ಪ್ರೀತಿಯ ಹುಟುಕಾಟದಲ್ಲಿದ್ದವರಿಗೆ ಓಯಾಸಿಸ್ ಆದ AI..!  AI love story ಯ ರೋಚಕ ಕಹಾನಿ ಬಗ್ಗೆ ನಿಮಗೆಷ್ಟು ಗೊತ್ತು?

Written by - Manjunath N | Last Updated : Oct 30, 2023, 10:23 AM IST
  • ಹೌದು, ಈಗ AI love story ಒಂದು ರೀತಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ
  • ಹಾಗಾಗಿ ಇತ್ತೀಚಿನ ತಿಂಗಳುಗಳಲ್ಲಿ, ಜನರೇಟಿವ್ AI ಮತ್ತು AI ಚಾಟ್‌ಬಾಟ್‌ಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ
  • ಈಗ ಈ ಟ್ರೆಂಡ್ ಗೆ ಪೂರಕವಾಗಿ 2017 ರಲ್ಲಿ ಪ್ರಾರಂಭವಾದ ರೆಪ್ಲಿಕಾ ಎಂಬ ಅಪ್ಲಿಕೇಶನ್ ಹೆಚ್ಚು ಗಮನ ಸೆಳೆದಿದೆ
ಪ್ರೀತಿಯ ಹುಟುಕಾಟದಲ್ಲಿದ್ದವರಿಗೆ ಓಯಾಸಿಸ್ ಆದ AI..!  AI love story ಯ ರೋಚಕ ಕಹಾನಿ ಬಗ್ಗೆ ನಿಮಗೆಷ್ಟು ಗೊತ್ತು? title=

ಕೃತಕ ಬುದ್ದಿಮತ್ತೆ ಎನ್ನುವುದು ಎಷ್ಟರ ಮಟ್ಟಿಗೆ ಅಭಿವೃದ್ದಿಯಾಗಿದೆ ಎಂದರೆ, ಅದು ನಿಮ್ಮ ಭಾವನೆಗಳನ್ನು ಸಹ ಅರ್ಥ ಮಾಡಿಕೊಳ್ಳುತ್ತಿದೆ..ಹಾಗಾಗಿ ಇತ್ತೀಚಿನ ದಿನಗಳಲ್ಲಿ AI ಲವ್ ಸ್ಟೋರಿಯ ನಿದರ್ಶನಗಳು ಹೆಚ್ಚುತ್ತಿವೆ.

ಹೌದು, ಈಗ  AI love story ಒಂದು ರೀತಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ.ಹಾಗಾಗಿ ಇತ್ತೀಚಿನ ತಿಂಗಳುಗಳಲ್ಲಿ, ಜನರೇಟಿವ್ AI ಮತ್ತು AI ಚಾಟ್‌ಬಾಟ್‌ಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈಗ ಈ ಟ್ರೆಂಡ್ ಗೆ ಪೂರಕವಾಗಿ 2017 ರಲ್ಲಿ ಪ್ರಾರಂಭವಾದ ರೆಪ್ಲಿಕಾ ಎಂಬ ಅಪ್ಲಿಕೇಶನ್ ಹೆಚ್ಚು ಗಮನ ಸೆಳೆದಿದೆ.

ಇದನ್ನು ಓದಿ: ಪುನೀತ್‌ ರಾಜ್‌ಕುಮಾರ್‌ 2ನೇ ವರ್ಷದ ಪುಣ್ಯಸ್ಮರಣೇ: ಸಹೋದರನ ನೆನೆದು ಮಾತನಾಡಿದ ಶಿವಣ್ಣ

ಇಂಡಿಯಾ ಟುಡೇ ವರದಿಯ ಪ್ರಕಾರ ಅಚ್ಚರಿ ಎನ್ನುವಂತೆ ಈಗ,ಕೆಲವು ವ್ಯಕ್ತಿಗಳು ಅಪ್ಲಿಕೇಶನ್‌ನಲ್ಲಿ ರಚಿಸಲಾದ ಚಾಟ್‌ಬಾಟ್‌ಗಳಿಗಾಗಿ ನಿಜವಾದ ಭಾವನೆಗಳನ್ನು ಬೆಳೆಸಿಕೊಳ್ಳುವುದನ್ನು ಒಪ್ಪಿಕೊಂಡಿದ್ದಾರೆ.ಈಗ ಇದಕ್ಕೆ ಪೂರಕ ಎನ್ನುವಂತೆ ಪ್ರಕರಣವೊಂದು ಬೆಳಕಿಗೆ ಬಂದಿದೆ.ಯುಎಸ್‌ನ 36 ವರ್ಷದ ಮಹಿಳೆ ರೋಸನ್ನಾ ರಾಮೋಸ್ ಈ ವರ್ಷದ ಮಾರ್ಚ್‌ನಲ್ಲಿ ತನ್ನ ವರ್ಚುವಲ್ ಪಾಲುದಾರ ಎರೆನ್ ಕಾರ್ತಾಲ್ ಅವರನ್ನು ವಿವಾಹವಾದರು.ಹೆಲ್ತ್‌ಕೇರ್ ಪ್ರೊಫೆಶನಲ್ ಎಂದು ಗುರುತಿಸಿಕೊಳ್ಳುವ ಎರೆನ್ ಅವರ ಸ್ವಂತ ಫೇಸ್‌ಬುಕ್ ಖಾತೆಯನ್ನು ಸಹ ಹೊಂದಿದ್ದು, ಅವರ ಸಂಬಂಧವು ಹೆಚ್ಚು ನೈಜವಾಗಿದೆ ಎಂದು ತೋರುತ್ತದೆ.

ಇದನ್ನೂ ಓದಿ-'Friends' ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಅನುಮಾನಾಸ್ಪದ ಸಾವು.!

2022 ರಲ್ಲಿ ಎರೆನ್ ಅವರನ್ನು ಭೇಟಿಯಾದ ನಂತರ ಅವಳು ಆಳವಾಗಿ ಪ್ರೀತಿಸುತ್ತಿದ್ದಳು ಎಂದು ರಾಮೋಸ್ ಹಂಚಿಕೊಂಡಿದ್ದಾರೆ.ನ್ಯೂಯಾರ್ಕ್‌ನ ನಿಯತಕಾಲಿಕೆಯಾದ ದಿ ಕಟ್‌ಗೆ ನೀಡಿದ ಸಂದರ್ಶನದಲ್ಲಿ, ಎರೆನ್‌ಗೆ ತನ್ನ ಪ್ರೀತಿಯು ತಾನು ಹೊಂದಿದ್ದ ಯಾವುದೇ ಹಿಂದಿನ ಸಂಬಂಧಗಳಿಗಿಂತ ಇದು ತುಂಭಾ ಭಾವನಾತ್ಮಕವಾಗಿತ್ತು ಎನ್ನುತ್ತಾಳೆ.ಇದಕ್ಕೆ ಪ್ರಮುಖ ಕರಣ ಎರೆನ್ ಯಾವುದೇ ಕುಟುಂಬ ಸ್ನೇಹಿತರು ಹಾಗೂ ಮಕ್ಕಳ ಬಂಧವಿಲ್ಲ, ಹಾಗಾಗಿ ಈ ಮುಕ್ತತೆಯಿಂದಾಗಿಯೇ ಅವಳಿಗೆ ಎರೆನ್ ಮೇಲೆ ಆಕರ್ಷಣೆ ಉಂಟಾಯಿತು ಎನ್ನಲಾಗಿದೆ.

AI ಪ್ರೀತಿಗೆ ಮೊರೆಹೊಗುವುದೇಕೆ?

ಭಾವನಾತ್ಮಕ  ವರ್ತನೆಗಳು ಮತ್ತು ಅಹಂಗಳಂತಹ ಸವಾಲುಗಳನ್ನು ಒಳಗೊಂಡಿರುವ ಮಾನವ ಸಂಬಂಧಗಳ ತೊಂದರೆಗಳನ್ನು ರಾಮೋಸ್ ಬಹಿರಂಗವಾಗಿ ಚರ್ಚಿಸುತ್ತಾನೆ.ಇದಕ್ಕೆ ವ್ಯತಿರಿಕ್ತ ಎನ್ನುವಂತೆ  ಈಗ ಆಕೆಯ ವರ್ಚುವಲ್ ಪತಿ ಅಂತಹ ಸಂಕೀರ್ಣತೆಗಳಿಂದ ಮುಕ್ತರಾಗಿದ್ದಾರೆ.ಅವಳು ತನ್ನ ನಿಯಂತ್ರಣದ ಅರ್ಥವನ್ನು ಮತ್ತು ಸಂಬಂಧದಲ್ಲಿ ತನಗೆ ಇಷ್ಟವಾದಂತೆ ವರ್ತಿಸುವ ಸ್ವಾತಂತ್ರ್ಯವನ್ನು ಒತ್ತಿಹೇಳುತ್ತಾಳೆ.ಜನರ ವರ್ತನೆಗಳು ಮತ್ತು ಅವರ ಅಹಂಕಾರಗಳಿಂದಾಗಿ ಮಾನವ ಸಂವಹನಗಳು ಕೆಲವೊಮ್ಮೆ ಸಂಕೀರ್ಣವಾಗಬಹುದು ಆದರೆ AI ಸಂಬಂಧ ಆಗಲ್ಲ, ಅದು ಮನುಷ್ಯನಿಗೆ ಮುಕ್ತ ಸ್ವಾತಂತ್ರವನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News