ನಿರ್ಜಲೀಕರಣಗೊಂಡ ದೇಹವು ಮಲಬದ್ಧತೆಗೆ ಕಾರಣವಾಗುವ ಪ್ರಾಥಮಿಕ ಅಂಶಗಳಲ್ಲಿ ಒಂದಾಗಿದೆ. ನಿಮಗೆ ಮಲಬದ್ಧತೆ ಅನಿಸಿದರೆ ಬೆಳಗ್ಗೆ ಎದ್ದ ನಂತರ ನೀರು ಕುಡಿಯಿರಿ. ಇದು ಮಲವನ್ನು ಮೃದುಗೊಳಿಸಲು ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅಜೀರ್ಣವನ್ನು ತಡೆಗಟ್ಟಲು, ಕಾರ್ಬೊನೇಟೆಡ್ ಪಾನೀಯಗಳ ಬದಲಿಗೆ ತಾಜಾ ರಸವನ್ನು ಕುಡಿಯಿರಿ.
Yoga for constipation : ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಜೀರ್ಣಕಾರಿ ಸಮಸ್ಯೆಯಾಗಿದೆ. ಇದನ್ನು ಸಾಮಾನ್ಯವಾಗಿ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ನಿರ್ವಹಿಸುವುದು ಮತ್ತು ಕ್ರಮೇಣವಾಗಿ ಇದರಿಂದ ಹೊರಬರಬಹುದು. ಯೋಗದಿಂದ ರೋಗ ಮುಕ್ತಿ ಎನ್ನುವ ಮಾತಿನಂತೆ ನಿಮ್ಮ ದೈನಂದಿನ ದಿನಚರಿಯಲ್ಲಿ ಯೋಗಾಸನ ಮಾಡುವುದನ್ನು ರೂಢಿಸಿಕೊಂಡರೆ ಇಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸುವುದಿಲ್ಲ. ಹಾಗಾದರೆ ಈ ಮಲಬದ್ಧತೆಯನ್ನು ನಿವಾರಿಸುವ ಆ ಯೋಗಾಸನಗಳು ಯಾವುವು ಎನ್ನುವುದನ್ನು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.