ರೈಲು ಟಿಕೆಟ್ ಬುಕ್ ಮಾಡಲು ಒಂದು ಫೋನ್ ಕಾಲ್ ಸಾಕು !ರೈಲ್ವೆ ಆರಂಭಿಸಿದೆ ಹೊಸ ಸೇವೆ ! ಅತ್ಯಂತ ಫಾಸ್ಟ್ ಆಗಿ ಆಗುವುದು ಟಿಕೆಟ್ ಬುಕ್

IRCTC Ticket Booking: ಭಾರತೀಯ ರೈಲ್ವೆ ಹೊಸ ಸೇವೆ ಆರಂಭಿಸಿದೆ.ಇಲ್ಲಿ ಕೇವಲ ಒಂದು ಫೋನ್ ಮೂಲಕ ಟಿಕೆಟ್ ಅನ್ನು ಅತ್ಯಂತ ಫಾಸ್ಟ್ ಆಗಿ ಬುಕ್ ಮಾಡಬಹುದು.  

Written by - Ranjitha R K | Last Updated : Sep 2, 2024, 10:56 AM IST
  • ಪ್ರತಿದಿನ ಕೋಟಿಗಟ್ಟಲೆ ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ.
  • ಭಾರತೀಯ ರೈಲ್ವೆಯು ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.
  • ಟಿಕೆಟ್ ಬುಕ್ಕಿಂಗ್ ಅನ್ನು ಸುಲಭಗೊಳಿಸಲು ಹೊಸ ಸೇವೆ
 ರೈಲು ಟಿಕೆಟ್ ಬುಕ್ ಮಾಡಲು ಒಂದು ಫೋನ್ ಕಾಲ್ ಸಾಕು !ರೈಲ್ವೆ ಆರಂಭಿಸಿದೆ ಹೊಸ ಸೇವೆ ! ಅತ್ಯಂತ ಫಾಸ್ಟ್ ಆಗಿ ಆಗುವುದು ಟಿಕೆಟ್ ಬುಕ್  title=

IRCTC Ticket Booking : ಪ್ರತಿದಿನ ಕೋಟಿಗಟ್ಟಲೆ ಜನ ರೈಲಿನಲ್ಲಿ ಪ್ರಯಾಣಿಸುತ್ತಾರೆ.ರೈಲು ಪ್ರಯಾಣವನ್ನು ಸುಲಭ ಮತ್ತು ಅನುಕೂಲಕರವಾಗಿಸಲು ಭಾರತೀಯ ರೈಲ್ವೆಯು ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.  ಟಿಕೆಟ್ ಬುಕ್ಕಿಂಗ್ ಅನ್ನು ಸುಲಭಗೊಳಿಸಲು ರೈಲ್ವೆ ಇದೀಗ ಹೊಸ ಉಪಕ್ರಮವನ್ನು ಕೈಗೊಂಡಿದೆ.ಈ ಸೌಲಭ್ಯದ ಅಡಿಯಲ್ಲಿ,ಟಿಕೆಟ್ ಬುಕಿಂಗ್, ಕ್ಯಾನ್ಸಲೆಶನ್, PNR ಸ್ಥಿತಿಯನ್ನು ಪರಿಶೀಲಿಸುವಂತಹ ಕಾರ್ಯಗಳಿಗಾಗಿ ಟೈಪ್ ಮಾಡುವ ಅಗತ್ಯವಿಲ್ಲ.  ನಿಮ್ಮ ಧ್ವನಿ ಮೂಲಕ ಅಥವಾ ಒಂದು ಕರೆ ಮಾಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.ಈ ಎಲ್ಲಾ ಕೆಲಸಗಳನ್ನು ರೈಲ್ವೇಯ ವರ್ಚುವಲ್ ಅಸಿಸ್ಟೆಂಟ್ AskDISHA ಸಹಾಯದಿಂದ ಮಾಡಲಾಗುತ್ತದೆ.  

ಬದಲಾಗಲಿದೆ ಟಿಕೆಟ್ ಬುಕ್ಕಿಂಗ್ ವಿಧಾನ : 
ಈಗ ರೈಲು ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಸುಲಭವಾಗಲಿದೆ.IRCTC ಮಾತನಾಡುವ ಮೂಲಕ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಒದಗಿಸುತ್ತದೆ.ಹೊಸ ಸೌಲಭ್ಯದ ಅಡಿಯಲ್ಲಿ,ಪ್ರಯಾಣಿಕರು ಮಾತನಾಡುವ ಅಥವಾ ಕರೆ ಮಾಡುವ ಮೂಲಕ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ. IRCTC, NPCI ಮತ್ತು CoRover ಯುಪಿಐಗಾಗಿ  ಕನ್ವರ್ಷನಲ್ ವಾಯ್ಸ್ ಪೇಮೆಂಟ್ ಸರ್ವಿಸ್ ಅನ್ನು ಪ್ರಾರಂಭಿಸಿವೆ. ರೈಲ್ವೆಯ ಹೊಸ ಸೌಲಭ್ಯವು  ಪೇಮೆಂಟ್ ಗೇಟ್‌ವೇಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದರ ಸಹಾಯದಿಂದ ಜನರು ತಮ್ಮ ಧ್ವನಿಯನ್ನು ಬಳಸುವ ಮೂಲಕ ಅಥವಾ ಅವರ UPI ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು  ಫೋನ್ ವೇಳೆ ಟೈಪ್ ಮಾಡುವ ಮೂಲಕ ಟಿಕೆಟ್ ಬುಕಿಂಗ್ ಮತ್ತು ಪೇಮೆಂಟ್ ಮಾಡಬಹುದು.ಹೊಸ ಸೌಲಭ್ಯದ ಅಡಿಯಲ್ಲಿ,ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್,ಕ್ಯಾನ್ಸಲೆಶನ್, ಪಿಎನ್‌ಆರ್ ಸ್ಥಿತಿಯ ಬಗ್ಗೆ ಧ್ವನಿಯ ಮೂಲಕ ಮಾಹಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ.  

ಇದನ್ನೂ ಓದಿ : ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್‌ ಮಾಡುವಂತಿಲ್ಲ: ಅಪ್ಪಿತಪ್ಪಿ ಮಾಡಿದ್ರೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ರಾಜ್ಯ ಸರ್ಕಾರದಿಂದ ಬಂತು ಕಠಿಣ ರೂಲ್ಸ್‌

IRCTCಯ ಹೊಸ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ? : 
ರೈಲ್ವೆಯ ಈ ಸೇವೆ AI ಅನ್ನು ಆಧರಿಸಿದೆ.ರೈಲ್ವೆಯ AI ವರ್ಚುವಲ್ ಅಸಿಸ್ಟೆಂಟ್ AskDisha ಮೂಲಕ ಈ ಸೇವೆಯನ್ನು ಒದಗಿಸುತ್ತದೆ.ಅದರ ಸಹಾಯದಿಂದ,ಧ್ವನಿ ಮೂಲಕವೂ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ರದ್ದುಗೊಳಿಸಬಹುದು. ಮೊಬೈಲ್ ಸಂಖ್ಯೆಯನ್ನು ನೀಡಿದಾಗಲೆಲ್ಲಾ,ಕನ್ವರ್ಷನಲ್ ವಾಯ್ಸ್ ಪೇಮೆಂಟ್ ಸರ್ವಿಸ್ ನೊಂದಿಗೆ ಸಂಯೋಜಿತವಾಗಿರುವ UPI ಐಡಿಯನ್ನು ಸ್ವಯಂಚಾಲಿತವಾಗಿ ಪಡೆಯುತ್ತದೆ.ಬಳಕೆದಾರರ ವಾಯ್ಸ್ ಕಮಾಂಡ್ ಡೀಫಾಲ್ಟ್ UPI ಅಪ್ಲಿಕೇಶನ್ ಮೂಲಕ ಟಿಕೆಟ್ ಪಾವತಿ ವಿನಂತಿಯನ್ನು ಪ್ರಾರಂಭಿಸಲಾಗುತ್ತದೆ.ಪಾವತಿಗಳನ್ನು ಸುರಕ್ಷಿತವಾಗಿ ಮತ್ತು ಹೊಂದಿಕೊಳ್ಳುವಂತೆ ಮಾಡಲು,ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆ ಅಥವಾ UPI ಐಡಿಯನ್ನು ಸಮಯ ಮಿತಿಯೊಳಗೆ ಅಪ್ಡೇಟ್ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ.ಪಾವತಿ ಪೂರ್ಣಗೊಂಡ ನಂತರ ಟಿಕೆಟ್ ಬುಕ್ ಮಾಡಲಾಗುತ್ತದೆ. 

ವಾಯ್ಸ್ ಟಿಕೆಟ್ ಬುಕಿಂಗ್, ಪಾವತಿ ವಿಧಾನ  : 
ಈ ಪಾಲುದಾರಿಕೆಯಲ್ಲಿ IRCTC ಸಹ ಸೇರಿದೆ.ಇದನ್ನು UPI, BharatPe ಸಕ್ರಿಯಗೊಳಿಸಿದ ಕನ್ವರ್ಷನಲ್ ವಾಯ್ಸ್ ಪೇಮೆಂಟ್,IRCTC ಮತ್ತು ಭಾರತೀಯ ರೈಲ್ವೆಗಾಗಿ ಅದರ AI ವರ್ಚುವಲ್ ಅಸಿಸ್ಟೆಂಟ್ AskDISHA ನೊಂದಿಗೆ ಸಂಯೋಜಿಸಲಾಗಿದೆ.ಈ ತಂತ್ರಜ್ಞಾನದ ಸಹಾಯದಿಂದ ಬಳಕೆದಾರರು ತಮ್ಮ ಧ್ವನಿಯನ್ನು ಮಾತ್ರ ಬಳಸಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ.ಈ ಸಂಪೂರ್ಣ ಪ್ರಕ್ರಿಯೆಯು ತುಂಬಾ ಸುಲಭ ಮತ್ತು ವೇಗವಾಗಿರುತ್ತದೆ.ಟಿಕೆಟ್‌ಗಳನ್ನು ಕಾಯ್ದಿರಿಸುವುದರ ಹೊರತಾಗಿ,PNR ಸ್ಥಿತಿಯನ್ನು ಪರಿಶೀಲಿಸಬಹುದು, ಟಿಕೆಟ್‌ಗಳನ್ನು ರದ್ದುಗೊಳಿಸಬಹುದು, ರಿಫಂಡ್ ತೆಗೆದುಕೊಳ್ಳಬಹುದು, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಬಹುದು,ಬುಕಿಂಗ್ ಹಿಸ್ಟರಿ  ಪರಿಶೀಲಿಸಬಹುದು. ಇಷ್ಟು ಮಾತ್ರವಲ್ಲದೆ ಇನ್ನೂ ಅನೇಕ ಕಾರ್ಯಗಳನ್ನು  ಯಾವುದೇ ತೊಂದರೆಯಿಲ್ಲದೆ ಪೂರ್ಣಗೊಳಿಸಬಹುದು. 

ಇದನ್ನೂ ಓದಿ : ಮಲೇರಿಯಾ, ಡೆಂಗ್ಯೂ ಸೊಳ್ಳೆಗಳನ್ನು ಕ್ಷಣದಲ್ಲೇ ಗುರುತಿಸುತ್ತೆ ಈ ಆಪ್:‌ ಈ ಆವಿಷ್ಕಾರಕ್ಕೆ "ಗ್ರೇಟ್‌" ಅಂದ್ರು ಬಿಲ್ ಗೇಟ್ಸ್... ಆ APP ಯಾವುದು ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News