ಕೋವಿಡ್ -19 ರ ನಂತರದ ಜಾಗತಿಕ ಕ್ರಮವನ್ನು ರೂಪಿಸುವ ಪ್ರಯತ್ನಗಳ ಭಾಗವಾಗಿ ವಿಶ್ವವು ಕೊರೋನವೈರಸ್ ಬಿಕ್ಕಟ್ಟನ್ನು ನಿವಾರಿಸಿದ ನಂತರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸುಧಾರಣೆಗೆ ಭಾರತದ ಕರೆಯನ್ನು ಆಸ್ಟ್ರೇಲಿಯಾ ಬೆಂಬಲಿಸುತ್ತದೆ ಎಂದು ಆಸ್ಟ್ರೇಲಿಯಾದ ಹೈ ಕಮಿಷನರ್- ಬ್ಯಾರಿ ಒಫಾರೆಲ್ ಶುಕ್ರವಾರ ಹೇಳಿದ್ದಾರೆ.
ಕೊರೊನಾ ವೈರಸ್ ಕುರಿತು ಹಲವು ಭ್ರಮೆಗಳು ಹರಡುತ್ತಿದ್ದು, ಅವುಗಳನ್ನು ದೂರಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಇದೀಗ ಮತ್ತೊಮ್ಮೆ ಇಂತಹುದೇ ಒಂದು ಭ್ರಮೆಯನ್ನು ಮತ್ತೆ ದೂರಗೊಳಿಸಲು WHO ಮುಂದೆ ಬಂದಿದೆ.
ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಕ್ಕೆ WHO ಮುಖ್ಯಸ್ಥ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರ ನೀಡಿರುವ ಆರ್ಥಿಕ ಪ್ಯಾಕೇಜ್ ಕ್ರಮವನ್ನು ಸ್ವಾಗತಿಸಿದ್ದಾರೆ.
ಕರೋನವೈರಸ್ ಅನ್ನು ಸೋಲಿಸಲು ದೇಶಗಳು ಲಾಕ್ ಡೌನ್ ಮಾಡಿದರಷ್ಟೇ ಸಾಲುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ತುರ್ತು ತಜ್ಞರು ಭಾನುವಾರ ಹೇಳಿದ್ದಾರೆ, ವೈರಸ್ ಪುನರುತ್ಥಾನಗೊಳ್ಳುವುದನ್ನು ತಪ್ಪಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳು ಅಗತ್ಯವಾಗಿವೆ ಎಂದು ಅವರು ಹೇಳಿದರು.
ಚೀನಾ ಬಳಿಕ ಇಡೀ ವಿಶ್ವಾದ್ಯಂತ ಹರಡಿರುವ ಮಾರಕ ಕರೋನಾ ವೈರಸ್ ಇದೀಗ ಭಾರತದಲ್ಲಿಯೂ ಕೂಡ ಭಯದ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿಗೆ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಸಾಮಾಜಿಕ ಮಧ್ಯಮಗಳಲ್ಲಿ ಹಲವು ವದಂತಿಗಳು ಪಸರಿಸುತ್ತಿವೆ. ಅತ್ತ ಇನ್ನೊಂದೆಡೆ WHO ಕೂಡ ಕೋರೋನಾ ವೈರಸ್ ಅನ್ನು ತಡೆಯಲು ತನ್ನದೇ ಆದ ಅಭಿಯಾನ ಮುಂದುವರೆಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾ ವೈರಸ್ ಗೆ ಅಧಿಕೃತ ಹೆಸರನ್ನು ಇಟ್ಟಿದೆ. ಈ ಮಾರಕ ವೈರಸನ್ನು ಇನ್ಮುಂದೆ ಕೊವಿಡ್ 19 ಹೆಸರಿನಿಂದ ಗುರಿತಿಸಲಾಗುವುದು ಎಂದು WHO ಹೇಳಿದೆ. ವಿಶ್ವಾದ್ಯಂತ ಇದುವರೆಗೆ ಸುಮಾರು 45 ಸಾವಿರ ಜನರಿಗೆ ಈ ವೈರಸ್ ಸೋಂಕು ತಗುಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.