್ ಟ್ರೈಫಾಸ್ಫೇಟ್ ಆಗಿ ಪರಿವರ್ತನೆಗೊಂಡಿದೆ ಎಂದು ಕಂಡುಹಿಡಿದಿದೆ. ಅಷ್ಟೇ ಅಲ್ಲದೆ ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಹಿಡಿದಿದೆ. ಈ ಕುರಿತು ಲೇಖಕಿ ಡಾ.ಕಾರ್ನೇಲಿಯಾ ಡಿ ಮೂರ್ ಮಾತನಾಡಿ, ಹಲವು ವರ್ಷಗಳಿಂದ ಕಾರ್ಡಿಸೆಪಿನ್ ವಿವಿಧ ಕಾಯಿಲೆಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ. ಪ್ರತಿ ಹಂತದಲ್ಲೂ ನಾವು ಅದನ್ನು ಪರಿಣಾಮಕಾರಿ ಚಿಕಿತ್ಸೆಯಾಗಿ ಹೇಗೆ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹತ್ತಿರವಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂದು ಕ್ರಿಕೆಟ್‌ ಜಗತ್ತನ್ನೇ ಆಳಿದ್ದಾತನಿಗೆ ಇಂದು ಬೇಡಿ ತಿನ್ನುವ ಗತಿ... ಒಂದೊತ್ತಿನ ಊಟಕ್ಕೂ ಅಲೆದಾಡುತ್ತಿದ್ದಾನೆ ಭಾರತದ ʼಅಂದಿನʼ ದಿಗ್ಗಜ! ಸಚಿನ್‌ಗಿಂತಲೂ ಗ್ರೇಟ್‌ ಎನಿಸಿಕೊಂಡಿದ್ದ ಕ್ರಿಕೆಟಿಗನೀತ

ಕ್ಯಾನ್ಸರ್ ಔಷಧಿಯಾಗಿ ಬಳಸಬಹುದು..!?

ಕಾರ್ಡಿಸೆಪಿನ್ ಅನ್ನು ಕ್ಯಾನ್ಸರ್ ಔಷಧಿಯಾಗಿ ಬಳಸಬಹುದು ಎಂದು ಡೇಟಾ ದೃಢಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ಆಸ್ಪತ್ರೆಗಳಿಗೆ ದಾಖಲಾದ ರೋಗಿಗಳಲ್ಲಿ ಮಾರಣಾಂತಿಕ ಶಿಲೀಂಧ್ರ ರೋಗಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ನಂಬಿದ್ದಾರೆ. ಆದರೂ, ಕಾರ್ಡಿಸೆಪ್ಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News