ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದರಿಂದ ಬಜೆಟ್ ಸ್ವಲ್ಪ ಹೆಚ್ಚಾಯಿತು. ಇಡೀ ತಂಡದ ಶ್ರಮದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜನವರಿ 6 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹೆಚ್.ಕೆ.ಪ್ರಕಾಶ್.
ಆವವತ್ತರ ದಶಕದಲ್ಲಿ ಡಾ||ರಾಜ್ ಹಾಗೂ ಲೀಲಾವತಿ ಅಭಿನಯಿಸಿದ್ದ "ವೀರಕೇಸರಿ" ಚಿತ್ರದ "ಮೆಲ್ಲುಸಿರೆ ಸವಿಗಾನ" ಹಾಡನ್ನು "ಸ್ಪೂಕಿ ಕಾಲೇಜ್" ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. "ಏಕ್ ಲವ್ ಯಾ" ಚಿತ್ರದ ಖ್ಯಾತಿಯ ರೀಷ್ಮಾ ನಾಣಯ್ಯ ಈ ಸುಮಧುರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಹಾಗೂ ಪತ್ರಕರ್ತ ಬಿ.ಗಣಪತಿ ಅವರು ಈ ಹಾಡನ್ನು ಬಿಡುಗಡೆ ಮಾಡಿದರು.
"ಸ್ಪೂಕಿ ಕಾಲೇಜು" ಈ ಚಿತ್ರ ನೈಜ ಕಥೆಯೇ ಅನ್ನೋ ಪ್ರಶ್ನೆಯನ್ನ ಕೇಳತೊಡಗಿದ್ದಾರೆ ಜನ. ಇದು ರಿಯಲ್ ಸ್ಟೋರಿ ಅನ್ನೋದನ್ನ ಒಂದಷ್ಟು ಸಿನಿಪ್ರೇಮಿಗಳು ಸ್ಪ್ರೆಡ್ ಕೂಡ ಮಾಡುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಸಿನಿಮಾ ರಿಲೀಸ್ ಆದಮೇಲೆ ಸಿಗುತ್ತೆ.
ಹಾರರ್ ಸಿನಿಮಾ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಪ್ರತಿಯೊಬ್ಬರೂ ಕೂಡ ಇಷ್ಟಪಟ್ಟು ಸಿನಿಮಾ ನೋಡುತ್ತಾರೆ. ಕನ್ನಡದಲ್ಲಿ ಈ ಹಿಂದೆ ನಾ ನಿನ್ನ ಬಿಡಲಾರೆ, ಶ್, ದುರ್ಗಾಶಕ್ತಿ, ಆಪ್ತಮಿತ್ರ, ಆಪ್ತರಕ್ಷಕ, ಕಲ್ಪನಾ, ಚಾರುಲತಾ, ಕರ್ವ, ಯು ಟರ್ನ್, ರಂಗಿತರಂಗ ಹೀಗೆ ಸಾಲು ಸಾಲು ಹಾರರ್ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದ್ದವು. ಇದೀಗ ಅದೇ ಲಿಸ್ಟ್ ಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ.
ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಕಾಳಿ ನದಿಯಿಂದ ಆವೃತವಾಗಿರುವ, ದಟ್ಟವಾದ ವನಸಿರಿಯನ್ನು ಹೊಂದಿರುವ ದಾಂಡೇಲಿಯಲ್ಲೂ ಚಿತ್ರೀಕರಣ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ.
ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ "ಸ್ಪೂಕಿ ಕಾಲೇಜ್" ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.