Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ

Dimond Made From Air - ನ್ಯೂಯಾರ್ಕ್‌ನ ಲಕ್ಸುರಿ ಆಭರಣ ತಯಾರಕ ಕಂಪನಿ ಗಾಳಿಯಿಂದ ವಜ್ರಗಳನ್ನು ತಯಾರಿಸಿದೆ. ಎಥರ್ (Aether) ಹೆಸರಿನ ಕಂಪನಿ ಇದನ್ನು ತನ್ನ ಪ್ರಯೋಗಾಲಯದಲ್ಲಿ ತಯಾರಿಸಿದೆ ಎಂದು ಹೇಳಲಾಗಿದೆ. ಹೊಸ ತಂತ್ರಜ್ಞಾನದ ಸಹಾಯದಿಂದ ಈ ವಜ್ರವನ್ನು ಸಿದ್ಧಪಡಿಸಲಾಗಿದೆ.

Written by - Nitin Tabib | Last Updated : Mar 12, 2022, 07:36 PM IST
  • ಅಮೇರಿಕಾದಲ್ಲಿ ಕಲುಷಿತ ಗಾಳಿಯಿಂದ ಸಿದ್ಧಗೊಂಡ ವಜ್ರ
  • ನ್ಯೂಯಾರ್ಕ್ ಲಕ್ಸರಿ ವಜ್ರಾಭರಣ ತಯಾರಿಕಾ ಕಂಪನಿ ಸಾಧನೆ
  • ವಾಯು ಮಾಲಿನ್ಯವನ್ನು ಡೈಮಂಡ್ ಗೆ ಪರಿವರ್ತಿಸುವ ಯೋಜನೆ
Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ title=
Dimond Made From Air (File Photo)

ನವದೆಹಲಿ: Air Made Dimond - ಜಗತ್ತಿನಲ್ಲಿ ಹಲವು ವಿಸ್ಮಯಗಳಿದ್ದರೂ, ಇತ್ತೀಚೆಗೆ ನ್ಯೂಯಾರ್ಕ್‌ನ ಲಕ್ಸುರಿ ವಜ್ರಾಭರಣ ತಯಾರಕ ಕಂಪನಿ ಗಾಳಿಯಿಂದ ವಜ್ರಗಳನ್ನು ಸಿದ್ಧಪಡಿಸಿದೆ. Aether ಹೆಸರಿನ (Aether Dimond) ಈ ಕಂಪನಿ ಇದನ್ನು ತನ್ನ ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ. ಹೊಸ ತಂತ್ರಜ್ಞಾನದ ಸಹಾಯದಿಂದ ಈ ವಜ್ರವನ್ನು ಸಿದ್ಧಪಡಿಸಲಾಗಿದೆ. ಈ ವಜ್ರವು ಏಕೆ ವಿಶೇಷವಾಗಿದೆ ಮತ್ತು ಅದನ್ನು ಹೇಗೆ ತಯಾರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಈ ಅಮೂಲ್ಯ ರತ್ನವನ್ನು ಅನಿಲದ ಸಹಾಯದಿಂದ ತಯಾರಿಸಲಾಗಿದೆ (Air Pollution Can Make Dimond)
'ಡೈಲಿಮೇಲ್' ವರದಿ ಪ್ರಕಾರ, ವಾತಾವರಣದಲ್ಲಿರುವ ಕಾರ್ಬನ್ ಡೈಆಕ್ಸೈಡ್ (CO2) ಸಹಾಯದಿಂದ ಈ ವಜ್ರವನ್ನು ಸಿದ್ಧಪಡಿಸಲಾಗಿದೆ. ಕಾರ್ಬನ್ ಡೈಆಕ್ಸೈಡ್ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣ. ಹೊಸ ತಂತ್ರಜ್ಞಾನವನ್ನು ಬಳಸಿ, ಈ ಅನಿಲದ ಸಹಾಯದಿಂದ ಅಮೂಲ್ಯವಾದ ರತ್ನವನ್ನು (Dimond) ತಯಾರಿಸಬಹುದು ಎಂದು ಕಂಪನಿ ಹೇಳಿದೆ. ಗಣಿಗಾರಿಕೆಯ ಮೂಲಕ ಭೂಮಿಯಿಂದ ಹೊರತೆಗೆಯಲಾದ ನೈಜ ವಜ್ರವನ್ನು ಇದು ಭೌತಿಕವಾಗಿ ಮತ್ತು ರಾಸಾಯನಿಕವಾಗಿ ಹೋಲುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇಂತಹ ಕೆಲವು ವಜ್ರವನ್ನು ತಯಾರಿಸಲಾಗುತ್ತದೆ.

ವರದಿ ಪ್ರಕಾರ ಈ ವಜ್ರವನ್ನು 4 ಹಂತಗಳಲ್ಲಿ ಸಿದ್ಧಪಡಿಸಲಾಗಿದೆ. ಮೊದಲ ಹಂತದಲ್ಲಿ ರಿಯಾಕ್ಟರ್ ಬಳಸಿ, ಇಂಗಾಲದ ಡೈಆಕ್ಸೈಡ್ ಅನಿಲವನ್ನು ವಾತಾವರಣದಿಂದ ಬೇರ್ಪಡಿಸಲಾಗಿದೆ. ಎರಡನೇ ಹಂತದಲ್ಲಿ ಹೊಸ ತಂತ್ರಜ್ಞಾನದ ಸಹಾಯದಿಂದ ಹೈಡ್ರೋಕಾರ್ಬನ್ ಸಂಶ್ಲೇಷಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಮೂರನೇ ಹಂತದಲ್ಲಿ, ಕಾರ್ಬನ್ ಡೈಆಕ್ಸೈಡ್ ಅನ್ನು ಹೈಡ್ರೋಕಾರ್ಬನ್ಗಳಾಗಿ ಪರಿವರ್ತಿಸಲಾಗಿದೆ. ನಾಲ್ಕನೆಯ ಮತ್ತು ಕೊನೆಯ ಹಂತದಲ್ಲಿ, ರಾಸಾಯನಿಕ ಹಬೆಯ ಸಹಾಯದಿಂದ ಹೈಡ್ರೋಕಾರ್ಬನ್‌ ಅನ್ನು ವಜ್ರವನ್ನಾಗಿ ಪರಿವರ್ತಿಸಲಾಗಿದೆ.

ಇದನ್ನೂ ಓದಿ-ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ

ಪ್ರಯೋಗಾಲಯದಲ್ಲಿ ಪ್ರಕ್ರಿಯೆಯ ಮೂಲಕ ವಜ್ರದ ಹರಳುಗಳನ್ನು ತಯಾರಿಸಲಾಗುತ್ತದೆ. ಇದರ ನಂತರ ಅದನ್ನು ಕತ್ತರಿಸಿ ಪಾಲಿಶ್ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಅದು ರತ್ನವಾಗಿ ಬದಲಾಗುತ್ತದೆ.

ಇದನ್ನೂ ಓದಿ-Pakistan: ಭಾರತದ ರಫೇಲ್ ಎದುರಿಸಲು ಚೀನಾದಿಂದ J-10C ಖರೀದಿಸಿದ ಪಾಕಿಸ್ತಾನ!

ವಾಯು ಮಾಲಿನ್ಯವನ್ನು ವಜ್ರವನ್ನಾಗಿ ಪರಿವರ್ತಿಸುವ ಯೋಜನೆ
ಈ ವಜ್ರದ ಬೆಲೆಯ ಬಗ್ಗೆ ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಕಂಪನಿಯ ಸಹ ಸಂಸ್ಥಾಪಕರಾದ ರಿಯಾನ್ ಶಿಯರ್‌ಮನ್ ಹೇಳುತ್ತಾರೆ, "ಪ್ರಪಂಚದ ಮೊದಲ ಗುಣಮಟ್ಟದ ವಜ್ರಗಳನ್ನು ಗಾಳಿಯ ಮೂಲಕ ರಚಿಸಿರುವುದು ನಮಗೆ ಹೆಮ್ಮೆಯಾಗಿದೆ. ವಾಯು ಮಾಲಿನ್ಯವನ್ನು ವಜ್ರವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ. ರಿಯಾನ್ ಹೇಳುತ್ತಾರೆ, ಗಾಳಿಯಿಂದ ಸುಮಾರು 20 ಟನ್ ಕಾರ್ಬನ್-ಡೈ-ಆಕ್ಸೈಡ್ ಅನ್ನು ಹೊರತೆಗೆಯುವ ಮೂಲಕ ಒಂದು ಕ್ಯಾರೆಟ್ ವಜ್ರವನ್ನು ತಯಾರಿಸಬಹುದು.

ಇದನ್ನೂ ಓದಿ-Omicron ಹಾಗೂ Delta ಸೇರಿ ಹುಟ್ಟಿಕೊಂಡಿದೆ ಹೊಸ ವೈರಸ್, ಮೊದಲಿನಿಂದಲೇ ಭೀತಿ ಇತ್ತು ಎಂದ WHO

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News