ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ 43 ಇಂಚಿನ ಸ್ಮಾರ್ಟ್ ಟಿವಿ.!

Vu GloLed 43-ಇಂಚಿನ ಟಿವಿ ಬೆಲೆ 29,999  ರೂಪಾಯಿ ಆಗಿದೆ. ಇದು ನವೆಂಬರ್ 27 ರಿಂದ ಅಂದರೆ ಇನ್ನು ನಾಲ್ಕು ದಿನಗಳಲ್ಲಿ ಫ್ಲಿಪ್‌ಕಾರ್ಟ್‌ನಿಂದ ಖರೀದಿಗೆ ಲಭ್ಯವಿರುತ್ತದೆ.

Written by - Ranjitha R K | Last Updated : Nov 23, 2022, 10:51 AM IST
  • ಇದು ಸ್ಮಾರ್ಟ್ ಟಿವಿ ಜಮಾನ.
  • ಟಿವಿ ಖರೀದಿಸುವವರ ಮೊದಲ ಆಯ್ಕೆ ಸ್ಮಾರ್ಟ್ ಟಿವಿಯಾಗಿರುತ್ತದೆ.
  • ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಸಿಗುತ್ತಿದೆ ಸ್ಮಾರ್ಟ್ ಟಿವಿ
ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ 43 ಇಂಚಿನ  ಸ್ಮಾರ್ಟ್ ಟಿವಿ.!  title=
Smart TV Under 40K

ಬೆಂಗಳೂರು : ಇದು ಸ್ಮಾರ್ಟ್ ಟಿವಿ ಜಮಾನ. ಟಿವಿ ಖರೀದಿಸುವವರ ಮೊದಲ ಆಯ್ಕೆ ಸ್ಮಾರ್ಟ್ ಟಿವಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅನೇಕ ಕಂಪನಿಗಳು ಕಡಿಮೆ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಿವೆ. Vu ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ Glo LED TV ಸರಣಿಯನ್ನು ಪ್ರಾರಂಭಿಸಿತು. ಸೆಪ್ಟೆಂಬರ್‌ನಲ್ಲಿ, ಕಂಪನಿಯು 50, 55 ಮತ್ತು 65 ಇಂಚಿನ ಮಾದರಿಗಳನ್ನು ಬಿಡುಗಡೆ ಮಾಡಿತು. ಈಗ ಈ ಬ್ರ್ಯಾಂಡ್ 43 ಇಂಚಿನ ರೂಪಾಂತರವನ್ನು  ಬಿಡುಗಡೆ ಮಾಡಿದೆ. ಇದರ ಬೆಲೆ  ಕೂಡಾ ಕಡಿಮೆ. 

ಭಾರತದಲ್ಲಿ Vu GloLed 43-ಇಂಚಿನ ಟಿವಿ ಬೆಲೆ :
Vu GloLed 43-ಇಂಚಿನ ಟಿವಿ ಬೆಲೆ 29,999  ರೂಪಾಯಿ ಆಗಿದೆ. ಇದು ನವೆಂಬರ್ 27 ರಿಂದ ಅಂದರೆ ಇನ್ನು ನಾಲ್ಕು ದಿನಗಳಲ್ಲಿ ಫ್ಲಿಪ್‌ಕಾರ್ಟ್‌ನಿಂದ ಖರೀದಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ : ನಿಮ್ಮ whatsaap ಸಂದೇಶವನ್ನು ಯಾರಾದರೂ ಕದ್ದು ಓದುತ್ತಿದ್ದಾರೆಯೇ? ಈ ರೀತಿ ಪತ್ತೆ ಹಚ್ಚಿ

Vu GloLed 43-ಇಂಚಿನ ಟಿವಿ ವಿಶೇಷಣಗಳು :
Vu Glo LED TV 43 ಇಂಚಿನ ಈ ಸ್ಮಾರ್ಟ್ ಟಿವಿ, 4K ರೆಸಲ್ಯೂಶನ್ ಅನ್ನು ಹೊಂದಿದೆ. ಇದು 400 ನಿಟ್ಸ್ ಬ್ರೈಟ್‌ನೆಸ್, HDR10, ಡಾಲ್ಬಿ ವಿಷನ್, MEMC ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ನೀಡುತ್ತದೆ. ಇನ್ನು ಆಡಿಯೋ ಬಗ್ಗೆ ಹೇಳುವುದಾದರೆ, ಈ ಟಿವಿಯು DJ-ಕ್ಲಾಸ್ ಬಿಲ್ಟ್-ಇನ್ ಸಬ್ ವೂಫರ್ ಅನ್ನು ಹೊಂದಿದೆ.

Vu GloLed 43-ಇಂಚಿನ ಟಿವಿ ವೈಶಿಷ್ಟ್ಯಗಳು :
ಆಂತರಿಕವಾಗಿ, Vu Glo LED TV 43 ಡ್ಯುಯಲ್-ಕೋರ್ GPU ಮತ್ತು Vu Glo AI ಪ್ರೊಸೆಸರ್ ಜೊತೆಗೆ ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಟಿವಿ 2GB RAM ಮತ್ತು 16GB ಸ್ಟೋರೇಜ್ ಆನ್‌ಬೋರ್ಡ್ನೊಂದಿಗೆ ಬರುತ್ತದೆ.  ಇದು ಗೂಗಲ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ ಮುಂತಾದ  ಪ್ರಿ ಇನ್ಸ್ತಾಲ್ದ್  OTT ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. Vu GloLED TV 43 ವೇರಿಯಬಲ್ ರಿಫ್ರೆಶ್ ರೇಟ್ (VRR) ಮತ್ತು ಗೇಮಿಂಗ್‌ಗಾಗಿ ಆಟೋ ಲೋ  ಲೇಟೆನ್ಸಿ ಮೋಡ್ (ALLM) ಅನ್ನು ಒಳಗೊಂಡಿದೆ. ಟಿವಿಯಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು ಸೇರಿವೆ.

ಇದನ್ನೂ ಓದಿ : Flipkart Offer: ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 12 ಮಿನಿ ಖರೀದಿಯಲ್ಲಿ ಬಂಪರ್ ಡಿಸ್ಕೌಂಟ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News