ಕೊರೊನಾ ವೈರಸ್ ನ ಅಧಿಕೃತ ಹೆಸರು ಮತ್ತು ಫುಲ್ ಫಾರ್ಮ್ ಏನು ಗೊತ್ತಾ?

ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೊನಾ ವೈರಸ್ ಗೆ ಅಧಿಕೃತ ಹೆಸರನ್ನು ಇಟ್ಟಿದೆ. ಈ ಮಾರಕ ವೈರಸನ್ನು ಇನ್ಮುಂದೆ ಕೊವಿಡ್ 19 ಹೆಸರಿನಿಂದ ಗುರಿತಿಸಲಾಗುವುದು ಎಂದು WHO ಹೇಳಿದೆ. ವಿಶ್ವಾದ್ಯಂತ ಇದುವರೆಗೆ ಸುಮಾರು 45 ಸಾವಿರ ಜನರಿಗೆ ಈ ವೈರಸ್ ಸೋಂಕು ತಗುಲಿದೆ.

Last Updated : Feb 12, 2020, 01:30 PM IST
ಕೊರೊನಾ ವೈರಸ್ ನ ಅಧಿಕೃತ ಹೆಸರು ಮತ್ತು ಫುಲ್ ಫಾರ್ಮ್ ಏನು ಗೊತ್ತಾ? title=

ನವದೆಹಲಿ:ಕೊರೊನಾ ವೈರಸ್ ಗೆ ಕೊನೆಗೂ ಒಂದು ಅಧಿಕೃತ ಹೆಸರು ಸಿಕ್ಕಿದ್ದು, ಇನ್ಮುಂದೆ ಈ ವೈರಸ್ ಅಧಿಕೃತವಾಗಿ ಕೊವಿಡ್ 19 ಎಂಬ ಹೆಸರಿನಿಂದ ಕರೆಯಲಾಗುವುದು. ಜಾಗತಿಕವಾಗಿ ಇದುವರೆಗೆ ಸುಮಾರು 45,171 ಜನರಿಗೆ ಈ ವೈರಸ್ ನ ಸೋಂಕು ತಗುಲಿದ್ದು, ಸುಮಾರು 1115 ಜನರು ಮೃತಪಟ್ಟಿದ್ದಾರೆ. ಇದರಿಂದ ಮುಂದಿನ ಒಂದು ತಿಂಗಳವರೆಗೆ ಈ ವೈರಸ್ ನ ಪ್ರಭಾವ ಇರಲಿದ್ದು, ಒಂದು ತಿಂಗಳುಗಳ ಕಾಲ ಮತ್ತು ಮುಂದೆಯೂ ಕೂಡ ಈ ವೈರಸನ್ನು ಕೊವಿಡ್ 19 ಹೆಸರಿನಿಂದ ಗುರುತಿಸಲಾಗುವುದು.

ಕೇವಲ ಚೀನಾ ಒಂದೇ ದೇಶದಲ್ಲಿ ಕೊವಿಡ್ 19 ದಾಳಿಗೆ ಸುಮಾರು 44, 653 ಜನ ಅಸ್ವಸ್ಥರಾಗಿದ್ದು, 1113 ಜನ ಮೃತಪಟ್ಟಿದ್ದಾರೆ. ಈ ವೈರಸ್ ಗೆ WHO ಕೊವಿಡ್ 19 ಎಂದು ನಾಮಕರಣ ಮಾಡಿದೆ. ಇದರಲ್ಲಿ CO-ಕೊರೊನಾ, VI-ವೈರಸ್ ಹಾಗೂ D-DISEASE ಆಗಿದ್ದರೆ, 19 ಸಂಖ್ಯೆ 2019ರ ಸೂಚಕವಾಗಿದ್ದು, 2019 ರಲ್ಲಿ ಈ ವೈರಸನ್ನು ಪತ್ತೆಹಚ್ಚಲಾಗಿತ್ತು. ಕಳೆದ ಮಂಗಳವಾರ ಚೀನಾ ಒಂದೇ ದೇಶದಲ್ಲಿ ಈ ಕಾಯಿಲೆಯಿಂದ ಸುಮಾರು 108 ಜನರು ಅಸುನೀಗಿದ್ದಾರೆ. ಒಂದೇ ದಿನದಲ್ಲಿ 100ಕ್ಕೂ ಅಧಿಕ ಜನರು ತುತ್ತಾಗಿರುವುದು ಇದೆ ಮೊದಲ ದಿನವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಚೀನಾದ ಸಾಂಕ್ರಾಮಿಕ ರೋಗಗಳ ತಜ್ಞ ಝಾಂಗ್ ನೈನ್ ಶೈನ್, ಕೊವಿಡ್ 19 ವೈರಸ್ ಈ ತಿಂಗಳಿನಲ್ಲಿ ಇನ್ನಷ್ಟು ಹರಡಲಿದ್ದು, ಇನ್ನೂ ಹಲವರ ಬಳಿ ಪಡೆಯಲಿದೆ ಎಂದಿದ್ದಾರೆ. ಕೊವಿಡ್ 19 ವೈರಸ್ ನ ಸೋಂಕಿನ ಕಾರಣ ಇದುವರೆಗೆ 45,171 ಜನರು ಇದರ ಪ್ರಭಾವಕ್ಕೆ ತುತ್ತಾಗಿದ್ದು, ಸುಮಾರು 1115 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ವಿಶ್ವಾದ್ಯಂತ ಸುಮಾರು 4657 ರೋಗಿಗಳು ಇದುವರೆಗೆ ಚೇತರಿಸಿಕೊಂಡಿದ್ದು, ಇಂದಿಗೂ ಕೂಡ ಪಶ್ಚಿಮದ ಹಲವು ದೇಶಗಳಲ್ಲಿ ಕೊವಿಡ್ 19 ವೈರಸ್ ತಗುಲಿರುವ ರೋಗಿಗಳು ಕಂಡು ಬಂದಿದ್ದಾರೆ ಎಂದು ನೈನ್ ಶೈನ್ ಮಾಹಿತಿ ನೀಡಿದ್ದಾರೆ.

Trending News