ಡ್ರೈವಿಂಗ್ ಲೈಸೆನ್ಸ್ ಕೈಯಲ್ಲಿಲ್ಲದಿದ್ದರೂ ಬೀಳುವುದಿಲ್ಲ ದಂಡ, ಈ ವಿಧಾನವನ್ನು ಅನುಸರಿಸಿಕೊಳ್ಳಿ

iPhone Tips And Tricks : ನೀವು ಐಫೋನ್ ಬಳಕೆದಾರರಾಗಿದ್ದರೆ, ನಿಮ್ಮ ಜೇಬಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದುವ ಅಗತ್ಯವಿಲ್ಲ. ಆಪಲ್ ಡಿವೈಸ್ ನಿಮ್ಮ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ. 

Written by - Ranjitha R K | Last Updated : May 17, 2022, 10:14 AM IST
  • ಈಗ ಪ್ರಯಾಣ ಬೆಳೆಸುವ ವೇಳೆ ಡ್ರೈವಿಂಗ್ ಲೈಸೆನ್ಸ್ ಕೊಂಡೊಯ್ಯುವ ಅಗತ್ಯವಿಲ್ಲ
  • ಐಫೋನ್ ಬಳಕೆದಾರರಾಗಿದ್ದರೆ ಈ ಪರಿಸ್ಥಿತಿಯಲ್ಲಿಯೂ ದಂಡ ಕಟ್ಟುವ ಅಗತ್ಯವಿಲ್ಲ.
  • ಡ್ರೈವಿಂಗ್ ಲೈಸೆನ್ಸ್ ಅನ್ನು Apple Walletನಲ್ಲಿ ಇಡಬಹುದು.
ಡ್ರೈವಿಂಗ್ ಲೈಸೆನ್ಸ್ ಕೈಯಲ್ಲಿಲ್ಲದಿದ್ದರೂ ಬೀಳುವುದಿಲ್ಲ ದಂಡ, ಈ ವಿಧಾನವನ್ನು ಅನುಸರಿಸಿಕೊಳ್ಳಿ  title=
iPhone Tips And Tricks (file photo)

ಬೆಂಗಳೂರು : iPhone Tips And Tricks : ಸ್ವಂತ ವಾಹನದಲ್ಲಿ ಪ್ರಯಾಣಿಸಬೇಕಾದರೆ ನಮ್ಮ ಬಳಿ  ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಂಡು ಹೋಗುವುದು ಅನಿವಾರ್ಯ. ಇಲ್ಲವಾದರೆ ದಂಡ ತೆರಬೇಕಾಗಿ ಬರುತ್ತದೆ.  ಒಂದು ವೇಳೆ ನೀವು ಮನೆಯಿಂದ ಹೊರಡುವಾಗ ಜೊತೆಗೆ  ಡ್ರೈವಿಂಗ್ ಲೈಸೆನ್ಸ್  ತೆಗೆದುಕೊಂಡು ಹೋಗಲು ಮರೆತಿದ್ದರೆ , ಟ್ರಾಫಿಕ್ ಪೋಲಿಸ್ ತಪಾಸಣೆಗೆಂದು ನಿಮ್ಮನ್ನು ತಡೆದು ನಿಲ್ಲಿಸಿದರೆ ಜೇಬಿಗೆ ಕತ್ತರಿ ಗ್ಯಾರಂಟಿ. ಆದರೆ, ನೀವು  ಐಫೋನ್ ಬಳಕೆದಾರರಾಗಿದ್ದರೆ ಈ ಪರಿಸ್ಥಿತಿಯಲ್ಲಿಯೂ ದಂಡ ಕಟ್ಟುವ ಅಗತ್ಯವಿಲ್ಲ.  ಡ್ರೈವಿಂಗ್ ಲೈಸೆನ್ಸ್ ಅನ್ನು Apple Walletನಲ್ಲಿ ಇಡಬಹುದು. ಅಗತ್ಯವಿದ್ದಾಗ ಅದನ್ನು ಬಳಸಬಹುದು. 

Apple Wallet ನಲ್ಲಿನ ID ಗಳು ಈಗಾಗಲೇ iPhone ಮತ್ತು Apple ವಾಚ್‌ನಲ್ಲಿ ನಿರ್ಮಿಸಲಾದ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಳ್ಳುತ್ತವೆ. identity ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ಟ್ಯಾಂಪರಿಂಗ್ ಮತ್ತು ಕಳ್ಳತವಾಗದಂತೆ ಇದನ್ನೂ ಸುರಕಕ್ಷಿತವಾಗಿಡಲಾಗಿದೆ.  ರಾಜ್ಯ ನೀಡುವ ಪ್ರಾಧಿಕಾರ ಅಥವಾ Apple ನೀವು ನಿಮ್ಮ ಲೈಸನ್ಸ್ ಅಥವಾ ಐಡಿಯನ್ನು ಯಾವಾಗ ಮತ್ತು ಎಲ್ಲಿ ಬಳಸುತ್ತೀರಿ ಎಂಬುದನ್ನುನೋಡುವುದು ಸಾಧ್ಯವಾಗುವುದಿಲ್ಲ. ಫೇಸ್ ಐಡಿ ಮತ್ತು ಟಚ್ ಐಡಿ ಬಳಸಿಕೊಂಡು ಬಯೋಮೆಟ್ರಿಕ್ ದೃಢೀಕರಣದ  ಸಹಾಯದಿಂದ ನಿಮ್ಮ ಲೈಸನ್ಸ್ ಮತ್ತು ಐಡಿಯನ್ನು ಬಳಸುವುದು ಸಾಧ್ಯವಾಗುತ್ತದೆ.  

ಇದನ್ನೂ ಓದಿ : ಬೇಸಿಗೆಯಲ್ಲಿ ಪದೇ ಪದೇ ಕರೆಂಟ್ ಹೋಗುತ್ತಿದೆಯೇ? ಪವರ್ ಇಲ್ಲದೆ 9 ಗಂಟೆ ಕೆಲಸ ಮಾಡುವ ಈ ಫ್ಯಾನ್ ಮನೆಗೆ ತನ್ನಿ

ನಿಮ್ಮ ಐಫೋನ್ ಮತ್ತು ಆಪಲ್ ವಾಚ್‌ಗೆ ನಿಮ್ಮ ಚಾಲಕರ ಪರವಾನಗಿಯನ್ನು ಸೇರಿಸುವುದು  ಹೇಗೆ ? 
ಹಂತ 1: ನಿಮ್ಮ iPhone ನಲ್ಲಿ, Wallet ಅಪ್ಲಿಕೇಶನ್ ತೆರೆಯಿರಿ. 
ಹಂತ 2: Add ಬಟನ್ ಮೇಲೆ ಟ್ಯಾಪ್ ಮಾಡಿ. 
ಹಂತ 3: ಡ್ರೈವಿಂಗ್ ಲೈಸೆನ್ಸ್ ಅಥವಾ ಸ್ಟೇಟ್ ಐಡಿ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ. 
ಹಂತ 4: ನಿಮ್ಮ ಲೈಸೆನ್ಸ್ ಅಥವಾ ಐಡಿಯನ್ನು ನಿಮ್ಮ ಐಫೋನ್‌ಗೆ ಮಾತ್ರ ಸೇರಿಸುತ್ತೀರಾ ಅಥವಾ  ನಿಮ್ಮ ಐಫೋನ್ ಮತ್ತು ಜೋಡಿಯಾಗಿರುವ Apple ವಾಚ್ ಎರಡಕ್ಕೂ ಸೇರಿಸುತ್ತೀರಾ ಎಂಬುದನ್ನು ಆರಿಸಿಕೊಳ್ಳಿ.
ಹಂತ 5: ನಿಮ್ಮ ಪರವಾನಗಿ ಅಥವಾ ID ಯ ಮುಂಭಾಗ ಮತ್ತು ಹಿಂಭಾಗವನ್ನು ಸ್ಕ್ಯಾನ್ ಮಾಡಲು ಆನ್‌ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ
ಹಂತ 6: ಇದಾದ ನಂತರ ಈ ಪ್ರಕ್ರಿಯೆ ಮಾಡುತ್ತಿರುವವರು ನೀವೇ ಎನ್ನುವುದನ್ನು  ಖಚಿತಪಡಿಸಿಕೊಳ್ಳಬೇಕು.
ಹಂತ 7:ನಿಮ್ಮ ಆಪಲ್ ವಾಚ್‌ಗೆ ನಿಮ್ಮ ಪರವಾನಗಿ ಅಥವಾ ಐಡಿಯನ್ನು ಸೇರಿಸಬೇಕಾದರೆ  ನಿಮ್ಮ ಐಫೋನ್‌ನಲ್ಲಿ, ಆಪಲ್ ವಾಚ್ ಅಪ್ಲಿಕೇಶನ್ ತೆರೆಯಿರಿ. ನಂತರ ಮೈ ವಾಚ್ ಟ್ಯಾಬ್ ಮೇಲೆ ಟ್ಯಾಪ್ ಮಾಡಿ.  ನಂತರ ಕೆಳಗೆ ಸ್ಕ್ರಾಲ್ ಮಾಡಿ, Wallet Apple Pay ಅಡಿಯಲ್ಲಿ ಪಟ್ಟಿ ಮಾಡಲಾದ ನಿಮ್ಮ ಪರವಾನಗಿ ಅಥವಾ ID ಮತ್ತು ನಿಮ್ಮ ಫೋನ್‌ನಲ್ಲಿನ  ಇತರ ಕಾರ್ಡ್‌ಗಳನ್ನು ಸರ್ಚ್ ಮಾಡಿ.  Add ಬಟನ್ ಮೇಲೆ ಟ್ಯಾಪ್ ಮಾಡಿ  ಆನ್ ಸ್ಕ್ರೀನ್ ನಿರ್ದೇಶನಗಳನ್ನು ಅನುಸರಿಸಿ.

ಇದನ್ನೂ ಓದಿ : PM Kusum Yojana 2022 ಹೆಸರಿನಲ್ಲಿ ವಂಚನೆ, ರೈತರಿಗೆ ಅಲರ್ಟ್ ಜಾರಿಗೊಳಿಸಿದ ಕೇಂದ್ರ ಸರ್ಕಾರ

ಈ ಸೌಲಭ್ಯ ಭಾರತದಲ್ಲಿ ಇಲ್ಲ : 
Apple Walletಗೆ ನಿಮ್ಮ ಪರವಾನಗಿಯನ್ನು ಸೇರಿಸಬೇಕಾದರೆ iPhone 8 ಅಥವಾ  Apple Watch Series 4 ಅಥವಾ ನಂತರದ ಇತ್ತೀಚಿನ ಆವೃತ್ತಿಯ iOS ಅಥವಾ watch OS ಇರುವುದು ಅನಿವಾರ್ಯ. ಈ ಫೋನ್ ಅಥವಾ ವಾಚ್ ನಿಮ್ಮಲ್ಲಿ ಇದ್ದರೆ, ನೀವು ಕೂಡಾ  ಫೇಸ್ ಐಡಿ ಅಥವಾ ಟಚ್ ಐಡಿಯನ್ನು ಆನ್ ಮಾಡಿ,  ಟು ಫ್ಯಾಕ್ಟರ್ ಸರ್ಟಿಫಿಕೇಶನ್ ಜೊತೆಯಲ್ಲಿ Apple Id ಆನ್ ಆಗುತ್ತದೆ.  ಆದರೆ ಈ ವೈಶಿಷ್ಟ್ಯವು ಭಾರತದಲ್ಲಿ ಲಭ್ಯವಿಲ್ಲ.  ಅಮೆರಿಕಾದಲ್ಲಿ ಜನರು ಇದರ ಲಾಭವನ್ನು ಪಡೆಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News