ಹೆಚ್ಚಿದ ಆತಂಕ... ಕರ್ನಾಟಕದಲ್ಲಿ ಮತ್ತೊಂದು Omicron ಪ್ರಕರಣ ಪತ್ತೆ

Omicron in Karnataka: ರಾಜ್ಯದಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಈ ವರೆಗೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ 34 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Edited by - Zee Kannada News Desk | Last Updated : Dec 12, 2021, 02:14 PM IST
  • ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ದೃಢ
  • ಇದು ಕರ್ನಾಟಕದಲ್ಲಿ ವರದಿಯಾದ ಮೂರನೇ ಓಮಿಕ್ರಾನ್ ಪ್ರಕರಣ
  • ಈ ಮೂಲಕ ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 36 ಕ್ಕೆ ಏರಿಕೆ
ಹೆಚ್ಚಿದ ಆತಂಕ... ಕರ್ನಾಟಕದಲ್ಲಿ ಮತ್ತೊಂದು Omicron ಪ್ರಕರಣ ಪತ್ತೆ title=
ಓಮಿಕ್ರಾನ್ ಪ್ರಕರಣ

ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ  34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಇದು ಕರ್ನಾಟಕದಲ್ಲಿ ವರದಿಯಾದ ಮೂರನೇ ಓಮಿಕ್ರಾನ್ (Third case of Omicron in Karnataka) ಪ್ರಕರಣವಾಗಿದೆ. 

ಇಂದು ಕರ್ನಾಟಕ, ಪಂಜಾಬ್​ ಹಾಗೂ ಆಂಧ್ರಪ್ರದೇಶ ಸೇರಿ ಒಟ್ಟು 3 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು (Omicron in Karnataka), ಈ ಮೂಲಕ ಭಾರತದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 36 ಕ್ಕೆ ಏರಿಕೆಯಾಗಿದೆ. 

ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ 34 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

"ಅವರನ್ನು ಪ್ರತ್ಯೇಕಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 5 ಪ್ರಾಥಮಿಕ ಮತ್ತು 15 ಮಾಧ್ಯಮಿಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ. ಎಲ್ಲ ಸಂಪರ್ಕಿತರ ಸ್ಯಾಂಪಲ್ಸ್‌ ಪಡೆದು ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ರವಾನಿಸಲಾಗಿದೆ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ತಿಳಿಸಿದ್ದಾರೆ.

 

 

ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ‘ಒಮಿಕ್ರಾನ್’ ಆತಂಕ, ಟೆಸ್ಟಿಂಗ್ ಹೆಚ್ಚಿಸಿದ ಬಿಬಿಎಂಪಿ..!

Trending News