ನವದೆಹಲಿ: ಹೊಸ ಕೋವಿಡ್-19 ರೂಪಾಂತರವಾಗಿರುವ ಓಮಿಕ್ರಾನ್ ಅನ್ನು ನಿಭಾಯಿಸಲು ವಿವಿಧ ದೇಶಗಳು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿರುವಾಗ, ಈ ಹಿಂದೆ ಪತ್ತೆಯಾದ ಡೆಲ್ಟಾ ರೂಪಾಂತರ ಹೋಲಿಸಿದರೆ ಸಾಕಷ್ಟು ಸೌಮ್ಯವಾಗಿರುವ ರೋಗಲಕ್ಷಣಗಳ ಬಗ್ಗೆ ಜನರಿಗೆ ಈಗ ಎಚ್ಚರಿಕೆ ನೀಡಲಾಗಿದೆ.
ಆದರೆ ದಕ್ಷಿಣ ಆಫ್ರಿಕಾದ ಕೆಲವು ಪ್ರಮುಖ ವಿಜ್ಞಾನಿಗಳು ಹೊಸ ರೂಪಾಂತರವು ಜ್ವರ ಅಥವಾ ದೇಹದ ನೋವಿನಂತಹ ಸೌಮ್ಯವಾದ ಅನಾರೋಗ್ಯವನ್ನು ಮಾತ್ರ ಉಂಟುಮಾಡುತ್ತದೆ ಈಗಲೇ ನಿರ್ಧರಿಸುವುದು ಕಷ್ಟ ಎಂದು ಹೇಳುತ್ತಾರೆ.
ಇದನ್ನೂ ಓದಿ:"ನಿಮಗೆ 24 ಗಂಟೆಗಳನ್ನು ನೀಡುತ್ತಿದ್ದೇವೆ": ದೆಹಲಿ ಮಾಲಿನ್ಯದ ಕುರಿತು ಸರ್ಕಾರಕ್ಕೆ ಸುಪ್ರೀಂ ಕಠಿಣ ಎಚ್ಚರಿಕೆ
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ರೂಪಾಂತರವನ್ನು ಇಲ್ಲಿಯವರೆಗೆ ಅತ್ಯಂತ ಪ್ರಬಲವಾದ ರೂಪಾಂತರವೆಂದು ಘೋಷಿಸಲಾಗಿದೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ (ಎನ್‌ಐಸಿಡಿ) ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಪ್ರಕರಣಗಳು 8,561 ದ್ವಿಗುಣಗೊಂಡಿದೆ. ಓಮಿಕ್ರಾನ್ ರೂಪಾಂತರದ ಮೊದಲ ಘೋಷಣೆಯನ್ನು ನವೆಂಬರ್ 25 ರಂದು ಮಾಡಲಾಯಿತು.
ಇದನ್ನೂ ಓದಿ: ಕೊರೊನಾ ಭೀತಿ: ಕೆನಡಾ ವನ್ಯಜೀವಿಗಳಲ್ಲಿ ಮೊದಲ COVID-19 ಪ್ರಕರಣ ಪತ್ತೆ
ಚೀನಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಂತಹ ಇತರ ದೇಶಗಳಿಗೆ ಹೋಲಿಸಿದರೆ ದಕ್ಷಿಣ ಆಫ್ರಿಕಾದಲ್ಲಿ ವ್ಯಾಕ್ಸಿನೇಷನ್ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂಬುದು ಈ ಹೊಸ ರೂಪಾಂತರಕ್ಕೆ ಒಂದು ಪ್ರಮುಖ ಕಾರಣವಾಗಿದೆ.1.3 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಖಂಡವು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿರುವ ಶೇ 6.7% ಜನರನ್ನು ಮಾತ್ರ ಹೊಂದಿದೆ.
ಇದನ್ನೂ ಓದಿ : Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.