ಕಿಲಿ ಪೌಲ್, ಈ ಹಿಂದೆ ಅನೇಕ ಬಾಲಿವುಡ್ ಹಾಡುಗಳಿಗೆ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. ಇತ್ತೀಚೆಗೆ ವಿಶ್ವ ಖ್ಯಾತಿ ಪಡೆದ ಕೆಜಿಎಫ್-2 ಸಿನಿಮಾದ ಡೈಲಾಗ್ನ್ನು ಡಬ್ ಮಾಡಿ ರೀಲ್ಸ್ ಮಾಡಿದ್ದರು.
ಹಾರ್ದಿಕ್ ಪಾಂಡ್ಯ ಬಹಳ ಸಮಯದಿಂದ ಹೆಚ್ಚು ಬೌಲಿಂಗ್ ಮಾಡಿಲ್ಲ, ಇದೀಗ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಹಾರ್ದಿಕ್ ಪಾಂಡ್ಯರಿಂದ ಬೇಸತ್ತ ಭಾರತ ತಂಡದ ಆಡಳಿತ ಮಂಡಳಿ ಅವರನ್ನು ಟೀಂ ಇಂಡಿಯಾದಿಂದ ಹೊರಹಾಕಿದೆ.
Omicron Symptoms: ಕರೋನಾ ವೈರಸ್ನ ಹೊಸ ರೂಪಾಂತರದಿಂದ ಬಳಲುತ್ತಿರುವ ಮೊದಲ ಲಕ್ಷಣವೆಂದರೆ ಗಂಟಲಿನ ಸಮಸ್ಯೆ. ಇದಲ್ಲದೆ, ಜನರು ಮೂಗಿನ ದಟ್ಟಣೆ ಮತ್ತು ಕೆಳ ಬೆನ್ನುನೋವಿನ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾರೆ.
ಡಿಸೆಂಬರ್ 26 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ಗಳ ಸರಣಿಗೆ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಭಾರತ ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ ಎಂದು ಬಿಸಿಸಿಐ ಶನಿವಾರ ಖಚಿತಪಡಿಸಿದೆ.
India vs South Africa: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಅವರು ಭಾರತ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿಲ್ಲ. ಇದು ತಂಡಕ್ಕೆ ದೊಡ್ಡ ಹೊಡೆತ ನೀಡಬಹುದು. ಅವರು ತಮ್ಮ ಮೊದಲ ಮಗುವಿನ ಜನನದ ಕಾರಣದಿಂದಾಗಿ ತಂಡದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
Omicron in Karnataka: ರಾಜ್ಯದಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಈ ವರೆಗೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ 34 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಭಾರತದ ವೇಗಿ ಇಶಾಂತ್ ಶರ್ಮಾಗೆ ಎರಡು ರೀತಿಯ ಸವಾಲುಗಳು ಎದುರಾಗಿವೆ.ಒಂದು, ಅವರು ತಮ್ಮ ಫಿಟ್ನೆಸ್ ಮಟ್ಟವನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಪೂರೈಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಎರಡನೇದಾಗಿ ಹೊಸದಾಗಿ ಬರುತ್ತಿರುವ ವೇಗಿಗಳ ಜೊತೆಗೆ ಸ್ಪರ್ಧೆ ಮಾಡಬೇಕು.
ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಅಂತಿಮಗೊಳಿಸಲು ಆಯ್ಕೆಗಾರರು ಭೇಟಿಯಾದಾಗ ಭಾರತ ಏಕದಿನ ನಾಯಕನಾಗಿ ವಿರಾಟ್ ಕೊಹ್ಲಿ ಅವರ ಭವಿಷ್ಯದ ನಿರ್ಧಾರವನ್ನು ಈ ವಾರ ತೆಗೆದುಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಹೊಸ ಕೋವಿಡ್-19 ರೂಪಾಂತರವಾಗಿರುವ ಓಮಿಕ್ರಾನ್ ಅನ್ನು ನಿಭಾಯಿಸಲು ವಿವಿಧ ದೇಶಗಳು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿರುವಾಗ, ಈ ಹಿಂದೆ ಪತ್ತೆಯಾದ ಡೆಲ್ಟಾ ರೂಪಾಂತರ ಹೋಲಿಸಿದರೆ ಸಾಕಷ್ಟು ಸೌಮ್ಯವಾಗಿರುವ ರೋಗಲಕ್ಷಣಗಳ ಬಗ್ಗೆ ಜನರಿಗೆ ಈಗ ಎಚ್ಚರಿಕೆ ನೀಡಲಾಗಿದೆ.
Omicron Variant: ಇದೀಗ ಭಾರತದಲ್ಲಿಯೂ ಕೂಡ ಮೂರನೇ ಡೋಸ್ (Booster Dose) ಕರೋನಾ ಲಸಿಕೆ (Coronavirus Vaccine) ನೀಡಲಾಗುವುದೇ? ಬಲ್ಲ ಮೂಲಗಳು ಹೇಳುವ ಪ್ರಕಾರ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದ (South Africa)ನಂತರ, ಅನೇಕ ದೇಶಗಳಲ್ಲಿ ಕಂಡುಬರುವ ಓಮಿಕ್ರಾನ್ ರೂಪಾಂತರವು (Coronavirus New Strain) ಕಳವಳವನ್ನು ಉಂಟುಮಾಡಿದೆ.
Home Ministry Advisory On Omicron: ಕೇಂದ್ರ ಗೃಹ ಸಚಿವಾಲಯವು ಕೋವಿಡ್-19 (Covid-19) ರ ಹೊಸ ರೂಪಾಂತರಿ ಓಮಿಕ್ರಾನ್ (Omicron) ಬಗ್ಗೆ ಗಂಭೀರವಾಗಿದೆ. . ಇದುವರೆಗೆ ವಿಶ್ವಾದ್ಯಂತದ ಸುಮಾರು 17 ದೇಶಗಳಲ್ಲಿ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಕಂಡುಬಂದಿವೆ.
Omicron Is Not A Severe Variant - ಕರ್ನಾಟಕ ಆರೋಗ್ಯ ಸಚಿವ (Karnataka Health Minister) ಡಾ. ಕೆ ಸುಧಾಕರ್ (Dr. K.Sudhakar) ಅವರು ಕೊರೊನಾ ಹೊಸ ರೂಪಾಂತರಿ 'ಓಮಿಕ್ರಾನ್; ಕುರಿತು ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ (South Africa) ವೃತ್ತಿಪರ ವೈದ್ಯರಾಗಿರುವ ತನ್ನ ಸ್ನೇಹಿತನೊಂದಿಗೆ ತಾವು ಓಮಿಕ್ರಾನ್ ಕುರಿತು ಚರ್ಚೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.