6-7 ಸೀಟರ್ ಅಲ್ಲ ಬಂದಿದೆ 8 ಸೀಟರ್ ಕಾರು ! ಅದು ಕೂಡಾ ಕಡಿಮೆ ಬೆಲೆಯಲ್ಲಿ

8-Seater Cars:ಮಾರುಕಟ್ಟೆಯಲ್ಲಿ 8 ಆಸನಗಳ ಕಾರುಗಳೂ ಇವೆ.  ಹೌದು 8 ಸೀಟರ್ ಕಾರುಗಳಿಗೆ ಈಗ ಮಾರುಕಟ್ಟೆಯಲ್ಲಿ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ.  

Written by - Ranjitha R K | Last Updated : Jul 17, 2023, 03:07 PM IST
  • ಮಾರುಕಟ್ಟೆಯಲ್ಲಿ ಅನೇಕ 7-ಆಸನಗಳ ಕಾರುಗಳು ಲಭ್ಯವಿವೆ
  • ದೊಡ್ಡ ಕುಟುಂಬಗಳಿಗೆ ಈ ಕಾರು ಉತ್ತಮವಾಗಿವೆ
  • ಕಡಿಮೆ ಬೆಲೆಗೆ ಈ 8 ಸೀಟರ್ ಕಾರುಗಳು ಖರೀದಿಗೆ ಲಭ್ಯ.
6-7 ಸೀಟರ್ ಅಲ್ಲ ಬಂದಿದೆ 8 ಸೀಟರ್ ಕಾರು ! ಅದು ಕೂಡಾ ಕಡಿಮೆ ಬೆಲೆಯಲ್ಲಿ  title=

8-Seater Cars : ಭಾರತೀಯ ಕಾರು ಮಾರುಕಟ್ಟೆಯಲ್ಲಿ ಅನೇಕ 7-ಆಸನಗಳ ಕಾರುಗಳು ಲಭ್ಯವಿವೆ. ದೊಡ್ಡ ಕುಟುಂಬಗಳಿಗೆ ಈ ಕಾರು ಉತ್ತಮವಾಗಿವೆ. ಆದರೆ, ಮಾರುಕಟ್ಟೆಯಲ್ಲಿ 8 ಆಸನಗಳ ಕಾರುಗಳೂ ಇವೆ.  ಹೌದು 8 ಸೀಟರ್ ಕಾರುಗಳಿಗೆ ಈಗ ಮಾರುಕಟ್ಟೆಯಲ್ಲಿ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ. 8 ಸೀಟರ್ ಅಂದಾಕ್ಷಣ ಈ ಕಾರು ದುಬಾರಿ ಅಂದುಕೊಳ್ಳಬೇಕಿಲ್ಲ. ಕಡಿಮೆ ಬೆಲೆಗೆ ಈ 8 ಸೀಟರ್ ಕಾರುಗಳು ಖರೀದಿಗೆ ಲಭ್ಯವಿದೆ. 

1. ಮಹೀಂದ್ರ ಮರಾಜ್ಜೊ : 
ಇದು ಎಂಪಿವಿ. ಇದರ ಬೆಲೆ 14.10 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಬರುತ್ತದೆ. ಇದು 122PS/300Nm ಅನ್ನು ಜನರೆಟ್ ಮಾಡುತ್ತದೆ.  ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದು ಡೀಸೆಲ್ ಎಂಜಿನ್ ನೊಂದಿಗೆ ಮಾತ್ರ ಲಭ್ಯವಿದೆ. 

ಇದನ್ನೂ ಓದಿ : Smartphone Tips: ದೀರ್ಘ ಬಾಳಿಕೆಗಾಗಿ ವಾರಕ್ಕೆ ಎಷ್ಟು ಬಾರಿ ಫೋನ್ ರೀಸ್ಟಾರ್ಟ್ ಮಾಡ್ಬೇಕು?

2. ಟೊಯೊಟಾ ಇನ್ನೋವಾ ಕ್ರಿಸ್ಟಾ : 
ಇನ್ನೋವಾ ಕ್ರಿಸ್ಟಾ ಬಹಳ ಜನಪ್ರಿಯವಾಗಿದೆ. ಇದು ವರ್ಷಗಳಿಂದ ಗ್ರಾಹಕರ ಮನ ಗೆದ್ದಿದೆ. ಇದರ 8 ಆಸನಗಳ ರೂಪಾಂತರಗಳ ಬೆಲೆ 19,99,000 ರೂ.ನಿಂದ ಪ್ರಾರಂಭವಾಗುತ್ತದೆ. ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಯಲ್ಲಿ ಒಂದು. ಇದು 7 ಮತ್ತು 8 ಸೀಟರ್ ಆಯ್ಕೆಗಳಲ್ಲಿ ಬರುತ್ತದೆ. ಪ್ರಸ್ತುತ, ಇದು ಡೀಸೆಲ್ ಎಂಜಿನ್ ಅನ್ನು ಮಾತ್ರ ಹೊಂದಿದೆ. 

3. ಟೊಯೋಟಾ ಇನ್ನೋವಾ ಹೈಕ್ರಾಸ್ :
ಇದು 7 ಮತ್ತು 8 ಸೀಟರ್ ಆಯ್ಕೆಗಳಲ್ಲಿಯೂ ಬರುತ್ತದೆ. ಇದರ 8 ಆಸನಗಳ ರೂಪಾಂತರಗಳ ಬೆಲೆ 18.87 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಎರಡು ಪವರ್‌ಟ್ರೇನ್‌ಗಳ ಆಯ್ಕೆಯೊಂದಿಗೆ ಇದು ಲಭ್ಯವಿದೆ.  ಸಾಮಾನ್ಯ 2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಹೈಬ್ರಿಡ್ ಸೆಟಪ್‌ನೊಂದಿಗೆ 2-ಲೀಟರ್ ಪೆಟ್ರೋಲ್ ಎಂಜಿನ್. ಎರಡೂ 8-ಆಸನಗಳ ವಿನ್ಯಾಸದ ಆಯ್ಕೆಯೊಂದಿಗೆ ಬರುತ್ತವೆ. 

ಇದನ್ನೂ ಓದಿ :ಭವಿಷ್ಯದಲ್ಲಿ ನಿಮಗಾಗುವ ಕಾಯಿಲೆಯ ಬಗ್ಗೆ ಮಾಹಿತಿ ನೀಡಲಿದೆ ಪಿನ್ ಕೋಡ್! ಅದ್ಹೇಗೆ ಸಾಧ್ಯ?

4. ಮಾರುತಿ ಇನ್ವಿಕ್ಟೋ : 
ಇನ್ವಿಕ್ಟೋ ಸಹ 7 ಮತ್ತು 8 ಸೀಟರ್ ಆಯ್ಕೆಗಳನ್ನು ಹೊಂದಿದೆ. ಇದರ 8 ಆಸನಗಳ ರೂಪಾಂತರದ ಬೆಲೆ 24.84 ಲಕ್ಷ ರೂ. ಕೇವಲ ಒಂದು ಪವರ್‌ಟ್ರೇನ್ ಅನ್ನು ಇದು ಹೊಂದಿದೆ. ಹೈಬ್ರಿಡ್ ಸೆಟಪ್‌ನೊಂದಿಗೆ 2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕ ಇದರಲ್ಲಿ ಲಭ್ಯ. ಇದು ಇನ್ನೋವಾ ಹೈಕ್ರಾಸ್ ಆಧಾರಿತ MPV ಆಗಿದೆ.

5. Lexus LX : 
ಇದರ ಬೆಲೆ ಸುಮಾರು 2.63 ಕೋಟಿ ರೂ. ಇದು ಅತ್ಯಂತ ಶಕ್ತಿಶಾಲಿ ಎಂಜಿನ್ ಮತ್ತು ಗಟ್ಟಿಮುಟ್ಟಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ 8 ಜನ ಕುಳಿತುಕೊಳ್ಳಬಹುದು. ಇದು 5663cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 362bhp ಮತ್ತು 530Nm ಅನ್ನು ಜನರೆಟ್ ಮಾಡುತ್ತದೆ. ಇದು 7.7 ಸೆಕೆಂಡುಗಳಲ್ಲಿ 0-100kmph ವೇಗವನ್ನು ಸಾಧಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News